Advertisement

ತುಳುನಾಡಿನ ನಿರೀಕ್ಷಾ!

11:00 PM May 29, 2019 | Sriram |

ಕುಡ್ಲದ ಪ್ರತಿಭೆಗಳು ಎಲ್ಲ ಹಂತ ಹಾಗೂ ಪ್ರದೇಶದಲ್ಲಿ ತಮ್ಮ ಸಾಧನೆ ತೋರುತ್ತಿದ್ದಾರೆ. ಈಗ ಪುತ್ತೂರಿನ ಚಿತ್ತರಂಜನ್‌ ಶೆಟ್ಟಿ ಮತ್ತು ಸುಜಾತಾ ದಂಪತಿಯ ಪುತ್ರಿ ನಿರೀಕ್ಷಾ ಶೆಟ್ಟಿ ಹೊಸ ನಿರೀಕ್ಷೆಯೊಂದಿಗೆ ತುಳು ಸಿನೆಮಾರಂಗದಲ್ಲಿ ಸಾಧನೆ ಮಾಡುವ ತುಡಿತದಲ್ಲಿದ್ದಾರೆ.


Advertisement

‘ಅಪ್ಪೆ ಟೀಚರ್‌’ ಸಿನೆಮಾದಲ್ಲಿ ನಟಿಸಿದ ಬಳಿಕ ತುಳು ಚಿತ್ರರಂಗದ ಗಮನ ಸೆಳೆದಿದ್ದ ಇವರು, ಈಗ ‘ಲಾಸ್ಟ್‌ ಬೆಂಚ್’, ‘ರಡ್ಡ್ ಎಕ್ರೆ’, ‘ಆಟಿಡೊಂಜಿ ದಿನ’, ‘ಇಲ್ಲೊಕ್ಕೆಲ್’ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ತನ್ನ ನಟನೆಯಿಂದ ಎಲ್ಲರ ಗಮನ ಸೆಳೆಯುವ ಮೂಲಕ ತಾನೋರ್ವ ಭರವಸೆಯ ನಟಿ ಎಂಬುದನ್ನು ಸಾಬೀತುಪಡಿಸಲು ಹೊರಟಿದ್ದಾರೆ.

ಎಳವೆಯಲ್ಲೇ ಯಕ್ಷಗಾನದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಇವರು, ಸಂಗೀತ, ನೃತ್ಯ, ಜಾನಪದ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ‘ಅಭಿನಯ’ ಅವರ ಅತಿ ಆಸಕ್ತಿಯ ವಿಷಯ ವಾಗಿದ್ದರಿಂದ ಇಲ್ಲಿ ಉತ್ತಮ ಸಾಧನೆ ಮಾಡಬೇಕು ಎಂಬ ಬಯಕೆಯಲ್ಲಿದ್ದಾರೆ.

ಮೈಸೂರಿನ ಯುವ ದಸರಾದಲ್ಲಿ ಭಾಗವಹಿಸಿದ್ದ ಅವರು ದಿಲ್ಲಿಯ ಗಣರಾಜ್ಯೋತ್ಸವದಲ್ಲಿ ನಡೆದ ಪರೇಡ್‌ನ‌ಲ್ಲಿ ನೃತ್ಯದ ಮೂಲಕ ಮಿಂಚಿದ್ದರು. 2015- 17ರಲ್ಲಿ ಪ್ರಿನ್ಸೆಸ್‌ ಆಫ್‌ ಪರ್ಲ್ನಲ್ಲಿ ಎರಡು ಬಾರಿ ಪ್ರಶಸ್ತಿ ಪಡೆದಿದ್ದರು. ಬಂಟ್ವಾಳದಲ್ಲಿ ಜರಗಿದ್ದ ಇಂಟರ್‌ನ್ಯಾಶನಲ್ ಬಂಟ್ಸ್‌ ವೆಲ್ಫೇರ್‌ ಟ್ರಸ್ಟ್‌ನ ಸ್ಪರ್ಧೆ, 2017ರಲ್ಲಿ ಮಿಸ್‌ ಬಂಟ್ ಸ್ಪರ್ಧೆಯಲ್ಲಿ ಬೆಸ್ಟ್‌ ಪರ್ಸನಾಲಿಟಿ ಅವಾರ್ಡ್‌, ಚಿಕ್ಕಮಗಳೂರಿನಲ್ಲಿ ನಡೆದಿದ್ದ ಮಿಸ್‌ ಮಲ್ನಾಡ್‌ ಸ್ಪರ್ಧೆಯಲ್ಲಿ ಬೆಸ್ಟ್‌ ಕ್ಯಾಟ್ವಾಕರ್‌, ಮೈಸೂರಿನಲ್ಲಿ ಜರಗಿದ್ದ ಮಿಸ್‌ ಕರ್ನಾಟಕ 2016ರಲ್ಲಿ 4ನೇ ಸ್ಥಾನ, ಪುತ್ತೂರಿನಲ್ಲಿ ಮಿಸ್‌ ಬಂಟ್ 2017 ಹಾಗೂ ಅದೇ ವರ್ಷ ನಡೆದಿದ್ದ ಮುಂಬಯಿ ಬಂಟರ ಆಕಾಂಕ್ಷಾ ಸ್ಪರ್ಧೆಯಲ್ಲಿ ಮಿಸ್‌ ಪಾಪ್ಯುಲರ್‌ ಬಂಟ್ ಅವಾರ್ಡ್‌ ಪಡೆದುಕೊಂಡಿದ್ದಾರೆ. ಬ್ರಿಕ್ಸ್‌ ಸಮ್ಮೇಳನದಲ್ಲಿ ಭಾರತೀಯ ಪ್ರತಿನಿಧಿಯಾಗಿ ಭಾಗವಹಿಸಿ ಗಮನ ಸೆಳೆದಿದ್ದ ಅವರು ರಾಷ್ಟ್ರೀಯ ಸ್ವಯಂಸೇವಕಿಯಾಗಿ ದಿಲ್ಲಿಯ ಆರ್ಮಿ ಪರೇಡ್‌ನ‌ಲ್ಲಿ ಧ್ವಜವಂದನೆ ಸ್ವೀಕರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next