Advertisement

ಮ್ಯಾಕ್‌ಬೆತ್‌ ನಾಟಕಾಧಾರಿತ ಕಥೆ ‘ಪಡ್ಡಾಯಿ’

10:54 PM Sep 10, 2019 | Team Udayavani |

ಪಡ್ಡಾಯಿ ತುಳುವಿನಲ್ಲಿ ಬಂದಂತಹ ಒಂದು ವಿಭಿನ್ನ ಪ್ರಯತ್ನದ ಕಲಾತ್ಮಕ ಚಿತ್ರ. ಖ್ಯಾತ ನಾಟಕಗಾರ ಶೇಕ್ಸ್‌ಪಿಯರ್‌ ಅವರ ಮ್ಯಾಕ್‌ಬೆತ್‌ ನಾಟಕಾಧಾರಿತ ಈ ಸಿನೆಮಾ ದೇಶ, ವಿದೇಶಗಳಲ್ಲಿ ಪ್ರಶಸ್ತಿಯ ಗರಿ ಮುಡಿಗೇರಿಸಿದ್ದು ಈ ಚಿತ್ರದ ನಿರ್ದೇಶಕ ಅಭಯಸಿಂಹ ಮತ್ತವರ ಚಿತ್ರ ತಂಡದ ಸಾಧನೆಯೆ ಸರಿ. ‘ಪಡ್ಡಾಯಿ’ಪುಸ್ತಕದಲ್ಲಿ ಪಡ್ಡಾಯಿ ಸಿನೆಮಾದ ಹಾದಿಯನ್ನು ವಿಸ್ತೃತವಾಗಿ ಅಭಯಸಿಂಹ ಅವರು ವಿವರಿಸಿದ್ದಾರೆ. ಈ ಪುಸ್ತಕದ ಮುನ್ನುಡಿಯನ್ನು ಗಿರೀಶ್‌ ಕಾಸರವಳ್ಳಿ ಬರೆದಿದ್ದು ‘ಅಭಯಸಿಂಹ ಅವರ ಚಿತ್ರದ ಬಗೆಗಿನ ಒಳನೋಟಗಳನ್ನು ಮತ್ತು ಇದೊಂದು ನಾಟಕಾಧಾರಿತ ಸಿನೆಮಾವೆಂದು ನಿರ್ದೇಶಕರು ಮೊದಲೇ ಹೇಳಿಕೊಂಡ ಹೊರತಾಗಿಯೂ ಈ ಸಿನೆಮಾದಲ್ಲಿ ಅನೇಕ ಹೊಸ ಅಂಶಗಳು ಇವೆ’ ಎಂದಿದ್ದಾರೆ.

Advertisement

ಘಟನೆ: 1

ಇಲ್ಲಿ ನಿರ್ದೇಶಕರು ಸಿನೆಮಾ ಹುಟ್ಟಿದ ರೀತಿಯನ್ನು ವಿವರಿಸುತ್ತಾ, ಮ್ಯಾಕ್‌ಬೆತ್‌ ಕಥೆಯನ್ನು ವಿಶ್ವದ ಅನೇಕ ಹೆಸರಾಂತ ನಿರ್ದೇಶಕರು ಹೊಸ ಹೊಸ ರೀತಿಯಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಆ ಕಾರಣಕ್ಕಾಗಿ ಮ್ಯಾಕ್‌ಬೆತ್‌ ಕಥೆಯನ್ನು ಮಂಗಳೂರಿನ ಸೊಗಡಿಗೆ ತಕ್ಕಂತೆ ದೃಶ್ಯ ಬರೆಯುವಲ್ಲಿ ಇಲ್ಲಿನ ಮೊಗವೀರ ಕುಟುಂಬ, ಧೈವಾರಾಧನೆ, ಸಮುದ್ರ ಮುಂತಾದ ಅನೇಕ ವಿಷಯಗಳು ಹೇಗೆ ಸಹಾಯವಾಯಿತು ಅನ್ನುವುದನ್ನು ಇಲ್ಲಿ ವಿವರಿಸುತ್ತಾರೆ. ಸಿನೆಮಾ ನೋಡುವಾಗ ನಾವು ಗಮನಿಸಿರದ ಅನೇಕ ವಿಷಯಗಳನ್ನು ಇಲ್ಲಿ ಹೇಳುವಾಗ ದೃಶ್ಯದ ಶ್ರೀಮಂತಿಕೆಯ ಬಗ್ಗೆ ಮೆಚ್ಚುಗೆಯೆನಿಸುತ್ತದೆ.

ಘಟನೆ: 2
ಸಿನೆಮಾಕ್ಕಾಗಿ ಇಲ್ಲಿನ ಕಲಾವಿದರನ್ನು ಹೊರತಾಗಿ ಹೊಸ ಕಲಾವಿದರ ಆಯ್ಕೆ ಏಕೆ ಮತ್ತು ಹೇಗೆ ಎನ್ನುವುದನ್ನು ಈ ಪುಸ್ತಕದಲ್ಲಿ ತಿಳಿಸಿದ್ದಾರೆ ಮತ್ತು ಪಾತ್ರ ವರ್ಗವನ್ನು ಸಿದ್ಧಪಡಿಸಿದ ರೀತಿ ಅವರು ಪಟ್ಟ ಶ್ರಮ ಸಿನೆಮಾಸಕ್ತರನ್ನು ಬಿಟ್ಟು ಎಲ್ಲಾ ವರ್ಗದ ಓದುಗರಿಗೂ ಕುತೂಹಲಕಾರಿಯಾಗಿದೆ. ತಮ್ಮ ನಟನೆಯಲ್ಲಿ ಪ್ರಬುದ್ಧತೆ ಕಾಣಲು ಮಲ್ಪೆ ಕಡಲ ತೀರಕ್ಕೆ ತೆರಳಿ ಅಲ್ಲಿನ ಮೊಗವೀರ ಸಮುದಾಯದ ಮಾತು, ನಡತೆಗಳನ್ನು ಗಮನಿಸಿ ಅಳವಡಿಸಿಕೊಂಡದ್ದು ಸಿನೆಮಾ ನಿರ್ಮಾಣ ಒಂದು ಧ್ಯಾನ ಎಂದು ಅರಿವಿಗೆ ಬರುತ್ತದೆ.

ಘಟನೆ: 3

Advertisement

ಈ ಪುಸ್ತಕವು ಸಿನೆಮಾ ಮಾಡುವವರಿಗೆ ಅನೇಕ ವಿಷಯಗಳನ್ನು ಕಲಿಸಿಕೊಡುತ್ತದೆ. ಸಿನೆಮಾಕ್ಕಾಗಿ ಯಾವ ರೀತಿ ಅಧ್ಯಯನ ಮಾಡಬೇಕು, ಸಿನೆಮಾದಲ್ಲಿ ಅಪ್ಡೇಟ್ ತಂತ್ರಜ್ಞಾನದ ಅಳವಡಿಕೆ ಹೇಗೆ ಮತ್ತು ಈ ಇಡೀ ಸಿನೆಮಾದ ಸ್ಕ್ರಿಪ್ಟ್ ಅನ್ನು ಒದಗಿಸಿರುವುದು ಇಲ್ಲಿನ ತುಳು ಚಿತ್ರರಂಗ ಮತ್ತು ಹೊಸ ನಿರ್ದೇಶಕರಿಗೆ ಹೊಸ ಪಠ್ಯದಂತೆ ಭಾಸವಾಗುತ್ತದೆ.

ವಿಶ್ವಾಸ್‌ ಅಡ್ಯಾರ್‌

Advertisement

Udayavani is now on Telegram. Click here to join our channel and stay updated with the latest news.

Next