Advertisement

ಸರಕಾರಿ ಶಾಲೆ ನಿರ್ಮಾಪಕರಿಂದ ಬರಲಿದೆ ತುಳು ಸಿನೆಮಾ 

12:33 PM Oct 25, 2018 | |

ರಿಷಬ್‌ ಶೆಟ್ಟಿ ನಿರ್ದೇಶನದ ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ’ ಸಿನೆಮಾ ಸೂಪರ್‌ಹಿಟ್‌ ಆಗುತ್ತಿದ್ದಂತೆ ಚಿತ್ರದ ನಿರ್ಮಾಪಕ ರವಿ ರೈ ಕಳಸ ಖುಷಿಯಲ್ಲಿದ್ದಾರೆ.  ಕನ್ನಡ ಸಿನೆಮಾ ಕ್ಷೇತ್ರದಲ್ಲಿ ಇನ್ನಷ್ಟು ಮುಂದುವರಿಯುವ ಬಗ್ಗೆ ಆಸಕ್ತಿ ತೋರಿರುವ ಅವರು ಈಗ ಕೋಸ್ಟಲ್‌ ವುಡ್‌ನ‌ಲ್ಲೂ ಇನ್ನೊಂದು ಸಿನೆಮಾ ಮಾಡುವ ತವಕದಲ್ಲಿದ್ದಾರೆ.  ರವಿ ರೈ ಕಳಸ ಮೂಲತಃ ಪುತ್ತೂರು ತಾಲೂಕಿನವರು. ಪ್ರಸ್ತುತ ಕಳಸದಲ್ಲಿ ರೆಸಾರ್ಟ್‌ ಮತ್ತು ಹೊಟೇಲ್‌ ಉದ್ಯಮಿಯಾಗಿದ್ದಾರೆ. ಇತ್ತೀಚೆಗೆ ತೆರೆಕಂಡ ‘ಮೈ ನೇಮ್‌ ಈಸ್‌ ಅಣ್ಣಪ್ಪ’ ತುಳು ಸಿನೆಮಾದ ಸಹ ನಿರ್ಮಾಪಕರು ಕೂಡ ಹೌದು.

Advertisement

ಈಗ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನ್ನಡ ಸಿನೆಮಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದಂತೆ ಇನ್ನಷ್ಟು ಭಿನ್ನ ಕಥಾನಕಗಳ ಸಿನೆಮಾ ಮಾಡುವ ಬಗ್ಗೆ ಅವರು ಉತ್ಸುಕತೆ ತೋರಿದ್ದಾರೆ. ಕನ್ನಡ ಹಾಗೂ ತುಳುವಿನಲ್ಲಿ ಮತ್ತೆ ಸಿನೆಮಾ ಮಾಡುವ ಬಗ್ಗೆ ಅವರು ನಿರ್ಧರಿಸಿದ್ದಾರೆ. ಸರಕಾರಿ ಶಾಲೆಯ ಯಶಸ್ಸಿನ ಬಳಿಕ ಹಲವಾರು ಜನರು ಕಥೆ ಹಿಡಿದುಕೊಂಡು ಇವರನ್ನು ಸಂಪರ್ಕಿಸಿದ್ದಾರೆ. ಆದರೆ ಗಟ್ಟಿತನ ಇಲ್ಲದ ಕಥೆಯತ್ತ ಇವರು ಗಮನ ಹರಿಸುವುದಿಲ್ಲ.

ದರ್ಶನ್‌ ಅವರನ್ನು ಬಳಸಿಕೊಂಡು ಒಂದು ಸಿನೆಮಾ ಮಾಡಬೇಕು ಎಂಬ ಆಸೆಯೂ ಇವರಿಗಿದೆ. ತುಳುವಿನಲ್ಲಿ ಒಂದು ಉತ್ತಮ ಸಿನೆಮಾವನ್ನು ಮಾಡಬೇಕು ಹಾಗೂ ತುಳುವರನ್ನೇ ಬಳಸಿಕೊಂಡು ಮಾಡಬೇಕು ಎಂಬ ಆಸೆ ಹೊಂದಿದ್ದಾರೆ. ಕೇವಲ ಹಾಸ್ಯಕ್ಕಷ್ಟೇ ತುಳು ಸಿನೆಮಾ ಮೀಸಲಾಗಬಾರದು. ಉತ್ತಮ ಕಥೆ ಹೊಂದಿರುವ ಸಿನೆಮಾಗಳತ್ತ ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಆಗಬೇಕು. ಜತೆಗೆ ತುಳುವರನ್ನೇ ಗರಿಷ್ಠ ಸಂಖ್ಯೆಯಲ್ಲಿ ಬಳಸಿ ಸಿನೆಮಾ ಮಾಡಬೇಕು ಎಂಬ ಹಂಬಲ ಅವರದ್ದು.

Advertisement

Udayavani is now on Telegram. Click here to join our channel and stay updated with the latest news.

Next