Advertisement

ತುಳು ಭಾಷಾ ಸಂಸ್ಕೃತಿ ಅನನ್ಯವಾದುದು: ಡಾ|ಕೆ. ಚಿನ್ನಪ್ಪ ಗೌಡ

08:28 PM Jul 28, 2019 | Sriram |

ಮೂಡುಬಿದಿರೆ: ಕನ್ನಡ, ಇಂಗ್ಲಿಷ್‌ ಭಾಷೆಗಳೇ ಶ್ರೇಷ್ಠ ಎಂಬುದು ಭ್ರಮೆ. ತುಳು ಭಾಷೆಯಲ್ಲಿ ತೌಳವ ಸಂಸ್ಕೃತಿಗೆ ಸಂಬಂಧಿಸಿದ ಪದ, ನುಡಿಸಿರಿಯೇ ಅಡಗಿದೆ. ಅದಕ್ಕೆ ಕನ್ನಡದಲ್ಲಾಗಲೀ, ಇಂಗ್ಲಿಷ್‌ನಲ್ಲಾಗಲೀ ಸಮಾನಾರ್ಥಕ ಪದಗಳು ಸಿಗುತ್ತಿಲ್ಲ ಎನ್ನುವುದರಲ್ಲೇ ತುಳು ಭಾಷಾ ಶ್ರೀಮಂತಿಕೆಯನ್ನು ಗಮನಿಸಬಹುದು ಕರ್ನಾಟಕ ಜಾನಪದ ವಿ.ವಿ. ನಿವೃತ್ತ ಉಪಕುಲಪತಿ ಡಾ| ಕೆ. ಚಿನ್ನಪ್ಪ ಗೌಡ ಹೇಳಿದರು.

Advertisement

ಆಳ್ವಾಸ್‌ ತುಳು ಸಂಸ್ಕೃತಿ ಅಧ್ಯಯನ ಕೇಂದ್ರದ ಪ್ರಸಕ್ತ ವರ್ಷದ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.ಯಾವುದೇ ಭಾಷೆ ಮತ್ತೂಂದು ಭಾಷೆಗೆ ವಿರೋಧಿಯಲ್ಲ. ವ್ಯತ್ಯಾಸಗಳು ಸಹಜ. ನಾವು ಜಗದಗಲ ಬೆಳೆಯುವ ಮುನ್ನ ನಾವಿರುವ ತಾಣದ ಭಾಷೆ, ಸಂಸ್ಕೃತಿಗಳ ಬೇರುಗಳೊಂದಿಗೆ ಗಟ್ಟಿಯಾದಾಗಲೇ ನಮ್ಮ ವ್ಯಕ್ತಿತ್ವ ಅರಳುತ್ತದೆ ಎಂದರು.

ಸಂಸ್ಥೆಯ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅಧ್ಯಕ್ಷತೆ ವಹಿಸಿ ಮಾತನಾಡಿ, ತುಳು ಸಾಹಿತ್ಯ ಅಕಾಡೆಮಿ ಸ್ಥಾಪನೆ, ಉಜಿರೆಯಲ್ಲಿ ವಿಶ್ವ ತುಳು ಸಮ್ಮೇಳನ ಇವೆಲ್ಲ ನಡೆದ ಬಳಿಕ ತುಳುವಿನ ಖ್ಯಾತಿ ವಿಶ್ವದೆಲ್ಲೆಡೆ ಹರಡಿಹೋಗಿದೆ. ತುಳು ಭಾಷೆ ಮತ್ತು ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳಾಗಿವೆ ಎಂದರು.

ಪ್ರಾಂಶುಪಾಲ ಡಾ| ಕುರಿಯನ್‌, ಆಡಳಿತಾಧಿಕಾರಿ ಪ್ರೊ| ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ಕೇಂದ್ರದ ಸಂಯೋಜಕ ಡಾ| ಯೋಗೀಶ್‌ ಕೈರೋಡಿ ಸ್ವಾಗತಿಸಿ, ವೀಕ್ಷಿತಾ ಶೆಟ್ಟಿ ನಿರೂಪಿಸಿದರು. ನಮಿತಾ ವಂದಿಸಿದರು. ಅನಂತರ ತುಳು ಸಾಂಸ್ಕೃತಿಕ ಕಾರ್ಯಕ್ರಮ ಸಂಯೋಜಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next