Advertisement

ತುಳು ಭಾಷೆ ನಿರ್ಲಕ್ಷ  ಸಲ್ಲದು: ಜೋಗಿಲ

11:50 PM Apr 03, 2019 | sudhir |

ಕಾಸರಗೋಡು: ತುಳು ಭಾಷೆ ಪಂಚ ದ್ರಾವಿಡ ಭಾಷೆಗಳಲ್ಲಿ ಒಂದು. ಭಾಷಾವಾರು ಪ್ರಾಂತ್ಯಗಳ ವಿಂಗಡನೆ ಯಾದಾಗ ತುಳು ಭಾಷೆಯು ಕರ್ನಾಟಕದ ಅಧಿಕೃತ ಭಾಷೆಯಾಗಿ ಕರ್ನಾಟಕದಲ್ಲಿ ಉಳಿದುಕೊಂಡಿತ್ತು. ಆದರೆ ಸರಕಾರಗಳು ತುಳು ಭಾಷೆಯನ್ನು ನಿರ್ಲಕ್ಷಿಸುತ್ತಿರುವುದು ಖೇದಕರ ಎಂದು ಅಖೀಲ ಭಾರತ ಲೋಕ ಕಲಾ ಪರಿಷತ್ತಿನ ಕಾರ್ಯದರ್ಶಿ ಜೋಗಿಲ ಸಿದ್ದರಾಜು ಅವರು ಹೇಳಿದರು.

Advertisement

ಅವರು ಬ್ಯಾಂಕಾಕ್‌ನಲ್ಲಿ ಸಂಭ್ರಮ ಬೆಂಗಳೂರು ತುಳು ವರ್ಲ್ಡ್ ಮಂಗಳೂರು ಮತ್ತು ಬ್ಯಾಂಕಾಕ್‌ ತುಳು ಕೂಟ, ತಾಯಿ ಕನ್ನಡ ಬಳಗ ಥಾçಲ್ಯಾಂಡ್‌ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ತುಳು ಕನ್ನಡ ಸ್ನೇಹ ಸಮೇ¾ಳನ -2019 ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬ್ಯಾಂಕಾಕ್‌ ತುಳುಕೂಟದ ಅಧ್ಯಕ್ಷ ನವೀನ್‌ ರೋಸ್‌ ಪಿಂಟೋ, ಗ್ಲೋಬಲ್‌ ಬಿಸಿನೆಸ್‌ ಗ್ರೂಪಿನ ಚೇರ್ಮನ್‌ ಡಾಕ್ಟರ್‌ ವಿನೋದ್‌ ಕುಮಾರ್‌, ತಾಯಿ ಕನ್ನಡ ಬಳಗದ ಸುಬ್ರಹ್ಮಣ್ಯ ನೀಲ ಕೇರಿ, ಜನಪದ ಹಾಡುಗಾರ ಶಂಕರ್‌ ಭಾರತೀಪುರ, ಸಾಹಿತಿ ಡಾಕ್ಟರ್‌ ಕಾ.ವೆಂ. ಶ್ರೀನಿವಾಸಮೂರ್ತಿ, ತುಳುವೆರೆ ಆಯನೊ ಕೂಟದ ಉಪಾಧ್ಯಕ್ಷೆ ಆಶಾ ಶೆಟ್ಟಿ ಅತ್ತಾವರ ಮುಂತಾದವರಿಗೆ ಸುವರ್ಣಭೂಮಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಮಾರಂಭದಲ್ಲಿ ರಶ್ಮಿ ರವಿ ಬ್ಯಾಂಕಾಕ್‌, ಸಾನೋಬರ್‌ ಹಬೀಬ್‌ ಬ್ಯಾಂಕಾಕ್‌, ಸುಪ್ರಭಾ ಶೆಟ್ಟಿ ಬ್ಯಾಂಕಾಕ್‌, ವಿನಯ್‌ ರೈ ಬ್ಯಾಂಕಾಕ್‌, ಗಣೇಶ್‌ ಆಳ್ವ ಮುಂಬೈ, ಬಿಬುಲ್ಲಾ ಸಾಹೇಬ್‌, ವಿನ್ಸಿ ಡೇನಿಯಲ್‌ ಪಿಂಟೋ, ಮೈಕಲ್‌ ವೇಗಸ್‌, ಜೀವನ್‌ ಲೋಬೋ, ನೈನ್‌ ಮಹಮ್ಮದ್‌, ಕಾರ್ತಿಕ್‌ ಮಾಸ್ಟರ್‌ ಅಮನ್‌ ರಾಜೇಶ್‌, ಕುಮಾರಿ ರೀದ್ದಿ ಶೆಟ್ಟಿ, ಶ್ರೀಶ ಶೆಟ್ಟಿ, ಶಾಲಿನಿ ಶೆಟ್ಟಿ, ವತ್ಸಲಾ, ಯಶೋದಾ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಂಗವಾಗಿ ವಿವಿಧ ಭಾರತೀಯ ತಿಂಡಿ ತಿನಿಸು ಪಾನೀಯಗಳ ಪ್ರಾತ್ಯಕ್ಷಿಕೆ ಮತ್ತು ವಿತರಣೆ ನಡೆಸಲಾಯಿತು. ಡಾ| ರಾಜೇಶ್‌ ಆಳ್ವ ಅವರು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next