Advertisement

ತುಳುಕೂಟ ಪಿಂಪ್ರಿ-ಚಿಂಚ್ವಾಡ್‌ ಕ್ರಿಕೆಟ್‌ ಟ್ರೋಫಿ ಪಂದ್ಯಾಟ ಸಮಾರೋಪ

03:28 PM Dec 14, 2018 | Team Udayavani |

ಪುಣೆ: ತುಳುಕೂಟ ಪಿಂಪ್ರಿ-ಚಿಂಚ್ವಾಡ್‌ ವತಿಯಿಂದ ತುಳು ಕನ್ನಡಿಗರಿಗಾಗಿ ಆಯೋಜಿಸಿದ ಸೀಮಿತ ಓವರ್‌ಗಳ ವಾರ್ಷಿಕ ಕ್ರಿಕೆಟ್‌ ಪಂದ್ಯಾವಳಿಯು ಡಿ. 10  ರಂದು ವೆಂಗ್‌ಸರ್ಕಾರ್‌ ಕ್ರಿಕೆಟ್‌ ಅಕಾಡೆಮಿ ಮೈದಾನ  ಥೇರ್‌ಗಾಂವ್‌ನಲ್ಲಿ  ನಡೆದಿದ್ದು,  ಶಬರಿ ಎ ತಂಡವು ಅಂತಿಮವಾಗಿ 25,000 ರೂ. ನಗದು ಹಾಗೂ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

Advertisement

ಸಾಯಿ ಎ. ತಂಡವು 15000 ರೂ. ನಗದಿನೊಂದಿಗೆ ರನ್ನರ್ಸ್‌ ಟ್ರೋಫಿಯನ್ನು ಜಯಿಸಿತು. ತುಳುಕೂಟ ಪಿಂಪ್ರಿ-ಚಿಂಚಾÌಡ್‌ ಇದರ ಅಧ್ಯಕ್ಷ ಹರೀಶ್‌ ಶೆಟ್ಟಿ ಕುರ್ಕಾಲ್‌ ಅಧ್ಯಕ್ಷತೆಯಲ್ಲಿ  ಸಂಜೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ವಿತರಿಸ ಲಾಯಿತು. ಪಂದ್ಯಾವಳಿಯ ಅತ್ಯುತ್ತಮ ಎಸೆತಗಾರ  ಬಹುಮಾನವನ್ನು ಸುಶಾಂತ್‌ ಪಡೆದುಕೊಂಡರೆ, ಅತ್ಯುತ್ತಮ  ದಾಂಡಿಗ ಪ್ರಶಸ್ತಿಯನ್ನು ಪ್ರಥಮೇಶ್‌ ಹಾಗೂ ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಪ್ರಥಮೇಶ್‌ ಪಡೆದುಕೊಂಡರು.

ಬಹುಮಾನ ವಿತರಣಾ ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಹರೀಶ್‌ ಶೆಟ್ಟಿ ಕುರ್ಕಾಲ್‌, ಅತಿಥಿಗಳಾದ ಪಿಂಪ್ರಿ-ಚಿಂಚಾÌಡ್‌ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ವಿಶ್ವನಾಥ ಡಿ. ಶೆಟ್ಟಿ, ಎರ್ಮಾಳ್‌ ಸೀತಾರಾಮ ಶೆಟ್ಟಿ, ಮಹೇಶ್‌ ಹೆಗ್ಡೆ ಕಟ್ಟಿಂಗೇರಿಮನೆ, ಸಮಾಜ ಸೇವಕ ಕಾಶಿನಾಥ್‌ ನಕಾಟೆ, ಪುಣೆ ತುಳುಕೂಟದ ಗೌರವಾಧ್ಯಕ್ಷ ತಾರಾನಾಥ ಕೆ. ರೈ ಮೇಗಿನಗುತ್ತು, ಪಿಂಪ್ರಿ-ಚಿಂಚಾÌಡ್‌ ಬಂಟರ ಸಂಘದ ಶಿಕ್ಷಣ  ಮತ್ತು ಸಮಾಜಕಲ್ಯಾಣ ಸಮಿತಿಯ  ಕಾರ್ಯಾಧ್ಯಕ್ಷ ವಿಶ್ವನಾಥ ಕೆ.  ಶೆಟ್ಟಿ, ದಿನೇಶ್‌ ಶೆಟ್ಟಿ ಬಜಗೋಳಿ, ಸಂತೋಷ್‌ ಶೆಟ್ಟಿ ಎಣ್ಣೆಹೊಳೆ, ಅವಿನಾಶ್‌ ಶೆಟ್ಟಿ, ಸುಧಾಕರ ಶೆಟ್ಟಿ ಪೆಲತ್ತೂರು, ಪಿಂಪ್ರಿ-ಚಿಂಚಾÌಡ್‌ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಶ್ಯಾಮ್‌ ಸುವರ್ಣ, ರವಿ ಶೆಟ್ಟಿ ಲೋನಾವಾಲ, ಉದಯ್‌ ಶೆಟ್ಟಿ ಲೋನಾವಾಲ, ಸಂತೋಷ್‌ ಶೆಟ್ಟಿ ಎಣ್ಣೆಹೊಳೆ ಮತ್ತಿತರ ಗಣ್ಯರು ಉಪಸ್ಥಿತರಿದ್ದು ಶುಭಹಾರೈಸಿದರು.

ಸಮಿತಿಯ ಉಪಾಧ್ಯಕ್ಷ ದಿನೇಶ್‌ ಶೆಟ್ಟಿ ಉಜಿರೆ, ಶೇಖರ ಚಿತ್ರಾಪು, ಕಾರ್ಯದರ್ಶಿ ವಿನಯ್‌ ಶೆಟ್ಟಿ ನಿಟ್ಟೆ, ಕೋಶಾಧಿಕಾರಿ  ಗಣೇಶ್‌ ಅಂಚನ್‌, ಜತೆ ಕಾರ್ಯದರ್ಶಿ ಶುಭಕರ ಶೆಟ್ಟಿ, ಜತೆ ಕೋಶಾಧಿಕಾರಿ ಅಲ್ತಾಫ್‌ ಉಡುಪಿ, ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ಸಂತೋಷ್‌ ಶೆಟ್ಟಿ ಪೆರ್ಡೂರು, ಉಪ ಕಾರ್ಯಾಧ್ಯಕ್ಷೆ ಸುಮಿತಾ ಪೂಜಾರಿ, ಶಿಕ್ಷಣ ಮತ್ತು ಸಾಮಾಜಿಕ ಸಮಿತಿ ಕಾರ್ಯಾಧ್ಯ ನಿತಿನ್‌ ಶೆಟ್ಟಿ ನಿಟ್ಟೆ, ಉಪ ಕಾರ್ಯಾಧ್ಯಕ್ಷ ಜಯ ಶೆಟ್ಟಿ ದೇಹುರೋಡ್‌, ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ಸತೀಶ್‌ ಶೆಟ್ಟಿ, ಉಪ ಕಾರ್ಯಾಧ್ಯಕ್ಷ ವಿಕಾಸ್‌ ಅಡಪ, ಜನಸಂಪರ್ಕಾಧಿಕಾರಿಗಳಾದ  ರತ್ನಾಕರ ಶೆಟ್ಟಿ ಹಿಂಜೆವಾಡಿ, ಉದಯ್‌ ಶೆಟ್ಟಿ ಲೋನಾವಾಲ, ಚಂದ್ರಶೇಖರ ಪೂಜಾರಿ ವಾಕಡ್‌, ಕುಸುಮಾ ಸಾಲ್ಯಾನ್‌ ಯುವ ವಿಭಾಗದ ಕಾರ್ಯಾಧ್ಯಕ್ಷ ಮಿಥುನ್‌ ಶೆಟ್ಟಿ, ಸಮಿತಿ ಸದಸ್ಯರಾದ  ಸಂತೋಷ್‌ ಶೆಟ್ಟಿ ವಾಕಡ್‌, ಸಂತೋಷ್‌ ಕಡಂಬ, ರಾಜೇಶ್‌ ಶೆಟ್ಟಿ ಗಿರಿಜಾ, ಚೇತನ್‌ ಶೆಟ್ಟಿ ಮೂಲ್ಕಿ, ಪ್ರಭಾಕರ ಶೆಟ್ಟಿ, ಕುಶ ಶೆಟ್ಟಿ, ವಿಶ್ವನಾಥ ಶೆಟ್ಟಿ ಚಾಕನ್‌, ಜಗದೀಶ್‌  ಶೆಟ್ಟಿ ಹವೇಲಿ, ರಘು ಪೂಜಾರಿ, ಪ್ರೇಮಾ ಪೂಜಾರಿ ಉಪಸ್ಥಿತರಿದ್ದು ಪಂದ್ಯಾವಳಿಯ ಯಶಸ್ಸಿಗೆ ಸಹಕರಿಸಿದರು.

ಬೆಳಗ್ಗೆ ನಡೆದ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಪಿಂಪ್ರಿ-ಚಿಂಚಾÌಡ್‌ ಬಂಟರ ಸಂಘದ ಅಧ್ಯಕ್ಷರಾದ ವಿಜಯ್‌ ಎಸ್‌. ಶೆಟ್ಟಿ ಕಟ್ಟಣಿಗೆ ಮನೆ ಬೋರ್ಕಟ್ಟೆ, ಪಿಂಪ್ರಿ-ಚಿಂಚಾÌಡ್‌ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ವಿಶ್ವನಾಥ್‌ ಡಿ ಶೆಟ್ಟಿ ಉಪಸ್ಥಿತರಿದ್ದರು. ಪುಣೆ ಬಂಟರ ಸಂಘದ ಉತ್ತರ ಪ್ರಾದೇಶಿಕ ಸಮಿತಿ ನಿಕಟಪೂರ್ವ ಕಾರ್ಯಾಧ್ಯಕ್ಷ ದಿನೇಶ್‌ ಶೆಟ್ಟಿ ಕಳತ್ತೂರು, ಪಿಸಿಎಂಸಿ ಮಾಜಿ ನಗರ ಸೇವಕರಾದ ಜಗದೀಶ್‌ ಶೆಟ್ಟಿ, ಉÇÉಾಸ್‌ ಶೆಟ್ಟಿ, ಪ್ರಸಾದ್‌ ಶೆಟ್ಟಿ, ಪುಣೆ ತುಳುಕೂಟದ ಅಧ್ಯಕ್ಷ ಮೋಹನ್‌ ಶೆಟ್ಟಿ ಎಣ್ಣೆಹೊಳೆ, ದಿವಾಕರ ಶೆಟ್ಟಿ ಮಾಣಿಬೆಟ್ಟು, ಯಶವಂತ್‌ ಶೆಟ್ಟಿ, ಪಿಂಪ್ರಿ-ಚಿಂಚಾÌಡ್‌ ಬಂಟರ ಸಂಘದ ಉಪಾಧ್ಯಕ್ಷ  ರಾಕೇಶ್‌ ಶೆಟ್ಟಿ ಬೆಳ್ಳಾರೆ, ಪಿಂಪ್ರಿ-ಚಿಂಚಾÌಡ್‌ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್‌ ಸಾಲ್ಯಾನ್‌  ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Advertisement

ಪ್ರಥಮ ಬಹುಮಾನದ ನಗದನ್ನು ನಗರಸೇವಕರಾದ ತುಷಾರ್‌ ಹಿಂಗೆ ಪ್ರಾಯೋಜಿಸಿದರೆ, ದ್ವಿತೀಯ ಬಹುಮಾನದ ನಗದನ್ನು ಬಿಜೆಪಿ ಮಹಾರಾಷ್ಟ್ರ ಯುವ ಮೋರ್ಚಾದ ಕಾರ್ಯದರ್ಶಿ ಅನೂಪ್‌ ಮೋರೆ ಪ್ರಾಯೋಜಿಸಿದರು. ಪಂದ್ಯಾವಳಿಯಲ್ಲಿ ಮಧ್ಯಾಹ್ನದ ಭೋಜನವನ್ನು ಸಂಘದ ಅಧ್ಯಕ್ಷ ಹರೀಶ್‌ ಶೆಟ್ಟಿ ಕುರ್ಕಾಲ್‌, ಬೆಳಗ್ಗಿನ ಉಪಾಹಾರವನ್ನು ವಿಜಯ್‌ ಶೆಟ್ಟಿ ಸಿದ್ಧಿವಿನಾಯಕ್‌ ಸ್ನಾಕ್ಸ್‌  ಸೆಂಟರ್‌ ತೆರಗಾಂವ್‌ ವತಿಯಿಂದ ಪ್ರಾಯೋಜಿಸಿದರೆ, ಸಂಜೆಯ ಚಹಾವನ್ನು ಶುಭಕರ್‌  ಶೆಟ್ಟಿ ಮಾನಸಿ ಹೊಟೇಲ್‌ ಡಾನೆY ಚೌಕ್‌ ಪ್ರಾಯೋಜಿಸಿದರು.

ಹತ್ತು ತಂಡಗಳು ಭಾಗಿ 
ಪಂದ್ಯಾವಳಿಯಲ್ಲಿ ಸಾಯಿ ಬಿ., ಕುರ್ಕಾಲ್‌ ಇಲೆವೆನ್‌, ಕೋಟಿ ಚೆನ್ನಯ, ಸಾಯಿ ಎ., ಹವ್ಯಾಸಿ ತಂಡ, ಪ್ರಿಸೆಂಟ್‌ ಇಲೆವೆನ್‌, ಅಭಿನಂದನ್‌, ಶಬರಿ ಬಿ., ಮಸಾಕ, ಶಬರಿ ಎ ತಂಡ ಎಂದು ಒಟ್ಟು  ಹತ್ತು ತಂಡಗಳು ಭಾಗವಹಿಸಿದ್ದವು. ಸಂಘದ ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ಸತೀಶ್‌ ಶೆಟ್ಟಿಯವರು ತಮ್ಮ ನೇತೃತ್ವದಲ್ಲಿ ಪಂದ್ಯಾಟವನ್ನು ಅತ್ಯುತ್ತಮವಾಗಿ ಸಂಘಟಿಸಿ  ಮೆಚ್ಚುಗೆ ಪಡೆದರು. ಪಂದ್ಯಾವಳಿಯ ವಿನ್ನರ್ಸ್‌  ಹಾಗೂ ರನ್ನರ್ಸ್‌ಗೆ  ಮಿರುಗುವ ಟ್ರೋಫಿಗಳನ್ನು  ಚಾವಡಿ ಹೊಟೇಲಿನ ಮಹೇಶ್‌ ಶೆಟ್ಟಿಯವರು ತನ್ನ ಸಹೋದರ ದಿ|  ಪ್ರಶಾಂತ್‌ ಶೆಟ್ಟಿಯವರ ಸ್ಮರಣಾರ್ಥವಾಗಿ ಪ್ರಾಯೋಜಿಸಿದರು.

 ಚಿತ್ರ-ವರದಿ: ಕಿರಣ್‌ ಬಿ. ರೈ ಕರ್ನೂರು

Advertisement

Udayavani is now on Telegram. Click here to join our channel and stay updated with the latest news.

Next