Advertisement
ಆ. 20 ರಂದು ಪೂರ್ವಾಹ್ನ ಐರೋಲಿಯ ಮೆಹ್ತಾ ಕಾಲೇಜಿನ ಅಡಿಟೋರಿಯಂನಲ್ಲಿ ನಡೆದ ತುಳುಕೂಟ ಐರೋಲಿ ಇದರ ರಂಗೋತ್ಸವ-2017 ಸಂಭ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ ಶುಭ ಹಾರೈಸಿದರು. ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಕಳತ್ತೂರು ಅಮರನಾಥ್ ಶೆಟ್ಟಿ ಅವರು ಮಾತನಾಡಿ, 2007ರಲ್ಲಿ ಹರೀಶ್ ಪಡುಬಿದ್ರೆ ಅವರ ನೇತೃತ್ವದಲ್ಲಿ ಕೆಲವು ಉತ್ಸಾಹಿ ತುಳು ಬಾಂಧವರ ಸಹಕಾರದಿಂದ ಸ್ಥಾಪನೆಗೊಂಡ ನಮ್ಮ ತುಳುಕೂಟವು ದಶಮಾನೋತ್ಸವ ಸಂಭ್ರಮವನ್ನು ಆಚರಿಸುತ್ತಿರುವುದು ಹೆಮ್ಮೆಯ
ಮತ್ತೋರ್ವ ಅತಿಥಿ ಐರೋಲಿಯ ದುರ್ಗಾಪರಮೇಶ್ವರಿ ಮಂದಿರದ ವಿಶ್ವಸ್ತ ಲಯನ್ ಸತೀಶ್ ಶೆಟ್ಟಿ ಮಾತನಾಡಿ, ತುಳುಕೂಟ ಐರೋಲಿಯ ಅಧ್ಯಕ್ಷ ಹರೀಶ್ ಪಡುಬಿದ್ರೆ ನೇತೃತ್ವದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ದಶಮಾನೋತ್ಸವವನ್ನು ಸ್ಮರಣೀಯವಾಗಿಸಲು ಪ್ರಯತ್ನಿಸಿದ್ದಾರೆ. ಅವರೆಲ್ಲ ಅಭಿ
ನಂದನೀಯರು. ಇವರ ಕಾರ್ಯಕ್ರಮಕ್ಕೆ ನಾವೆಲ್ಲರೂ ಪ್ರೋತ್ಸಾಹಿಸಬೇಕು ಎಂದರು.
Related Articles
Advertisement
ಕಲಾವಿದರಾದ ನಮ್ಮನ್ನು ತುಳುಕೂಟದವರು ಸಮ್ಮಾನಿಸಿರುವುದು ಸಂತೋಷ ತಂದಿದೆ ಎಂದರು. ರಂಗಭೂಮಿ ಫೈನ್‌ಆರ್ಟ್ಸ್ ಇದರ ಮಾಜಿ ಅಧ್ಯಕ್ಷ ವಿ. ಕೆ. ಸುವರ್ಣ ಮಾತನಾಡಿ, ಹರೀಶ್ ಪಡುಬಿದ್ರಿ ಅವರ ನೇತೃತ್ವದಲ್ಲಿ ನಾಟಕ ಸ್ಪರ್ಧೆ ನಡೆಸಿ ನಾಟಕ ರಂಗಕ್ಕೆ ಪ್ರೋತ್ಸಾಹಿಸಿದ್ದಾರೆ. ಈ ಸ್ಪರ್ಧೆ ಯಶಸ್ವಿಯಾಗಲು ಇದರ ಹಿಂದೆ ದುಡಿದವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾ ಲಯದ ಉಪಾಧ್ಯಕ್ಷ ನಂದಿಕೂರು ಜಗದೀಶ್ ಶೆಟ್ಟಿ ಅವರು ಮಾತನಾಡಿ, ತುಳುಕೂಟ ಐರೋಲಿ ಸಾಂಸ್ಕೃತಿಕ, ಶೈಕ್ಷಣಿಕ, ಕ್ರೀಡಾಕೂಟಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವುದರ ಜತೆಗೆ ಯಕ್ಷಗಾನ, ನಾಟಕ, ಸಂಗೀತ ಇತ್ಯಾದಿ ಸ್ಪರ್ಧೆಗಳನ್ನು ಆಯೋಜಿಸುತ್ತಿದ್ದು, ಇಂದು ಮುಂಬಯಿಯ ಹೆಸರಾಂತ ಸಂಸ್ಥೆಯಾಗಿ ರೂಪುಗೊಂಡಿದೆ. ಅದಕ್ಕೆ ನಾವೆಲ್ಲರೂ ಸಹಕರಿಸಬೇಕು ಎಂದರು. ಬಂಟರ ಸಂಘ ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ಸಮನ್ವಯಕ ತಾಳಿಪಾಡಿಗುತ್ತು ಭಾಸ್ಕರ ಎಂ.ಶೆಟ್ಟಿ ಮಾತನಾಡಿ, ಹರೀಶ್ ಪಡುಬಿದ್ರಿ ಅವರು ಆಯೋಜಿಸುವ ಎಲ್ಲ ಕಾರ್ಯಕ್ರಮಗಳೂ ಯಶಸ್ವಿ ಯಾಗುತ್ತದೆ. ಅವರ ಅಧ್ಯಕ್ಷತೆಯಲ್ಲಿ ಹಲವಾರು ಕಲಾಸ್ಪರ್ಧೆಗಳನ್ನು ಆಯೋಜಿಸಿದ್ದಾರೆ. ಇದರಿಂದ ಕೆಲವು ಹೊಸ ಕಲಾವಿದರಿಗೆ ವೇದಿಕೆ ಸಿಕ್ಕಿದಂತಾಗಿದೆ ಎಂದರು.
ರಂಗ ಕಲಾವಿದೆ ಜೂಲಿಯಟ್ ಪೆರೇರಾ ಅವರು ಮಾತನಾಡಿ, ತುಳುಕೂಟದ ಕಾರ್ಯಕ್ರಮಗಳು ಶ್ಲಾಘನೀಯವಾಗಿದೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲೇ ಇಷ್ಟೊಂದು ಸಾಧನೆಗಳನ್ನು ಮಾಡಿರುವ ಸಂಸ್ಥೆಯ ಸಮಾಜಪರ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರವಿರಲಿ ಎಂದರು. ಅಧ್ಯಕ್ಷತೆ ವಹಿಸಿದ್ದ ತುಳುಕೂಟ ಐರೋಲಿ ಅಧ್ಯಕ್ಷ ಹರೀಶ್ ಶೆಟ್ಟಿ ಪಡುಬಿದ್ರೆ ಅವರು ಮಾತನಾಡಿ, ರಂಗಭೂಮಿಗೆ ಪ್ರೋತ್ಸಾಹ ನೀಡುವ ಸಲುವಾಗಿ ದಶಮಾನೋತ್ಸವದ ಈ ಸಂದರ್ಭದಲ್ಲಿ ಈ ನಾಟಕ ಸ್ಪರ್ಧೆಯನ್ನು ಆಯೋಜಿಸಿದ್ದೇನೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ನಾನು ಚಿರಋಣಿಯಾಗಿದ್ದೇನೆ. ಇದೇ ರೀತಿ ಮುಂದೆಯೂ ನಮ್ಮ ಕಾರ್ಯಕ್ರಮಗಳಿಗೆ ಸಹಕರಿಸುವಿರಿ ಎಂದು ನಂಬುತ್ತೇನೆ ಎಂದರು.
ಜಗದೀಶ್ ಶೆಟ್ಟಿ ಕಟಪಾಡಿ ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ತುಳುಕೂಟದ ಉಪಾಧ್ಯಕ್ಷರಾದ ಕೆ. ಕೆ. ಹೆಬ್ಟಾರ್, ನಾಗೇಶ್ ಶೆಟ್ಟಿ ಹೆದ್ದಾರಿ ಮನೆ ಬೈಕಾಡಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಬಿ. ಶೆಟ್ಟಿ, ಕೋಶಾಧಿಕಾರಿ ಗಂಗಾಧರ ಬಂಗೇರ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಅಮರ್‌ನಾಥ್ ಶೆಟ್ಟಿ ಕಳತ್ತೂರು, ರಂಗೋತ್ಸವದ ಕಾರ್ಯಾಧ್ಯಕ್ಷ ಸುಕೇಶ್ ಶೆಟ್ಟಿ ಇರ್ವತ್ತೂರು ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಾಗೇಶ್ ಶೆಟ್ಟಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ಗಣ್ಯರನ್ನು ಪದಾಧಿಕಾರಿಗಳು ಗೌರವಿಸಿದರು.
ಅನಂತರ ಪರಕೆ ಕಲಾವಿದರು ಅಸಲ್ಪ ಕಲಾವಿದರಿಂದ ಬೀಡಿ, ಸಪ್ತಸ್ವರ ಕಲ್ಚರಲ್ ಅಸೋಸಿಯೇಶನ್ ಮುಂಬಯಿ ಕಲಾವಿದ ರಿಂದ ದೇಯಿಕ್ಕನ ದೈವದಿಲ್É, ರಂಗಭೂಮಿ ಫೈನ್‌ಆರ್ಟ್ಸ್ ಇವರಿಂದ ಏರೆಗ್ಲಾ ಪನೊಡಿj, ಬಿಲ್ಲವರ ಅಸೋಸಿಯೇಶನ್ ಮೀರಾರೋಡ್ ಸ್ಥಳೀಯ ಸಮಿತಿಯಿಂದ ಯಕ್ಷನಿಲಯ ಹಾಗೂ ಹೆಗ್ಗಡೆ ಸೇವಾ ಸಂಘ ಮುಂಬಯಿ ಕಲಾವಿದರಿಂದ ಡೋಲು ನಾಟಕ ಪ್ರದರ್ಶನಗೊಂಡವು. ತೀರ್ಪುಗಾರರಾಗಿ ದಿನೇಶ್ ಕುಡ್ವ, ಸುಧಾ ಶೆಟ್ಟಿ, ಪ್ರಫುಲ್‌ಚಂದ್ರ ರೈ ಕುಂಜಾಡಿ ಅವರು ಸಹಕರಿಸಿದರು. ಬಾಬಾ ಪ್ರಸಾದ್ ಅರಸ, ಜಗದೀಶ್ ರೈ ಕುಂಬ್ಳೆ, ರವಿ ಶೆಟ್ಟಿ, ಮನೋಹರ್ ನಂದಳಿಕೆ, ಅಶೋಕ್ ಪಕ್ಕಳ, ತುಳುಕೂಟದ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.