Advertisement

ತುಳುಕೂಟ ಐರೋಲಿ:ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮುಹೂರ್ತ

04:13 PM Oct 15, 2017 | Team Udayavani |

ನವಿಮುಂಬಯಿ: ತುಳುಕೂಟ ಐರೋಲಿ ಇದರ ದಶಮಾನೋತ್ಸವ ಸಂಭ್ರಮವನ್ನು 2018ನೇ ಜ. 7ರಂದು ವಾಶಿಯ ಸಿಡ್ಕೊà ಭವನದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಯೋಜಿಸಲು ನಿರ್ಧರಿಸಲಾಗಿದ್ದು, ಇದರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮುಹೂರ್ತ ಕಾರ್ಯಕ್ರಮವು ಇತ್ತೀಚೆಗೆ ಐರೋಲಿಯ ಹೆಗ್ಗಡೆ ಭವನದಲ್ಲಿ ನಡೆಯಿತು.

Advertisement

ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡ ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರು ಮಾತನಾಡಿ, ತುಳುಕೂಟ ಐರೋಲಿಯು ಜಾತ್ಯತೀತ ಸಂಸ್ಥೆಯಾಗಿ ಬೆಳೆದು ನಿಂತಿದೆ. ಸಂಸ್ಥೆಯ ಬೆಳವಣಿಗೆಗೆ ಅದರ ಕಾರ್ಯಕರ್ತರ ಕಾರ್ಯವೈಖರಿಯನ್ನು ಅವಲಂಬಿಸಿರುವುದು ನನಗೆ ಸಂತೋಷ ತಂದಿದೆ. ನಾನು ಈ ಸಂಸ್ಥೆಯೊಂದಿಗೆ ಕಳೆದ 9 ವರ್ಷಗಳಿಂದ ಸಲಹೆಗಾರನಾಗಿ ಸೇವೆ ಸಲ್ಲಿಸುತ್ತಿದ್ದು, ತುಳುಕೂಟವು ಸಾಮಾಜಿಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಅನ್ಯ ಸಂಸ್ಥೆಗಳಿಗೆ ಮಾದರಿಯಾಗಿದೆ. ಇಂದಿನ ಶುಭ ದಿನದ ಸಮಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಮುಹೂರ್ತ ನಡೆದಿದ್ದು, ಮೂಕಾಂಬಿಕೆಯ ಅನುಗ್ರಹ ಎಲ್ಲರ ಮೇಲೆ ಸದಾಯಿರಲಿ ಎಂದು ಹೇಳಿದರು.

ಇನ್ನೋರ್ವ ಅತಿಥಿ ಹೆಗ್ಗಡೆ ಸೇವಾ ಸಂಘದ ಅಧ್ಯಕ್ಷ ವಿಜಯ ಬಿ. ಹೆಗ್ಡೆ ಅವರು ಮಾತನಾಡಿ, ಉತ್ತಮ ಕಾರ್ಯಕ್ರಮವನ್ನು ಮಾಡುತ್ತಿರುವ ತುಳುಕೂಟ ಐರೋಲಿಯು ಈಗಾಗಲೇ ಎಲ್ಲರ ಪ್ರೀತಿ, ಗೌರವಕ್ಕೆ ಪಾತ್ರವಾಗಿದೆ. ಹೆಗ್ಗಡೆ  ಸೇವಾ ಸಂಘದ ಸಹಕಾರ ಸಂಸ್ಥೆಗೆ ಸದಾಯಿದೆ. ದಶಮಾನೋತ್ಸವ ಸಂದರ್ಭದಲ್ಲಿ ಪ್ರದರ್ಶಿಸಲ್ಪಡುವ ಎಲ್ಲಾ ಕಾರ್ಯಕ್ರಮಗಳು ಉತ್ತಮ ರೀತಿಯಲ್ಲಿ ನೆರವೇರಲಿ ಎಂದು ನುಡಿದು ಶುಭ ಹಾರೈಸಿದರು.

ತುಳುಕೂಟ ಐರೋಲಿಯ ಅಧ್ಯಕ್ಷ ಹರೀಶ್‌ ಶೆಟ್ಟಿ ಪಡುಬಿದ್ರೆ ಅವರು ಮಾತನಾಡಿ, ಕಳೆದ ಒಂಭತ್ತು ವರ್ಷಗಳಿಂದ ಸಕ್ರಿಯ ಕಾರ್ಯಕರ್ತರು, ಮಹಿಳೆಯರು ಹಾಗೂ ಯುವ ಜನತೆಯ ಸಹಕಾರದಿಂದ ನಮ್ಮ ಸಂಸ್ಥೆಯು ಉತ್ತಮ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವಲ್ಲಿ ಸಫಲವಾಗಿದೆ. ದಶಮಾನೋತ್ಸವ ಸಮಾರಂಭವು ಬಂಟರ ಸಂಘ ನವಿಮುಂಬಯಿ ಜ್ಞಾನ ಮಂದಿರದ ಕಾರ್ಯಾಧ್ಯಕ್ಷ ಚಂದ್ರಹಾಸ ರೈ ಬೊಳ್ನಾಡುಗುತ್ತು ಅವರ ಮುಂದಾಳತ್ವದಲ್ಲಿ ನಡೆಯಲಿದ್ದು, ಸಂಸ್ಥೆಯ ಕಲಾವಿದರು ಮಾದರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಬೇಕು ಎಂಬ ನಿಟ್ಟಿನಲ್ಲಿ ನಾವೆಲ್ಲರೂ ಇಂದಿನಿಂದಲೇ ಕಾರ್ಯಪ್ರವೃತ್ತರಾಗಬೇಕು. ನೃತ್ಯ ನಿರ್ದೇಶನವನ್ನು ಸಹನಾ ಭಾರದ್ವಾಜ್‌, ನವೀನ್‌ ಬೇಂಗ್ರೆ, ಕಾಜಲ್‌ ಕುಂದರ್‌, ಗೀತಾ ಜಿ. ಶೆಟ್ಟಿ, ಅನಂತೇಶ್‌ ಮುದ್ದು ಅಂಚನ್‌, ಲಾವಣ್ಯ ಯು. ರಾವ್‌ ಅವರು ಸಹಕರಿಸಲಿದ್ದಾರೆ ಎಂದು ನುಡಿದರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗ ವಹಿಸುವವರು ಅಮರ್‌ನಾಥ್‌ ಶೆಟ್ಟಿ ಕಳತ್ತೂರು (9820030989), ಗಿರೀಶ್‌ ಶೆಟ್ಟಿ ಬಂಟ್ವಾಳ (9664966493), ಶೈಲಶ್ರೀ ಅಮರ್‌ ಶೆಟ್ಟಿ (9819346105) ಇವರಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಇದೇ ಸಂದರ್ಭದಲ್ಲಿ ತಿಳಿಸಲಾಯಿತು.

Advertisement

ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಕೆ. ಕೆ. ಹೆಬ್ಟಾರ್‌, ನಾಗೇಶ್‌ ಶೆಟ್ಟಿ ಬೈಕಾಡಿ ಹೆದ್ದಾರಿಮನೆ, ಗೌರವ ಪ್ರಧಾನ ಕಾರ್ಯದರ್ಶಿ ರಾಜೇಶ್‌ ಬಿ. ಶೆಟ್ಟಿ, ಕೋಶಾಧಿಕಾರಿ ಗಂಗಾಧರ ಬಂಗೇರ ಬಂಟ್ವಾಳ, ದಶಮಾನೋತ್ಸವ ಸಮಾರಂಭದ ಉಪ ಕಾರ್ಯಾಧ್ಯಕ್ಷ ವಿಜಯ ಕೆ. ಶೆಟ್ಟಿ, ವಾರ್ಷಿಕ ಸಮಾರಂಭದ ಅಧ್ಯಕ್ಷ  ಅನಿಲ್‌ ಶೆಟ್ಟಿ ಪಾಂಗಾಳ, ಮಾಜಿ ಅಧ್ಯಕ್ಷರಾದ ಪ್ರಕಾಶ್‌ ಆಳ್ವ, ಜಗದೀಶ್‌ ಶೆಟ್ಟಿ ನಾಡಾಜೆಗುತ್ತು, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಅಮರ್‌ನಾಥ್‌ ಶೆಟ್ಟಿ ಕಳತ್ತೂರು, ಉಪ ಕಾರ್ಯಾಧ್ಯಕ್ಷರಾದ ಗಿರೀಶ ಶೆಟ್ಟಿ ಬಂಟ್ವಾಳ, ಸತೀಶ್‌ ಎ. ರೈ, ಸುಕೇಶ್‌ ಶೆಟ್ಟಿ ಇರ್ವತ್ತೂರು, ಉಮೇಶ್‌ ಶೆಟ್ಟಿ ಇನ್ನ ಮೊದಲಾದವರು ಉಪಸ್ಥಿತರಿದ್ದರು. ಅಮರ್‌ನಾಥ್‌ ಶೆಟ್ಟಿ ಕಳತ್ತೂರು ಕಾರ್ಯಕ್ರಮ ನಿರ್ವಹಿಸಿದರು. ಶೈಲಶ್ರೀ ಅಮರ್‌ ಶೆಟ್ಟಿ ಪ್ರಾರ್ಥನೆಗೈದರು. ಸದಸ್ಯ ಬಾಂಧವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next