Advertisement

ತುಳುಕೂಟ ಐರೋಲಿ ವಾರ್ಷಿಕೋತ್ಸವದಲ್ಲಿ ಸಾಧಕರಿಗೆ ಸಮ್ಮಾನ

11:41 AM Feb 08, 2017 | |

ನವಿಮುಂಬಯಿ: ತುಳುಕೂಟ ಐರೋಲಿಯ 9ನೇ ವಾರ್ಷಿಕೋತ್ಸವ ಸಮಾರಂಭವು ಜ. 28ರಂದು ಬೆಳಗ್ಗೆ ಐರೋಲಿಯ ಹೆಗ್ಗಡೆ ಭವನದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ತುಳುಕೂಟ ಐರೋಲಿ ಅಧ್ಯಕ್ಷ ಹರೀಶ್‌ ಶೆಟ್ಟಿ ಪಡುಬಿದ್ರೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾ ರಂಭದಲ್ಲಿ ತುಳುಕೂಟ ಐರೋಲಿಯ ಹಿರಿಯ ನಾಗರಿಕ ಸದಸ್ಯರಾದ ದೊಂಬ ಎ. ಕುಕ್ಯಾನ್‌, ಪದ್ಮ ಕೆ. ಗೌಡ, ನೃತ್ಯ ಸಂಯೋಜನೆಗೆ ಸಹಕಾರ ನೀಡಿದ ಲಾವಣ್ಯಾ, ಅನಂತೇಶ ಮುದ್ದು ಅಂಚನ್‌ ಅವರನ್ನು ಗಣ್ಯರ ಸಮ್ಮುಖದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಗೌರವಿಸಲಾಯಿತು. ಹೆಗ್ಗಡೆ ಸೇವಾ ಸಂಘ ಮುಂಬಯಿ ಅಧ್ಯಕ್ಷ ವಿಜಯ ಬಿ. ಹೆಗ್ಡೆ, ಕುಲಾಲ ಸಂಘ ನವಿಮುಂಬಯಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ರಘು ಮೂಲ್ಯ ಪಿ., ಬಿಲ್ಲವರ ಅಸೋಸಿಯೇಶನ್‌ ನವಿಮುಂಬಯಿ ಸ್ಥಳೀಯ ಸಮಿತಿಯ ಉಪಾಧ್ಯಕ್ಷ ವಿ. ಕೆ. ಪೂಜಾರಿ, ಕರ್ನಾಟಕ ಸಂಘ ಪನ್ವೇಲ್‌ ಅಧ್ಯಕ್ಷ ಕೊಲ್ಪೆ ಧನಂಜಯ ಶೆಟ್ಟಿ, ಬಂಟರವಾಣಿಯ ಗೌರವ ಸಂಪಾದಕ ಅಶೋಕ್‌ ಪಕ್ಕಳ, ನವಿಮುಂಬಯಿ ಹೊಟೇಲ್‌ ಓನರ್ ಅಸೋಸಿಯೇಶನ್‌ ಅಧ್ಯಕ್ಷ ದಯಾನಂದ ಶೆಟ್ಟಿ, ದೆಹಲಿ ಕರ್ನಾಟಕ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ, ವಾರ್ಷಿಕೋತ್ಸವ ಸಮಾರಂಭದ ಕಾರ್ಯಾಧ್ಯಕ್ಷ ಅನಿಲ್‌ ಶೆಟ್ಟಿ ಪಾಂಗಳ, ಹರೀಶ್‌ ಶೆಟ್ಟಿ, ಅಮರ್‌ನಾಥ್‌ ಶೆಟ್ಟಿ, ಅನಿಲ್‌ ಶೆಟ್ಟಿ, ವೇದಿಕೆಯಲ್ಲಿ ಅತಿಥಿಗಳಾಗಿ ಶ್ರೀ ಆದಿಶಕ್ತಿ ಕನ್ನಡ ಸಂಘ ಮಾಜಿವಾಡಾದ ಕಾರ್ಯದರ್ಶಿ ವಾದಿರಾಜ್‌ ಶೆಟ್ಟಿ, ಸಂಘದ ಉಪಾಧ್ಯಕ್ಷ ಕೆ. ಕೆ. ಹೆಬ್ಟಾರ್‌, ಉಪಾಧ್ಯಕ್ಷ ನಾಗೇಶ್‌ ಎ. ಶೆಟ್ಟಿ, ಕಾರ್ಯದರ್ಶಿ ರಾಜೇಶ್‌ ಬಿ. ಶೆಟ್ಟಿ, ಕೋಶಾಧಿಕಾರಿ ಗಂಗಾಧರ ಬಂಗೇರ, ಸಾಂಸ್ಕೃತಿಕ ಸಮಿತಿಯ ಅಮರನಾಥ ಶೆಟ್ಟಿ ಕಳತ್ತೂರು, ನಾಟ್ಯಗುತ್ಛ 2017 ರ ಕಾರ್ಯಾಧ್ಯಕ್ಷ ಗಿರೀಶ್‌ ಶೆಟ್ಟಿ, ಐರೋಲಿ ಮಾಜಿ ಅಧ್ಯಕ್ಷ ನಾಡಾಜೆಗುತ್ತು ಜಗದೀಶ್‌ ಶೆಟ್ಟಿ, ಜಗದೀಶ್‌ ಶೆಟ್ಟಿ ಕಟಪಾಡಿ,  ಉಪಾಧ್ಯಕ್ಷ ನಾಗೇಶ್‌ ಎ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.  

  ಚಿತ್ರ-ವರದಿ: ಸುಭಾಷ್‌ ಶಿರಿಯಾ

 

Advertisement

Udayavani is now on Telegram. Click here to join our channel and stay updated with the latest news.

Next