Advertisement

ತುಳು-ಕನ್ನಡ ವೆಲ್ಪೇರ್‌ ಅಸೋಸಿಯೇಶನ್‌  ಪ್ರಶಸ್ತಿ ಪ್ರದಾನ

04:07 PM Mar 14, 2019 | Team Udayavani |

ಮುಂಬಯಿ: ಗುರು ಶಿಷ್ಯರ ಸಂಬಂಧಗಳನ್ನು ಭದ್ರವಾಗಿರಿಸಿ ಉಸಿರಿನ ನಂತರವೂ ಹೆಸರನ್ನು ಉಳಿಸಿಕೊಂಡ ಆದರ್ಶ ಶಿಕ್ಷಕ, ಕವಿ, ನಾಟಕಕಾರ, ಅಂಕಣಕಾರ ದಿವಂಗತ ಬಿ. ಎಸ್‌. ಕುರ್ಕಾಲ್‌ ಆಗಿದ್ದಾರೆ. ಹಾಡು ಕವಿಯಾಗಿ ಮಕ್ಕಳಿಗೆ ಪದ್ಯ ಬರೆದು ಅವರ ಜವಾಬ್ದಾರಿಯನ್ನು  ಹೆಚ್ಚಿಸಿ ದೇಶಭಕ್ತಿ, ಪ್ರಕೃತಿ, ಧರ್ಮ, ಮಾನವೀಯ ಚಿಂತನೆಗಳ ಬರವಣಿಗೆ ನೀಡಿ ಜನ ಜಾಗೃತಿಗೊಸಿದ ಅವರು ಇತರರಿಗೆ ಮಾದರಿಯಾಗಿದ್ದಾರೆ. ಅವರ  ಸ್ಮರಣಾರ್ಥ ಜರಗುವ  ದತ್ತಿನಿಧಿ ಸಂಸ್ಮರಣಾ ಪ್ರಶಸ್ತಿ ಸಮಾರಂಭ ಅವರ ಸಾಧನೆಗೆ ಸಂದ ಗೌರವವಾಗಿದೆ ಎಂದು ಸಾಹಿತಿ, ವಿಮರ್ಶಕ ಡಾ| ಕರುಣಾಕರ ಎನ್‌. ಶೆಟ್ಟಿ ಅಭಿಪ್ರಾಯಪಟ್ಟರು.

Advertisement

ಮಾ.10ರಂದು  ಮೀರಾ ರೋಡು ಪೂರ್ವದ ಜಹಾಂಗೀರ್‌ ಸರ್ಕಲ್‌ ಸಮೀಪದ ಶೀ ಗುರುನಾರಾಯಣ ಸಭಾಗೃಹದಲ್ಲಿ ತುಳು-ಕನ್ನಡ ವೆಲ್ಪೇರ್‌ ಅಸೋಸಿಯೇಶನ್‌ ಮೀರಾ-ಭಾಯಂದರ್‌ ಇದರ ದಿ| ಬಿ. ಎಸ್‌. ಕುರ್ಕಾಲ್‌ ಸ್ಮರಣಾರ್ಥ  ದತ್ತಿ ನಿಧಿ ಪ್ರಶಸ್ತಿ ಪ್ರಧಾನ  ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಮಾತ

ನಾಡಿದ ಅವರು, ಮುಂಬಯಿ ಮಹಾನಗರದಲ್ಲಿ ಕನ್ನಡವನ್ನು ಡಾ| ಜಿ. ಡಿ. ಜೋಶಿ ಪ್ರತಿಷ್ಠಾನ ಹೆಸರಿನಲ್ಲಿ ಮನೆ ಮನೆಯಲ್ಲಿ ಸಾಹಿತ್ಯ ಸಂಭ್ರಮವನ್ನು ನಡೆಸುತ್ತಾ ಕ್ರಿಯಾಶೀಲರಾಗಿರುವ ಡಾ| ಜಿ. ಡಿ. ಜೋಶಿ  ದತ್ತಿ ನಿಧಿ ಪ್ರಶಸ್ತಿ ಪ್ರಧಾನಿಸಿ ಅದರ ಘನತೆ ಗೌರವ ಹೆಚ್ಚಿಸಿದ್ದೀರಿ. ಇಂತಹ  ಕಾರ್ಯಗಳು ನಿರಂತರ ಸಾಗಲಿ ಎಂದು ಹಾರೈಸಿದರು.

ಸಮಾರಂಭದಲ್ಲಿ ಹಿರಿಯ ಸಾಹಿತಿ, ನಿವೃತ್ತ ಪ್ರಾಂಶುಪಾಲ ಡಾ| ಜಿ. ಡಿ. ಜೋಶಿ ಅವರಿಗೆ ಪ್ರಶಸ್ತಿ ಪ್ರಧಾನಿಸಿ ಗಣ್ಯರು ಗೌರವಿಸಿದರು. ಸಮ್ಮಾನ  ಸ್ವೀಕರಿಸಿ ಮಾತನಾಡಿದ ಡಾ| ಜಿ. ಡಿ. ಜೋಶಿ ಅವರು ಸೃಜನ ಶೀಲ ಲೇಖಕರಿಗೆ, ಉದಯೋನ್ಮಖ ಬರಹಗಾರರಿಗೆ, ಸಾಹಿತ್ಯಾಸಕ್ತರಿಗೆ ಮುಂಬಯಿ ಜನತೆಯ ಪ್ರೋತ್ಸಾಹ ಅನನ್ಯವಾಗಿದೆ.  ಸಾಮಾನ್ಯ  ಶಿಕ್ಷಕನಾದ ನನಗೆ ಪದೋನ್ನತಿ,  ಹಲವಾರು ಪ್ರಶಸ್ತಿ, ಸಂಘ ಸಂಸ್ಥೆಗಳ ವಿವಿಧ ಹು¨ªೆಗಳಲ್ಲಿ ಸಮಾಜ ಸೇವೆ ಮಾಡುವ ಅವಕಾಶ ನೀಡಿ ಇಷ್ಟು ಎತ್ತರಕ್ಕೆ ಬೆಳೆಸಿದ್ದಿರಿ ಎಂದು ಹೇಳಿ ಅವರು  ಕೃತಜ್ಞತೆ  ಸಲ್ಲಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಡಾ| ಎನ್‌.  ಎ. ಹೆಗ್ಡೆ ಮಾತನಾಡಿ ಮಹಿಳೆಯರು ಸಮಾಜದ ಮುಖ್ಯ ವಾಹಿನಿಯಲ್ಲಿ ಸೇರ್ಪಡೆಗೊಂಡು ಸ್ವಾವಲಂಬಿ ಬದುಕಿಗೆ ಮಹತ್ವರ ಆದ್ಯತೆ ನೀಡಬೇಕು. ಹೆಣ್ಣು ಮಗುವನ್ನು ಆರೋಗ್ಯಕರ ಸ್ಥಾನಮಾನದೊಂದಿಗೆ ಪೋಷಿಸಬೇಕು ಎಂದರು. ವಿದ್ವಾನ್‌ ರಾಧಾಕೃಷ್ಣ ಭಟ್‌, ಲಯನ್‌ ಡಾ| ಶಂಕರ್‌  ಕೆ. ಟಿ., ರವೀಂದ್ರ  ಶೆಟ್ಟಿ ಕೊಟ್ರಪಾಡಿ ಶುಭ ಹಾರೈಸಿ ಮಾತನಾಡಿದರು. ತುಳು ಕನ್ನಡ  ವೆಲ್ಪೇರ್‌ನ ಅಧ್ಯಕ್ಷ ಎ. ಕೆ. ಹರೀಶ್‌ ಸ್ವಾಗತಿದರು.ಅಶೋಕ್‌ ವಳದೂರ್‌ ಅತಿಥಿಗಳನ್ನು ಪರಿಚ ಯಿಸಿ ಕಾರ್ಯಕ್ರಮ ನಿರೂಪಿಸಿದರು. ಗೀತಾ  ಶೆಟ್ಟಿ ಸಮ್ಮಾನ ಪತ್ರ ವಾಚಿಸಿದರು. ಆಶಾ ಪಿ.  ಶೆಟ್ಟಿ ವಂದಿಸಿ ದರು. ವೇದಿಕೆಯಲ್ಲಿ ಉದಯ ಶೆಟ್ಟಿ  ಪೆಲತ್ತೂರು, ಶುಭಾ ಸತೀಶ್‌ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಸಂತಿ ಎಸ್‌. ಶೆಟ್ಟಿ, ಉಪಾಧ್ಯಕ್ಷೆ ಲೀಲಾ ಗಣೇಶ್‌ ಕಾರ್ಕಳ ಉಪಸ್ಥಿತರಿದ್ದರು. ಸಂಸ್ಕೃತಿ ಕಾರ್ಯಕ್ರಮದಲ್ಲಿ ಮಕ್ಕಳ  ನೃತ್ಯ ವೈಭವ ಮತ್ತು ಗಣೇಶ್‌ ಎರ್ಮಾಳ್‌ ಅವರಿಂದ  ಸಂಗೀತ ರಸಮಂಜರಿ ನಡೆಯಿತು. ಕೊನೆಯಲ್ಲಿ ಭೋಜನದ ವ್ಯವಸ್ಥೆ ಆಯೋಜಿಸಲಾಗಿತ್ತು.

Advertisement

 ಚಿತ್ರ-ವರದಿ: ರಮೇಶ್‌ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next