Advertisement

‘ಪೆಪ್ಪೆರೆರೆ ಪೆರೆರೆರೆ ಊದುವ ಸಮಯ

12:22 AM Jul 18, 2019 | sudhir |

ಖ್ಯಾತ ನಟ ಶೋಭರಾಜ್‌ ಪಾವೂರು ಆ್ಯಕ್ಷನ್‌ ಕಟ್ ಹೇಳಿದ ‘ಪೆಪ್ಪೆರೆರೆ ಪೆರೆರೆರೆ’ ತುಳು ಸಿನೆಮಾ ಶೂಟಿಂಗ್‌ ಪೂರ್ಣಗೊಳಿಸಿ ಇದೀಗ ಕೊನೆಯ ಹಂತದ ಸಿದ್ಧತೆಯಲ್ಲಿದೆ. ತುಳು ರಂಗಭೂಮಿ, ಸಿನೆಮಾ, ಕನ್ನಡ ಸಿನೆಮಾ, ಕಿರುತೆರೆಯಲ್ಲಿ ಸಾಕಷ್ಟು ಕೆಲಸ ಮಾಡಿದ ಶೋಭರಾಜ್‌ ಪೆಪ್ಪೆರೆರೆ ಪೆರೆರೆರೆ ಸಿನೆಮಾವನ್ನು ಕೈಗೆತ್ತಿಕೊಂಡು ರೆಡಿ ಮಾಡಿದ್ದಾರೆ. ಅವರೇ ಹೇಳುವ ಪ್ರಕಾರ ‘ಇದೊಂದು ಬಹುನಿರೀಕ್ಷೆಯ ಸಿನೆಮಾ. ಹೀಗಾಗಿ ಯಾವುದೇ ಅವಸರ ಮಾಡದೆ, ಎಲ್ಲವೂ ಸಿದ್ಧವಾದ ಬಳಿಕ ಸಿನೆಮಾ ಬಗ್ಗೆ ಮಾತನಾಡಲಿದ್ದೇನೆ. ಇದಕ್ಕಾಗಿಯೇ ಸುದ್ದಿ ಮಾಡದೆ ಶೂಟಿಂಗ್‌ ಆರಂಭಿಸಿ ಮುಗಿಸಿದ್ದೇವೆ ಎನ್ನುವುದು ಅವರ ಲೆಕ್ಕಾಚಾರ.

Advertisement

ಕರಾವಳಿಯ ಸೂಪರ್‌ ಸ್ಟಾರ್‌ಗಳಾದ ನವೀನ್‌ ಡಿ.ಪಡೀಲ್, ಅರವಿಂದ ಬೋಳಾರ್‌, ಭೋಜರಾಜ್‌ ವಾಮಂಜೂರು, ಸತೀಶ್‌ ಬಂದಳೆ, ಸಾಯಿಕೃಷ್ಣ, ಜೆ.ಪಿ.ತೂಮಿನಾಡ್‌ ಸೇರಿದಂತೆ ಹಲವು ಕಲಾವಿದರು ಸಿನೆಮಾದಲ್ಲಿ ಬಣ್ಣಹಚ್ಚಿದ್ದಾರೆ. ಚೈತ್ರ ಶೆಟ್ಟಿ ಮುಖ್ಯಭೂಮಿಕೆಯಲ್ಲಿದ್ದಾರೆ. ಶೋಭರಾಜ್‌ ಆ್ಯಕ್ಷನ್‌ ಕಟ್ ಹೇಳುವ ಜತೆಗೆ ಸಿನೆಮಾದಲ್ಲಿ ಬಣ್ಣಹಚ್ಚಿದ್ದಾರೆ. ಗುರು ಬಾಯಾರ್‌ ಸಿನೆಮಾಕ್ಕೆ ಸಂಗೀತ ಒದಗಿಸಿದ್ದಾರೆ. ಸದ್ಯ ಎಕ್ಕೂರು ಭಾಗದಲ್ಲಿ ಸಿನೆಮಾದ ಶೂಟಿಂಗ್‌ ನಡೆಯುತ್ತಿದೆ. ಸಿನೆಮಾದ ಪೂರ್ಣ ಶೂಟಿಂಗ್‌ ಮುಗಿದ ಬಳಿಕವಷ್ಟೇ ಸಿನೆಮಾದ ಕುರಿತಂತೆ ಚಿತ್ರತಂಡ ಮಾತನಾಡಲು ನಿರ್ಧರಿಸಿದೆ. •

Advertisement

Udayavani is now on Telegram. Click here to join our channel and stay updated with the latest news.

Next