Advertisement
ಸಿನೆಮಾ ಶುಕ್ರವಾರ ಬಿಡುಗಡೆಯಾಗಿದ್ದು, ಅಲ್ಲಿಂದ ಸೋಮವಾರದ ವರೆಗೆ ಎರಡೂ ಜಿಲ್ಲೆಗಳ ಬಹುತೇಕ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಆರ್‌ಎಸ್ ಸಿನೆಮಾಸ್ ಬ್ಯಾನರ್‌ನಲ್ಲಿ ರೂಪೇಶ್ ಶೆಟ್ಟಿ ಮತ್ತು ರಾಕೇಶ್ ಕದ್ರಿ ನಿರ್ದೇಶನದ “ಗಿರಿಗಿಟ್’ ಕೋಸ್ಟಲ್‌ವುಡ್‌ನಲ್ಲಿ ಹೊಸ ಭರವಸೆ ಮೂಡಿಸಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಕರಾವಳಿ ಮಾತ್ರ ವಲ್ಲದೆ, ಯುಎಇ, ಕತಾರ್, ಒಮನ್‌ನಲ್ಲಿಯೂ ಏಕಕಾಲದಲ್ಲಿ ಬಿಡುಗಡೆಯಾಗಿದೆ.
Related Articles
ಭಾರತ್ ಮಾಲ್‌ನ ಬಿಗ್ ಸಿನೆಮಾಸ್ ನಲ್ಲಿ ಶುಕ್ರವಾರ ನಡೆದ ಚಿತ್ರದ ಉದ್ಘಾಟನ ಸಮಾರಂಭದಲ್ಲಿ ನಿರ್ದೇಶಕ, ನಟ ದೇವದಾಸ್ ಕಾಪಿ ಕಾಡ್ ಮಾತನಾಡಿ, “ಗಿರಿಗಿಟ್’ ತುಳು ಚಲನಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ತುಳು ಪ್ರೇಕ್ಷಕರು ಚಿತ್ರವನ್ನು ಗೆಲ್ಲಿಸಬೇಕು ಎಂದರು. ನಟ ರೂಪೇಶ್ ಶೆಟ್ಟಿ, ನಟಿ ಶಿಲ್ಪಾ ಶೆಟ್ಟಿ, ಭೋಜರಾಜ ವಾಮಂಜೂರು, ರೋಶನ್ ಶೆಟ್ಟಿ, ಪ್ರಸನ್ನ ಶೆಟ್ಟಿ ಬೈಲೂರು, ತಾರಾನಾಥ ಶೆಟ್ಟಿ ಬೋಳಾರ, ಧನರಾಜ್, ಮಂಜುನಾಥ ಅತ್ತಾವರ, ಪ್ರೇಮ್ ಶೆಟ್ಟಿ ದುಬಾೖ, ರಾಕೇಶ್ ಕದ್ರಿ, ನಾರಾಯಣ ಪೂಜಾರಿ, ರವೀಂದ್ರ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು.
Advertisement