Advertisement
ಉತ್ತಮ ಸಂದೇಶ ನೀಡಿದರೆ ಕರಾವಳಿಯ ಜನ ಖಂಡಿತಾ ಇಷ್ಟ ಪಡುತ್ತಾರೆ ಎಂಬುದಕ್ಕೆ ಇದೀಗ ಬಿಡುಗಡೆಗೊಂಡು ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವ ಬೆಲ್ಚಪ್ಪ ತುಳು ಚಿತ್ರವೇ ಸಾಕ್ಷಿ. ಉತ್ತಮ ಕಥೆ ಕೊಟ್ಟರೆ, ಕಥೆಯ ಜತೆ ಹಾಸ್ಯ ಇದ್ದರೆ ಜನ ಖಂಡಿತಾ ಇಷ್ಟ ಪಡುತ್ತಾರೆ ಎಂಬುದನ್ನು ಬೆಲ್ಚಪ್ಪ ಮೂಲಕ ನಿರ್ದೇಶಕರು ನಿರೂಪಿಸಿದ್ದಾರೆ.
ಚಿತ್ರದಲ್ಲಿ ತುಳುವಿನ ಕೆಟ್ಟ ಹಾಸ್ಯ ಸಂಭಾಷಣೆ ಇಲ್ಲ. ಕಥೆಯ ಜತೆಗೆ ಸಾಮಾಜಿಕವಾಗಿ ಸಂದೇಶ ಸಾರುವ ಮೂಲಕ ಬೆಲ್ಚಪ್ಪ ಮನೆ – ಮನ ಗೆದ್ದಿದ್ದಾನೆ. ಇದು ರಜನೀಶ್ ಅವರ ಪ್ರಯೋಗಾತ್ಮಕ ಚಿತ್ರ ಎಂಬುದನ್ನು ಮರೆಯಬಾರದು. ಕಥೆಯ ಜತೆಗೆ ಸಾಗುವ ಹಾಸ್ಯಕ್ಕೆ ಹೆಚ್ಚು ಪ್ರಾಧ್ಯಾನತೆ ನೀಡಿದ್ದು ಕೆಲವೊಂದು ಜನರ ಅಪಪ್ರಚಾರದ ನಡುವೆಯೂ ಹಿಂದಿನ ಎಲ್ಲಾ ತುಳು ಚಿತ್ರವನ್ನು ಹಿಂದಿಕ್ಕಿ ಹೊಸ ದಾಖಲೆಯತ್ತ ಮುನ್ನುಗ್ಗುತ್ತಿದೆ. ಚಿತ್ರದಲ್ಲಿ ವಿಭಿನ್ನ ಪಾತ್ರ ನಿರ್ವಹಿಸಿದ ಅರವಿಂದ ಬೋಳಾರ್ ಚಿತ್ರ ರಸಿಕರನ್ನು ರಂಜಿಸಿದರೆ, ಮನೆಕೆಲಸದವನಾಗಿ ಹಾಸ್ಯದ ಜತೆ ಜತೆಗೆ ತನ್ನ ಜವಾಬ್ದಾರಿ ನಿರ್ವಹಿಸಿದ ಉಮೇಶ್ ಮಿಜಾರ್ ಅವರ ಪಾತ್ರವನ್ನು ಎಲ್ಲರೂ ನೆಚ್ಚಿಕೊಂಡಿದ್ದಾರೆ. ಕುಡಿತದ ದಾಸನಾಗಿ ಕೊನೆಗೆ ಸಾವಿನ ಅಂಚಿನಲ್ಲಿ ಬೀಳುವ ಸನ್ನಿವೇಶವನ್ನು ದೀಪಕ್ ರೈ ಪಾಣಾಜೆ ಚಿತ್ರ ರಸಿಕರ ಕಣ್ಣು ಒದ್ದೆ ಆಗುವಂತೆ ನಟಿಸಿದ್ದು ಅವರ ನಟನಾ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ನಟಿ ಯಶಸ್ವಿನಿ ದೇವಾಡಿಗ, ಸುಕನ್ಯಾ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹೊಸ ಕಲಾವಿದರೇ ಕೂಡಿರುವ ಈ ಚಿತ್ರ ಅನುಭವಿಗಳಿಗೇ ಸಾಟಿ ಇಲ್ಲದಂತೆ ಕಲಾವಿದರು ಅಭಿನ ಯಿಸಿದ್ದಾರೆ. ಒಟ್ಟಾರೆಯಾಗಿ ಕೋಸ್ಟಲ್‌ವುಡ್‌ನಲ್ಲಿ ಇದೀಗ ಬೆಲ್ಚಪ್ಪದ್ದೇ ಸುದ್ದಿ ಆಗುತ್ತಿದ್ದು ಕುಟುಂಬ ಸಮೇತರಾಗಿ ಚಿತ್ರ ನೋಡಲು ತುಳುನಾಡಿನ ಜನ ಬರುತ್ತಿದ್ದಾರೆ.