ಮೀರಾರೋಡ್: ಕಳೆದ ಎರಡು ವರ್ಷಗಳಿಂದ ಕೋವಿಡ್ ಹಾವಳಿಯಿಂದಾಗಿ ಅಸ್ತವ್ಯಸ್ತಗೊಂಡ ಜನಜೀವನ ಯಥಾಸ್ಥಿತಿಗೆ ಬರುತ್ತಿದ್ದು, ಬಂಟರ ಸಂಘ ಮುಂಬಯಿ ಇದರ ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿಯು ಸಾಂಪ್ರದಾಯಿಕ ಶೈಲಿಯಲ್ಲಿ ಇಲ್ಲಿನ ತುಳು-ಕನ್ನಡಿಗ ಜನತೆಗೆ ಜನಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಇಂದಿನ ಸ್ಪರ್ಧಾತ್ಮಕ ಜೀವನದ ಹಾದಿಯಲ್ಲೂ ಇಂತಹ ಭಕ್ತಿಪ್ರಧಾನ ಪರಂಪರೆಯನ್ನು ಮೇಳೈಸುವ ಇಂದಿನ ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ಅಭಿನಂದನೀಯ. ಇಂತಹ ಕಾರ್ಯಕ್ರಮಗಳಿಂದ ಯುವ ಪೀಳಿ ಗೆಗಳಲ್ಲೂ ಧಾರ್ಮಿಕ ಜಾಗೃತಿ ಮೂಡು ತ್ತದೆ. ಸ್ಥಳೀಯ ಸಮಿತಿಯಿಂದ ಇಂತಹ ಬಾಂಧವ್ಯ ಮೂಡಿಸುವ ಕಾರ್ಯಕ್ರಮ ಗಳು ಸದಾ ನಡೆಯುತ್ತಿರಲಿ ಎಂದು ಮೀರಾ-ಭಾಯಂದರ್‌ನ ಮಾಜಿ ಎಂಎಲ…ಎ ನರೇಂದ್ರ ಮೆಹ್ತಾ ತಿಳಿಸಿದರು.
ಸೆವೆನ್ ಸ್ಕ್ವೇರ್ ಸ್ಕೂಲ್ ಗ್ರೌಂಡ್‌ನಲ್ಲಿ ಡಿ. 12ರಂದು ಬಂಟರ ಸಂಘ ಮುಂಬಯಿ ಇದರ ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ವಿಜಯಕುಮಾರ್ ಕೊಡಿಯಾಲ್‌ಬೈಲ್ ನೇತೃತ್ವದ ಕಲಾಸಂಗಮ ತಂಡದ ಶಿವಧೂತೆ ಗುಳಿಗೆ ತುಳು ನಾಟಕ ಪ್ರದರ್ಶನದ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಮೀರಾ – ಭಾಯಂದರ್‌ನಲ್ಲಿ ಸುಸಜ್ಜಿತ ಸಭಾಭವನದ ಕೊರತೆಯಿತ್ತು. ಮುಂದಿನ ವರ್ಷದಲ್ಲಿ ನೂತನ ಸಭಾಭವನವು ಜನತೆಗೆ ಅರ್ಪಣೆಯಾಗಲಿದೆ. ಇದು ಎಲ್ಲ ಸಮುದಾಯಗಳ ಜನತೆಗೆ ಸಹಕಾರಿಯಾಗಲಿದೆ. ಈಗಾಗಲೇ ನಾನು ಇಲ್ಲಿನ ಜನತೆಗಾಗಿ ದುಡಿದಿದ್ದೇನೆ. ಬಹುಪಯೋಗಿ ಮೆಟ್ರೋದಂತಹ ಯೋಜನೆಗಳ ಕೆಲಸ ಕಾರ್ಯಗಳು, ಮಾತ್ರವಲ್ಲದೆ ಮೀರಾ-ಭಾಯಂದರ್ ನಗರವನ್ನು ಮಾದರಿ ನಗರವನ್ನಾಗಿ ಪರಿವರ್ತಿಸುವ ಇನ್ನಿತರ ಹಲವಾರು ಯೋಜನೆಗಳ ಕಾರ್ಯಗಳು ಉತ್ತಮವಾಗಿ ನಡೆಯುತ್ತಿವೆ. ತುಳು-ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸಿದ್ದೇನೆ. ಅದರಲ್ಲೂ ಬಂಟ್ಸ್ ಸಮುದಾಯಕ್ಕೆ ನನ್ನ ನಿರಂತರ ಬೆಂಬಲವಿದೆ. ಮೀರಾ-ಭಾಯಂದರ್ ಅಭಿವೃದ್ಧಿಗಾಗಿ ನಾವೆಲ್ಲರು ಒಂದಾಗಿ ಶ್ರಮಿಸೋಣ ಎಂದರು.
ಮುಖ್ಯ ಅತಿಥಿಯಾಗಿದ್ದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ ಮಾತನಾಡಿ, ಮುಂಬಯಿಯÇÉೇ ಹುಟ್ಟಿ ಬೆಳೆದ ನಮ್ಮವರಿಗೆ ಆಚಾರ-ವಿಚಾರ, ಸಂಸ್ಕೃತಿ, ಸಂಸ್ಕಾರಗಳ ಬಗ್ಗೆ ಅರಿವು ಮೂಡಿಸುವ ಇಂತಹ ಧಾರ್ಮಿಕ ಮಹತ್ವದ ನಾಟಕಗಳು ನಿಜವಾಗಿಯೂ ನಮ್ಮ ಜೀವನದಲ್ಲಿ ಮಾನಸಿಕ ನೆಮ್ಮದಿ ತರುತ್ತದೆ. ದೈವ-ದೇವರ ಮಹತ್ವದ ಅರಿವನ್ನು ನಾವು ಗಣನೆಗೆ ತೆಗೆದುಕೊಂಡರೆ ಜೀವನ ಸಾರ್ಥಕವಾಗುತ್ತದೆ. ದೈವ-ದೇವರ ಭಕ್ತಿ, ದೇಶ ಭಕ್ತಿ, ಸಂಪ್ರದಾಯ ಜೀವನ ಶೈಲಿಯನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇಂತಹ ಭಕ್ತಿ ಪ್ರಧಾನವಾದ ನಾಟಕಗಳು ಸದಾ ಮೂಡಿಬರಲಿ ಎಂದರು.
ಇನ್ನೋರ್ವ ಅತಿಥಿ ಬಂಟರ ಸಂಘದ ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಕರ್ನೂರು ಮೋಹನ್ ರೈ ಮಾತನಾಡಿ, ಮೀರಾ-ಭಾಯಂದರ್ ಪರಿಸರದಲ್ಲಿ ಅನೇಕ ವರ್ಷಗಳನ್ನು ಕಳೆದ ನನಗೆ ಇಲ್ಲಿನ ತುಳು-ಕನ್ನಡಿಗರು ನಮ್ಮೂರ ಚಟುವಟಿಕೆಗಳಲ್ಲಿ ಭಾಗವಹಿಸಿ ಬೆಂಬಲ ನೀಡುವಷ್ಟು ಬೇರೆ ಎಲ್ಲೂ ಕಾಣಸಿಗುವುದಿಲ್ಲ. ದೇವಾಲಯವಿರಲಿ, ಸಂಘಟನೆಯಿರಲಿ ಅಲ್ಲಿ ಸಾಮಾಜಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದರೆ ಮಾತ್ರ ಅದಕ್ಕೆ ಪೂರ್ಣ ಪ್ರಮಾಣದ ಅರ್ಥವಿದೆ. ಮೀರಾ-ಭಾಯಂದರ್‌ನಲ್ಲಿ ಇಂತಹ ಕಾರ್ಯಕ್ರಮಗಳು ಸದಾ ನಡೆಯುತ್ತಿರಲಿ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕಲಾ ಸಂಗಮದ ನಾಟಕ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್‌ಬೈಲ್ ಅವರನ್ನು ಗೌರವಿಸಲಾಯಿತು. ಬಂಟರ ಸಂಘ ಮುಂಬಯಿ ಇದರ ಶಿಕ್ಷಣ ಸಮಿತಿಯ ಉಪ ಕಾರ್ಯಾಧ್ಯಕ್ಷ ಕಿಶೋರ್ ಕುಮಾರ್ ಕುತ್ಯಾರ್, ಮಹಿಳಾ ವಿಭಾಗದ ಜತೆ ಕಾರ್ಯದರ್ಶಿ ರತ್ನಾ ಶೆಟ್ಟಿ, ಸuಳೀಯ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಶಿವರಾಮ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರವೀಂದ್ರ ಶೆಟ್ಟಿ ಕೊಟ್ರಪಾಡಿಗುತ್ತು, ಜತೆ ಕಾರ್ಯದರ್ಶಿ ಶಂಕರ್ ಕೆ. ಶೆಟ್ಟಿ, ಗೌರವ ಕೋಶಾಧಿಕಾರಿ ದಾಮೋದರ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಲಿನಿ ಎಸ್. ಶೆಟ್ಟಿ ಸಚ್ಚೇರಿಗುತ್ತು ಉಪಸ್ಥಿತರಿದ್ದರು.
ಸuಳೀಯ ಸಮಿತಿಯ ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ವಸಂತಿ ಎಸ್. ಶೆಟ್ಟಿ ಪ್ರಾರ್ಥನೆಗೈದರು. ಕವಿತಾ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ಸ್ಥಳೀಯ ಮಕ್ಕಳಿಂದ ನೃತ್ಯ ವೈವಿಧ್ಯ ಹಾಗೂ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್ ನೇತೃತ್ವದ ಕಲಾ ಸಂಗಮ ತಂಡದಿಂದ ಶಿವಧೂತೆ ಗುಳಿಗೆ ತುಳು ನಾಟಕ ಪ್ರದರ್ಶನಗೊಂಡಿತು.
-ಚಿತ್ರ-ವರದಿ: ವೈ. ಟಿ. ಶೆಟ್ಟಿ ಹೆಜಮಾಡಿ