Advertisement

ತುಳು ಸಿನಿಮಾ ಪ್ರಿಯರ ಗಮನಕ್ಕೆ …

12:03 PM May 29, 2018 | |

ಕರಾವಳಿಯಲ್ಲಿ ಯಶಸ್ಸು ಕಂಡ ತುಳು ಚಿತ್ರಗಳು, ನಂತರದ ದಿನಗಳಲ್ಲಿ ಬೆಂಗಳೂರು ಸೇರಿದಂತೆ ಇತರೆಡೆ ಪ್ರದರ್ಶನ ಕಾಣುತ್ತವೆ. ಈ ಮೂಲಕ ಊರಿನಿಂದ ದೂರ ಇರುವ ತುಳು ಸಿನಿಮಾ ಪ್ರೇಮಿಗಳನ್ನು ರಂಜಿಸುವ ಕೆಲಸವನ್ನು ಆಗಾಗ ಕೆಲವು ಸಿನಿಮಾಗಳು ಮಾಡುತ್ತಿರುತ್ತವೆ. ಈಗ ಆ ಸಾಲಿಗೆ ಮತ್ತೂಂದು ಸಿನಿಮಾ ಸೇರ್ಪಡೆಯಾಗಿದೆ. ಅದು “ಅಪ್ಪೆ ಟೀಚರ್‌’. ಮಾರ್ಚ್‌ 23 ರಂದು ಮಂಗಳೂರಿನಲ್ಲಿ ತೆರೆಕಂಡು ಯಶಸ್ಸು ಕಂಡಿದ್ದ “ಅಪ್ಪೆ ಟೀಚರ್‌’ ಚಿತ್ರ ಈ ವಾರದಿಂದ ಬೆಂಗಳೂರಿನಲ್ಲಿ ಪ್ರದರ್ಶನ ಕಾಣಲಿದೆ.

Advertisement

ಇದೇ ಶುಕ್ರವಾರದಿಂದ ಬೆಂಗಳೂರಿನ ಹಲವು ಚಿತ್ರಮಂದಿರಗಳಲ್ಲಿ “ಅಪ್ಪೆ ಟೀಚರ್‌’ ಚಿತ್ರ ಪ್ರದರ್ಶನ ಕಾಣಲಿದೆ. ಸಂಪಿಗೆ ರಸ್ತೆಯ ಸವಿತಾ ಸಿನಿಸ್ಕ್ವೇರ್‌, ಯಶವಂತಪುರದ ವೈಷ್ಣವಿ ಸಪೈರ್‌ ಮಾಲ್‌, ವೈಟ್‌ಫೀಲ್ಡ್‌, ಬನ್ನೇರ್‌ಘಟ್ಟ ರಸ್ತೆಯ ವೆಗಸಿಟಿ ಮಾಲ್‌, ಜೆ.ಪಿ.ನಗರದ ಬೆಂಗಳೂರು ಸೆಂಟ್ರಲ್‌ ಮಾಲ್‌ಗ‌ಳಲ್ಲಿ “ಅಪ್ಪೆ ಟೀಚರ್‌’ ಚಿತ್ರ ಪ್ರದರ್ಶನ ಕಾಣಲಿದೆ. ಈ ಮೂಲಕ ಬೆಂಗಳೂರಿನಲ್ಲಿರುವ ತುಳು ಸಿನಿಮಾ ಪ್ರೇಮಿಗಳಿಗೆ “ಅಪ್ಪೆ ಟೀಚರ್‌’ ನೋಡುವ ಅವಕಾಶ ಸಿಕ್ಕಂತಾಗಿದೆ. 

ಈ ಚಿತ್ರವನ್ನು ಸ್ವಯಂಪ್ರಭ ಎಂಟರ್‌ಟೈನ್‌ಮೆಂಟ್‌ನಡಿ ಕೆ. ರತ್ನಾಕರ ಕಾಮತ್‌ ನಿರ್ಮಿಸಿರುವ ಈ ಚಿತ್ರವನ್ನು  ಕಿಶೋರ್‌ ಮೂಡಬಿದಿರೆ ನಿರ್ದೇಶಿಸಿದ್ದಾರೆ. ಚಿತ್ರದ  ತಾರಾಗಣದಲ್ಲಿ ದೇವದಾಸ್‌ ಕಾಪಿಕಾಡ್‌, ಭೋಜರಾಜ್‌ ವಾಮಂಜೂರ್‌, ನವೀನ್‌.ಡಿ.ಪಡೀಲ್‌, ಅರವಿಂದ್‌ ಬೋಳಾರ್‌, ಗೋಪಿನಾಥ್‌ ಭಟ್‌, ಉಷಾ ಭಂಡಾರಿ, ನಾಯಕನಾಗಿ ಸುನೀಲ್‌, ಉಮೇಶ್‌ ಮಿಜಾರ್‌ ಹಾಗೂ ತುಳುನಾಡಿನ ಎಲ್ಲಾ ಹಾಸ್ಯ ಕಲಾವಿದರು ನಟಿಸಿದ್ದಾರೆ. ಚಿತ್ರಕ್ಕೆ ಉದಯ್‌ ಲೀಲಾ ಛಾಯಾಗ್ರಹಣ, ವನೀಲ್‌ ವೇಗಸ್‌  ಸಂಗೀತ, ಪ್ರದೀಪ್‌ ನಾಯಕ್‌ ಸಂಕಲನವಿದೆ. 

Advertisement

Udayavani is now on Telegram. Click here to join our channel and stay updated with the latest news.

Next