Advertisement

ತುಳು ಕನ್ನಡ ವೆಲ್ಫೇರ್‌ ಅಸೋಸಿಯೇಶನ್‌ ಮೀರಾ ಭಾಯಂದರ್‌ ವರ್ಷದ ನೆಂಪು 

05:14 PM Mar 22, 2017 | Team Udayavani |

ಮುಂಬಯಿ: ಪಕ್ಷ ಯಾವುದೇ ಇರಲಿ, ರಾಜಕೀಯವಾಗಿ ನಮ್ಮವರನ್ನು  ಪ್ರೋತ್ಸಾಹಿಸಿ ಬೆಂಬಲಿಸೋಣ. ಮೀರಾಧಿಭಾಯಂದರ್‌ ಕ್ಷೇತ್ರದಲ್ಲಿ ನಮ್ಮೂರಿನವರು  ಹೆಚ್ಚಿನ ಸಂಖ್ಯೆಯಲ್ಲಿದ್ದು ರಾಜಕೀಯವಾಗಿ ನಮ್ಮ ಪ್ರತಿನಿಗಳನ್ನು ಬೆಂಬಲಿಸಿ ರಾಜಕೀಯವಾಗಿ ಶಕ್ತಿಯನ್ನು ಪಡೆಯೋಣ ಎಂದು ಮಹಾರಾಷ್ಟ್ರ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಹಾಗೂ ನವ ಮುಂಬಯಿಯ ಸಮಾಜ ಸೇವಕ, ಉದ್ಯಮಿ ಸಂತೋಷ್‌ ಡಿ. ಶೆಟ್ಟಿ ಅವರು ನುಡಿದರು.

Advertisement

ತುಳು ಕನ್ನಡ ವೆಲ್ಫೆàರ್‌ ಅಸೋಸಿಯೇಶನ್‌ ವತಿಯಿಂದ ಮೀರಾರೋಡ್‌ನ‌ ಸ್ವಾಮಿ ನಾರಾಯಣ ಸಭಾಗೃಹದಲ್ಲಿ ನಡೆದ ವರ್ಷದ ನೆಂಪು 2017ರ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜಕೀಯವಾಗಿ ಯಾವುದೇ ಪಕ್ಷವಿರಲಿ ನಮ್ಮೂರಿನವರನ್ನು ಬೆಂಬಲಿಸಬೇಕು. ನಮ್ಮೂರಿನವರ ವೇದಿಕೆ ಇಲ್ಲಿ ರಾಜಕೀಯವಾಗಿ ನಿರ್ಮಾಣವಾಗಬೇಕು. ನಮ್ಮ ಕರಾವಳಿ ಜಿಲ್ಲೆಯ ಎಲ್ಲ ತರದ ವಿವಿಧ ಕಾರ್ಯಕ್ರಮಗಳು ಮೀರಾ ಧಿಭಾಯಂದರ್‌ ಪರಿಸರದಲ್ಲಿ  ಅತೀ ಹೆಚ್ಚಾಗಿ ನಡೆಯುತ್ತಿರುವುದು ಶ್ಲಾಘನೀಯ ಎಂದು ನುಡಿದು ಪರಿಸರದ ತುಳುಧಿಕನ್ನಡಿಗರನ್ನು ಶ್ಲಾ ಸಿದರು.

ಅತಿಥಿಯಾಗಿ ಆಗಮಿಸಿದ ವಸಾಯಿ ಶ್ರೀ ಮಣಿಕಂಠ ಸೇವಾ ಸಮಿತಿಯ ಅಧ್ಯಕ್ಷ ಶಂಕರ್‌ ಆಳ್ವ ಅವರು ಮಾತನಾಡಿ, ಇಂದಿನ ಕಾರ್ಯಕ್ರಮ  ಅರ್ಥಪೂರ್ಣವಾಗಿದ್ದು, ಇಂತಹ ಕಾರ್ಯಕ್ರಮಗಳನ್ನು ಪ್ರೇರೆಧೀಪಿಸಿ, ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಸಹಕರಿಸಿ ಎಂದು ನುಡಿದರು.

ಅತಿಥಿಯಾಗಿ ಆಗಮಿಸಿದ ಕಾಮೋಟೆ ತುಳು ಕನ್ನಡ ವೆಲ್ಫೆàರ್‌ ಅಸೋಸಿಯೇಶನಿನ ಅಧ್ಯಕ್ಷ ಬೋಳ ರವಿ ಪೂಜಾರಿ ಅವರು ಮಾತನಾಡಿ,  ನಾಡು ನುಡಿಯ ಕಾರ್ಯಕ್ರಮಗಳಿಗೆ ಸದಾ ಪ್ರೋತ್ಸಾಹಿಸಿ, ಸಂಸ್ಕೃತಿಧಿಸಂಸ್ಕಾರವನ್ನು ಉಳಿಸಿ, ಬೆಳೆಸುವಲ್ಲಿ ನಮ್ಮ ಯುವ ಪೀಳಿಗೆಯನ್ನು ಮುಖ್ಯವಾಹಿನಿಗೆ ತರುವಲ್ಲಿ ಸರ್ವರ ಪ್ರೋತ್ಸಾಹ ಅತ್ಯಗತ್ಯ ಎಂದು ಅಭಿಪ್ರಾಯಿಸಿದರು.

ಇನ್ನೋರ್ವ ಅತಿಥಿ ಅರುಣ್‌ ಕ್ಲಾಸಸ್‌ನ ಕಾರ್ಯಾಧ್ಯಕ್ಷ ಅರುಣ್‌ ಪಕ್ಕಳ ಅವರು ಮಕ್ಕಳಲ್ಲಿ ನಮ್ಮ ಸಂಸ್ಕೃತಿ ಹಾಗೂ ಪರಂಪರೆಗಳು ಉಳಿಯಬೇಕಾದರೆ ಪಾಲಕರು ಅತೀ ಕಾಳಜಿ ವಹಿಸುವುದು ಅಗತ್ಯ ಎಂದರು.

Advertisement

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಬಿಜೆಪಿ ದಕ್ಷಿಣ ಭಾರತೀಯರ ಅಧ್ಯಕ್ಷ ಎಳಿಯಾಳ ಉದಯ ಹೆಗ್ಡೆ ಅವರು ಮಾತನಾಡಿ, ಸಮಾಜ ಸೇವೆಯ ದೃಷ್ಟಿಯಿಂದ ಇಂತಹ ಕಾರ್ಯಕ್ರಮಗಳು ಜರಗುತ್ತಿದೆ. ಸಂಘಧಿಸಂಸ್ಥೆಗಳು ಮಾಡುತ್ತಿರುವ ಸಮಾಜ ಪರ ಕೆಲಸ ಕಾರ್ಯಗಳನ್ನು ಬೆಂಬಲಿಸಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಮನೀಯ ಸಾಧನೆಗೈದ ರಂಗನಟ ಗುಣಪಾಲ್‌ ಉಡುಪಿ, ಧಾರ್ಮಿಕ ಮುಖಂಡ ರಮೇಶ್‌ ಸಾಲ್ಯಾನ್‌  ಬಜಗೋಳಿ, ಪತ್ರಿಕಾ ರಂಗದ ಸುಧಾಕರ ಸುವರ್ಣ ತಿಂಗಳಾಡಿ, ಉದ್ಯಮ ಕ್ಷೇತ್ರದ ನವೀನ್‌ ಭಂಡಾರಿ,  ಭಕ್ತ ಲಹರಿ ಶ್ಯಾಮ ಅಮೀನ್‌, ನಾಟಕ ರಂಗದ ಲೀಲಾಧರ್‌ ಕರ್ಕೇರ ಬೈಕಂಪಾಡಿ, ಸಮಾಜ ಸೇವಕಿ ಹಾಗೂ ರಾಜಕೀಯ  ಧುರೀಣೆ ಲೀಲಾ ಡಿ. ಪೂಜಾರಿ, ಮಹಿಳಾ ಕ್ಷೇತ್ರದ ಸಾಧಕಿ ವಸಂತಿ ಎಸ್‌. ಶೆಟ್ಟಿ ಅವರುರ‌ನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಿ, ಬಿರುದು ಪ್ರದಾನಿಸಿ ಗೌರವಿಸಿ ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಬಂಟರ ಸಂಘ ಮುಂಬಯಿ ಇದರ ವಸಾಯಿ ಡಹಾಣೂ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಶಶಿಕಾಂತ್‌ ಶೆಟ್ಟಿ, ಕರ್ನಾಟಕ ಮಹಾಮಂಡಳಿ ಭಾಯಂದರ್‌  ಅಧ್ಯಕ್ಷರಾದ ರವಿಕಾಂತ್‌ ಶೆಟ್ಟಿ ಇನ್ನ ಸಂಸ್ಥೆ ಗೆ ಶುಭ ಹಾರೈಸಿದರು. ಸಂಘದ ಅಧ್ಯಕ್ಷ ಎ.ಕೆ. ಹರೀಶ್‌, ಉಪಾಧ್ಯಕ್ಷರಾದ ದಾಮೋದರ್‌ ಗುಜರನ್‌, ವಸಂತಿ ಎಸ್‌. ಶೆಟ್ಟಿ, ಗೌರವ ಪ್ರಧಾನ ಲೀಲಾ ಗಣೇಶ್‌ ಕಾರ್ಕಳ, ಕೋಶಾಕಾರಿ ಹೇಮ್‌ ಪ್ರಕಾಶ್‌ ಅಮೀನ್‌, ಆಶಾಲತಾ ಪಿ. ಶೆಟ್ಟಿ, ಸರೋಜಿನಿ ಎಸ್‌. ಅಮೀನ್‌, ರಮೇಶ್‌ ಭಂಡಾರಿ, ಉಮೇಶ್‌ ಬಾಕೂìರು, ಸತೀಶ್‌ ಪೂಜಾರಿ, ಅಶೋಕ್‌ ವಳದೂರು, ಬಾಲಚಂದ್ರ ರೈ, ಅರುಣ್‌ ಸಾಲ್ಯಾನ್‌ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ದೀಪ ಪ್ರಜ್ವಲನೆ ಹಾಗೂ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಜಿ. ಕೆ. ಕೆಂಚನಕೆರೆ ಅವರು ನಿರೂಪಿಸಿದರು. ಮಧ್ಯಾಹ್ನ ಅರಸಿನ ಕುಂಕುಮ ಕಾರ್ಯಕ್ರಮ ನಡೆಯಿತು. ಮಹಿಳಾ ವಿಭಾಗದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ  ಕವಿ, ಲೇಖಕಿ ಲತಾ ಸಂತೋಷ್‌ ಶೆಟ್ಟಿ ಅವರು ಸುದೃಢ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಎಂಬ ಬಗ್ಗೆ ಉಪನ್ಯಾಸ ನೀಡಿದರು.

ಉರ ಪರವೂರ ಕವಿಗಳಿಂದ ಕವಿಗೋಷ್ಠಿ, ವಿಚಾರಗೋಷ್ಠಿ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಹಿಳಾ ವಿಭಾಗಧಿಯುವ ವಿಭಾಗದಿಂದ ನೃತ್ಯ ವೈವಿಧ್ಯ, ಯಕ್ಷಪ್ರಿಯ ಬಳಗದ ವತಿಯಿಂದ ಲವಧಿಕುಶ ಕಾಳಗ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು. ತುಳು ಕಲಾವಿದರು ಮುಂಬಯಿ ಅವರಿಂದ  ಮಂಡೆ ಸಮಾ ಉಂಡಾ ಎಂಬ ತುಳು  ಹಾಸ್ಯ ನಾಟಕ ಪ್ರದರ್ಶನಗೊಂಡಿತು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ತುಳು ಕನ್ನಡಿಗರು ಅಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next