Advertisement
ಶ್ಯಾಮ ತುಳಸಿ – ಇದರ ಎಲೆಗಳು ನೇರಳೆ ಬಣ್ಣದಲ್ಲಿರುವುದರಿಂದ ಇದನ್ನು ಶ್ಯಾಮ ತುಳಸಿ ಎಂದು ಕರೆಯುವರು. ಇದು ಶ್ರೀ ಕೃಷ್ಣನಿಗೆ ಪ್ರಿಯಕರವಾಗಿರುವುದರಿಂದ ಇದನ್ನು ಕೃಷ್ಣ ತುಳಸಿ ಎಂದೂ ಕರೆಯಲಾಗುತ್ತದೆ.
Related Articles
Advertisement
ಹಿಂದೂ ಧರ್ಮದಲ್ಲಿ ದೀಪಾವಳಿ ಬಳಿಕ ಬರುವ ಹಬ್ಬವೇ ತುಳಸಿ ಪೂಜೆ. ಕಾರ್ತಿಕ ಮಾಸದ ಶುಕ್ಲಪಕ್ಷದ ಹನ್ನೆರಡನೇ ದಿನದ ದ್ವಾದಶಿಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ಉತ್ಥಾನ ದ್ವಾದಶಿ ಎಂದೂ ಕರೆಯಲಾಗುತ್ತದೆ.
ತುಳಸಿ ವಿವಾಹಕ್ಕೆ ಪೌರಾಣಿಕ ಕಥೆಯಿದೆ. ವೃಂದಾ ಎಂಬ ಯುವತಿಯು ಜಲಂಧರನೆಂಬ ದುಷ್ಟ ರಾಜನನ್ನು ಮದುವೆಯಾಗುತ್ತಾಳೆ. ಆಕೆಗೆ ವಿಷ್ಣುವಿನ ಮೇಲೆ ಅಪಾರ ಪ್ರೀತಿ ಹಾಗೂ ಭಕ್ತಿ ಇತ್ತು. ಆದರೆ ಇದು ಜಲಂಧರನಿಗೆ ಇಷ್ಟವಿರುವುದಿಲ್ಲ. ಒಮ್ಮೆ ವಿಷ್ಣುವು ಜಲಂಧರ ರೂಪ ತಾಳಿ ವೃಂದಾಳನ್ನು ಮೋಹಿಸುತ್ತಾನೆ. ಅನಂತರ ಶಿವನು ಆಕೆಯ ಗಂಡನನ್ನು ಸಂಹರಿಸುತ್ತಾನೆ. ಅನಂತರ ಆಕೆ ವಿಷ್ಣುವಿಗೆ ಶಾಪವನ್ನು ನೀಡಿ ಚಿತೆಗೆ ಹಾರಿ ಸಾಯುತ್ತಾಳೆ. ಅನಂತರ ವಿಷ್ಣು ಆಕೆಯ ಆತ್ಮವನ್ನು ತುಳಸಿ ಗಿಡವಾಗಿ ಪರಿವರ್ತಿಸಿ ತುಳಸಿಯನ್ನು ವಿವಾಹವಾಗುತ್ತಾನೆ ಎಂಬ ಕಥೆಯಿದೆ.
ತುಳಸಿ ಪೂಜೆಯ ಸಂದರ್ಭ ತುಳಸಿ ಕಟ್ಟೆಯನ್ನು ರಂಗೋಲಿ, ಹೂವುಗಳಿಂದ ಅಲಂಕರಿಸುತ್ತಾರೆ. ತುಳಸಿ ಗಿಡದೊಂದಿಗೆ ಬೆಟ್ಟದ ನೆಲ್ಲಿಕಾಯಿ ಗಿಡ, ಹುಣಸೆ ಗಿಡ ಇಟ್ಟು ತುಳಸಿ ಕಟ್ಟೆಯ ಸುತ್ತಲೂ ದೀಪದ ಹಣತೆಗಳನ್ನು ಹಚ್ಚಲಾಗುತ್ತದೆ. ಅಕ್ಕ- ಪಕ್ಕದ ಮನೆಯವರೆಲ್ಲರೂ ಪೂಜೆಯಲ್ಲಿ ಸೇರುತ್ತಾರೆ. “ಪೂಜಿಪೇ ಶ್ರೀ ತುಳಸೀ ನರಹರಿ ಅರಸೀ’ ಹೀಗೆ ತುಳಸಿಗೆ ಸಂಬಂಧಪಟ್ಟ ಹಾಡುಗಳನ್ನು ಮನೆ ಹೆಂಗಸರು ಹಾಡುತ್ತಾ ಸಂತೋಷ ಪಡುತ್ತಾರೆ. ಹೀಗೆ ತುಳಸಿ ವಿವಾಹವು ಸರಳತೆಯಿಂದ ಕೂಡಿ ಎಲ್ಲರನ್ನೂ ಆಕರ್ಷಿಸುತ್ತದೆ.
ಕಾವ್ಯಾ ರಮೇಶ್ ಹೆಗಡೆ
ಎಂ.ಎಂ.,ಮಹಾವಿದ್ಯಾಲಯ ಶಿರಸಿ