ಬೆಂಗಳೂರು: ರಾಜ್ಯದ ಉತ್ತರ ಒಳನಾಡಿನ ಬೀದರ್‌ನಲ್ಲಿ ಮಂಗಳವಾರವೂ ಅತ್ಯಂತ ಕನಿಷ್ಠ ತಾಪಮಾನ 5.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಈ ಮೂಲಕ ಈ ವರ್ಷ ರಾಜ್ಯದ ಅತ್ಯಂತ ಕನಿಷ್ಠ ತಾಪಮಾನದ ದಾಖಲಾದಂತಾಗಿದೆ.
ಸೋಮವಾರ ಬೀದರ್‌ನಲ್ಲಿ 6.0 ಡಿಗ್ರಿಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇದೀಗ ಅದಕ್ಕಿಂತ ಕಡಿಮೆ ತಾಪಮಾನ ದಾಖಲಾಗಿದ್ದು, ಜಿಲ್ಲೆಗೆ ಸಾರ್ವಕಾಲಿಕ ಕನಿಷ್ಠ ತಾಪಮಾನ ದಾಖಲೆ ಇದಾಗಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.
ಬೀದರ್‌ನಲ್ಲಿ ಮಂಗಳವಾರ ಗರಿಷ್ಠ ತಾಪಮಾನ 26.2 ಹಾಗೂ ಕನಿಷ್ಠ 5.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಈ ಕನಿಷ್ಠ ದಾಖಲಾತಿ ವಾಡಿಕೆ ತಾಪಮಾನಕ್ಕಿಂತ (16.7 ಡಿ.ಸೆ.) -10.1 ನಷ್ಟು ಕಡಿಮೆ ದಾಖಲಾಗಿದೆ. ಈವರೆಗೆ ಜಿಲ್ಲೆಯಲ್ಲಿ ಇಷ್ಟು ಕಡಿಮೆ ಪ್ರಮಾಣದ ಉಷ್ಣಾಾಂಶ ದಾಖಲಾಗಿರಲಿಲ್ಲ.
ಇನ್ನು ಉತ್ತರ ಒಳನಾಡಿನ ವಿಜಯಪುರದಲ್ಲಿ 9.5 ಡಿಗ್ರಿಿ ಸೆಲ್ಸಿಿಯಸ್, ಧಾರವಾಡ 10.2, ಗದಗ 11.4, ಹಾವೇರಿ 11.6, ಶಿವಮೊಗ್ಗದಲ್ಲಿ 11.8, ರಾಯಚೂರು 12 ಹಾಗೂ ಕೊಪ್ಪಳದಲ್ಲಿ 12.5 ಡಿ.ಸೆ. ಕನಿಷ್ಠ ತಾಪಮಾನ ವರದಿಯಾಗಿದೆ. ರಾಜ್ಯದ ಗರಿಷ್ಠ ತಾಪಮಾನ ಉತ್ತರ ಕನ್ನಡದ ಶಿರಾಲಿಯಲ್ಲಿ 35.1 ಡಿ.ಸೆಲ್ಸಿಿಯಸ್ ದಾಖಲಾಗಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ತಾಪಮಾನ ಇಳಿಕೆಗೆ ಮುಖ್ಯ ಕಾರಣ ಏನು ?
ಸಾಮಾನ್ಯವಾಗಿ ವರ್ಷದ 365 ದಿನದಲ್ಲಿ ಡಿ.21ಕ್ಕೆ ಮಾತ್ರ ಸೂರ್ಯನ ಅವಧಿ ಕಡಿಮೆಯಾಗಿರುತ್ತದೆ. ಹೀಗಾಗಿ, ಹಗಲು ಸೂರ್ಯನ ಶಾಖ ಕಡಿಮೆ ದಾಖಲಾಗುವ ಮೂಲಕ ಉಷ್ಣಾಂಶ ಇಳಿಕೆಯಾಗುತ್ತದೆ. ಅಲ್ಲದೆ, ಈ ಬಾರಿ ಮಹಾರಾಷ್ಟ್ರ ಮಾರ್ಗವಾಗಿ ಮೇಲ್ಮೈ ಸುಳಿಗಾಳಿ (ತೇವ ಸಹಿತ) ಹೆಚ್ಚಾಗಿರುವುದರಿಂದ ಉ.ಒ ನಾಡಿನಲ್ಲಿ ಚಳಿ ತೀವ್ರತೆ ಹೆಚ್ಚಾಗಿದೆ ಎಂದು ಸಿ.ಎಸ್.ಪಾಟೀಲ್ ಮಾಹಿತಿ ನೀಡಿದರು.