Advertisement

ಕೊಳವೆಬಾವಿಯ ನೀರು ಏಕಾಏಕಿ ದುರ್ನಾತ; ಗ್ರಾಮಸ್ಥರ ಪರದಾಟ

01:20 AM Jul 01, 2019 | sudhir |

ಬಂಟ್ವಾಳ: ಸರಪಾಡಿ ಗ್ರಾ.ಪಂ. ವ್ಯಾಪ್ತಿಯ ವಚ್ಚಾರು ಪರಿಸರದ ಜನತೆಗೆ ಪೂರೈಕೆ ಮಾಡುವ ಕೊಳವೆಬಾವಿ ನೀರು ಏಕಾಏಕಿ ದುರ್ನಾತವಾಗಿದ್ದು, ಗ್ರಾಮಸ್ಥರು ನೀರಿಗಾಗಿ ಪರದಾಡ ಬೇಕಾದ ಸ್ಥಿತಿ ನಿರ್ಮಾಣವಾಗಿದೆ. ದುರ್ನಾತ ದೂರ ವಾಗಬಹುದೆಂಬ ನಿರೀಕ್ಷೆಯೊಂದಿಗೆ ಕೊಳವೆ ಬಾವಿ ನೀರನ್ನು ಹೊರಗೆ ಬಿಡಲಾಗುತ್ತಿದೆ.

Advertisement

ಸುಮಾರು 3 ವರ್ಷಗಳ ಹಿಂದೆ ವಚ್ಚಾರಿನಲ್ಲಿ ಕೊಳವೆಬಾವಿಯನ್ನು ಕೊರೆ ಯಲಾಗಿದ್ದು, ಯಥೇಚ್ಛ ನೀರಿದ್ದ ಪರಿ ಣಾಮ ಈ ಭಾಗದ ಜನತೆಯ ನೀರಿನ ಸಮಸ್ಯೆ ನೀಗಿತ್ತು. ಆದರೆ ಕಳೆದ 2 ವಾರಗಳ ಹಿಂದೆ ಕೊಳವೆಬಾವಿ ದುರಸ್ತಿ ಬಳಿಕ ಈ ಸಮಸ್ಯೆ ಉಂಟಾಗಿದ್ದು, ನೀರಿನಲ್ಲಿ ಸ್ನಾನ ಮಾಡುವುದಕ್ಕೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಪ್ರಾರಂಭದಲ್ಲಿ ನೀರು ದುರ್ನಾತ ಬಂದಾಗ ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ದಿನ ಕಳೆದಂತೆ ದುರ್ನಾತ ಹೆಚ್ಚಾಗ ತೊಡಗಿತು. ಜಾನುವಾರುಗಳೂ ಈ ನೀರನ್ನು ಕುಡಿಯುತ್ತಿಲ್ಲ. ನೀರಿನ ಬಣ್ಣದಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬರುತ್ತಿಲ್ಲ. ಪಾತ್ರೆಗೆ ಹಾಕಿದರೆ ಒಳಭಾಗ ಕೆಂಪಗಾಗುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ವಚ್ಚಾರಿನ ಕೊಳವೆಬಾವಿಯಿಂದ ಹಲವು ಮನೆಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದ್ದು, ಪ್ರಸ್ತುತ ಮಳೆಗಾಲ ದಲ್ಲೂ ನೀರಿಗೆ ಪರದಾಡಬೇಕಿದೆ. ಗ್ರಾ.ಪಂ.ನಿಂದ ನೀರನ್ನು ಪರೀಕ್ಷೆಗಾಗಿ ಆರೋಗ್ಯ ಇಲಾಖೆಗೆ ಕಳುಹಿಸಲಾಗಿದ್ದು, ಅದರ ವರದಿ ಬರಬೇಕಿದೆ. ಜತೆಗೆ ತಾ.ಪಂ.ಕಾರ್ಯ ನಿರ್ವಹಣಾಧಿಕಾರಿಯವರೂ ಕೊಳವೆಬಾವಿಯನ್ನು ಪರಿಶೀಲನೆ ಮಾಡಿ ತೆರಳಿದ್ದಾರೆ. ಪ್ರಸ್ತುತ ಪೈಪ್‌ ಕಟ್ ಮಾಡಿ ನೀರನ್ನು ಹೊರಗೆ ಬಿಡಲಾಗುತ್ತಿದೆ.

ಆರೋಗ್ಯ ಏರುಪೇರು

Advertisement

ಪೆರಿಯಪಾದೆ ಶಾಲೆಗೂ ಅದೇ ನೀರು ಪೂರೈಕೆ ಮಾಡಲಾಗುತ್ತಿದ್ದು, ಪ್ರಸ್ತುತ ಬೇರೆ ಕಡೆಯಿಂದ ಶಾಲೆಗೆ ನೀರು ತರಲಾಗುತ್ತಿದೆ. ಪ್ರಾರಂಭದಲ್ಲಿ ಇದರ ನೀರು ಕುಡಿದು ಕೆಲವು ವಿದ್ಯಾರ್ಥಿಗಳ ಆರೋಗ್ಯದಲ್ಲೂ ಏರುಪೇರು ಕಂಡುಬಂದಿತ್ತು ಎಂದು ಸ್ಥಳೀಯ ನಿವಾಸಿ ಯೊಬ್ಬರು ಆರೋಪಿಸಿದ್ದಾರೆ.

ವರದಿ ಕೈಸೇರಿಲ್ಲ

ಪ್ರಸ್ತುತ ಕೊಳವೆಬಾವಿ ನೀರನ್ನು ಆರೋಗ್ಯ ಇಲಾಖೆಗೆ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ವರದಿ ಇನ್ನೂ ಬಂದಿಲ್ಲ. ಬಂಟ್ವಾಳ ತಾ.ಪಂ. ಇಒ ಕೊಳವೆ ಬಾವಿಯನ್ನು ಪರಿಶೀಲಿ ಸಿದ್ದು, ವರದಿ ಬಂದ ಬಳಿಕ ಕ್ರಮ ಕೈಗೊಳ್ಳುವ ಕುರಿತು ತಿಳಿಸಿದ್ದಾರೆ. ಜನರಿಗೆ ಪರ್ಯಾಯವಾಗಿ ಗ್ರಾ.ಪಂ. ಕಚೇರಿ ಪಕ್ಕದ ಕೊಳವೆ ಬಾವಿಯಿಂದ ನೀರು ನೀಡುವ ಕುರಿತು ಮಾತುಕತೆ ನಡೆದಿದೆ.
– ಧನಂಜಯ ಪಿಡಿಒ, ಸರಪಾಡಿ
ಸಮಸ್ಯೆ ಬಗೆಹರಿಸಿ

ಪ್ರಸ್ತುತ ನೀರಿಗಾಗಿ ತೊಂದರೆ ಅನುಭವಿಸುತ್ತಿದ್ದೇವೆ. ಸಂಬಂಧ ಪಟ್ಟವರು ಶೀಘ್ರ ಗಮನಹರಿಸಿ ನೀರಿನ ತೊಂದರೆ ಬಗೆಹರಿಸಲಿ.
– ಜಯಂತ ವಚ್ಚಾರ್‌,ಸ್ಥಳೀಯ ನಿವಾಸಿ
Advertisement

Udayavani is now on Telegram. Click here to join our channel and stay updated with the latest news.

Next