ನಂತರ ಮಾತನಾಡಿದ ಅವರು, ಕ್ಷಯರೋಗ ಕುರಿತು ಈಗಾಗಲೇ ಆರೋಗ್ಯ ಇಲಾಖೆಯಿಂದ ಜಾಗೃತಿ ಮೂಡಿಸಲಾಗಿದೆ. ಕ್ಷಯರೋಗ ಕಂಡುಬಂದಲ್ಲಿ ರೋಗಿಗಳು ಯಾವುದೇ ಕಾರಣಕ್ಕೆ ಭಯ ಪಡದೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ ಎಂದು ಹೇಳಿದರು.
Advertisement
ಇಂತಹ ರೋಗಗಳ ಲಕ್ಷಣಗಳು ಕಂಡು ಬಂದ ವೇಳೆ ಬಹುತೇಕ ರೋಗಿಗಳು ಭಯ ಪಡುತ್ತಾರೆ. ಆರು ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಉತ್ತಮ ಜೀವನ ನಡೆಸಲು ಸೂಕ್ತ ವ್ಯವಸ್ಥೆ ಸರಕಾರ ಕಲ್ಪಿಸಿದೆ. ಕ್ಷಯ ರೋಗಿಗಳನ್ನು ಕಡೆಗಣಿಸದೆ ಗೌರವ ಭಾವನೆಯಿಂದ ನೋಡಬೇಕು. ಕ್ಷಯರೋಗ ನಿರ್ಮೂಲನೆ ಮಾಡಲು ಪ್ರತಿಯೊಬ್ಬರು ಕೈ ಜೋಡಿಸಬೇಕು. ಇಂತಹ ಕಾರ್ಯಕ್ಕೆ ಕೈ ಜೋಡಿಸಿದಾಗ ಮಾತ್ರ ಕ್ಷಯರೋಗ ಮುಕ್ತ ಕರ್ನಾಟಕ ಮಾಡಲು ಸಾಧ್ಯ ಎಂದರು.