Advertisement

ಕ್ಷಯ ರೋಗ ಪತ್ತೆ ಆಂದೋಲನ

01:27 PM Nov 26, 2019 | Suhan S |

ಹೂವಿನಹಿಪ್ಪರಗಿ: ಗ್ರಾಮೀಣ ಭಾಗದ ಜನರ ಆರೋಗ್ಯ ಕಾಪಾಡಲು ಸರಕಾರ ಹಲವು ಆರೋಗ್ಯಕರ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳ ಉಪಯೋಗ ಪಡೆದು ರೋಗ ಮುಕ್ತರಾಗಿ ಎಂದು ಹೂವಿನಹಿಪ್ಪರಗಿ ವಲಯ ಆರೋಗ್ಯಶಿಕ್ಷಣಾಕಾರಿ ಡಾ| ಬಿ.ಎಸ್‌. ಪಾಟೀಲ ಹೇಳಿದರು.

Advertisement

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯ ರೋಗ ಅಧಿಕಾರಿಗಳ ಕಾರ್ಯಾಲಯ ಹಾಗೂ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಬಸವನಬಾಗೇವಾಡಿ ತಾಲೂಕಿನ ಕುದರಿ ಸಾಲವಾಡಗಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣಾ ಕಾರ್ಯಕ್ರಮ ಹಾಗೂ ಕ್ಷಯ ರೋಗ ಪತ್ತೆ ಆದೋಲನ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎರಡು ವಾರಕ್ಕಿಂತ ಹೆಚ್ಚು ಕೆಮ್ಮು ನೆಗಡಿ, ಜ್ವರದಿಂದ ಬಳಲುತ್ತಿದ್ದರೆ, ಕೆಲವು ವೇಳೆ ಕಪ ಜೊತೆಗೆ ರಕ್ತಸ್ರಾವ ಕಾಣುತ್ತದೆ, ಜ್ವರವು ವಿಶೇಷವಾಗಿ ರಾತ್ರಿ ವೇಳೆ ಹೆಚ್ಚು ಕಾಣಿಸುತ್ತದೆ. ದೇಹದ ತೂಕದಲ್ಲಿ ಭಾರಿ ಇಳಿಕೆ, ದೇಹದಲ್ಲಿ ಬೆವರು ಬೀಡುವುದು, ಹಸಿವಾಗದಿರುವುದು ಕ್ಷಯ ರೋಗದ ಮುಖ್ಯ ಲಕ್ಷಣಗಳು ಎಂದು ಹೇಳಿದರು.

ನಿರಂತರ ಚಿಕಿತ್ಸೆಯಿಂದ ಕ್ಷಯ ರೋಗವನ್ನು ನಿಯಂತ್ರಣಕ್ಕೆ ಬರುತ್ತದೆ. ಟಿಬಿ ರೋಗವು ಶಾಸ್ವಕೋಶಕ್ಕೆ ಅಲ್ಲದೆ ದೇಹದ ಎಲ್ಲ ಭಾಗಕ್ಕೆ ಹರಡಬಹುದು. ಡಿ. 10ರವರೆಗೆ ಕ್ಷಯ ರೋಗ ಪತ್ತೆ ಹಚ್ಚುವಹಾಗೂ ಪ್ರತಿಯೊಂದು ಮನೆ ಮನೆಗೆ ತೆರಳಿ ಕ್ಷಯ ರೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದರು.  ಈ ವೇಳೆ ಕಿರಿಯ ಆರೋಗ್ಯ ಸಹಾಯಕ ಎಂ.ಎಸ್‌. ಬಾಗೇವಾಡಿ, ಮಹಿಳಾ ಆರೋಗ್ಯ ಸಾಹಾಯಕಿ ಎನ್‌.ಎಚ್‌. ನಿವಾಳಕೋಡಿ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರು ಆಂದೋಲನಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next