ಬೆಂಗಳೂರು : ಟಿಟಿಡಿಯ ಹಿಂದೂ ಧರ್ಮ ಪ್ರಚಾರ ಪರಿಷತ್, ಹಿಂದೂ ದೇವಾಲಯಗಳಿಗೆ “ಗುಡಿಗೊಂದು ಗೋವು” ಯೋಜನೆ ರೂಪಿಸಿ ಗೋವಂಶದ ಉಳಿವಿಗೆ ನಾಂದಿ ಹಾಡಿದ್ದು ಶ್ಲಾಘನೀಯ ಎಂದು ಪಶುಸಂಗೋಪನೆ ಹಜ್ ಮತ್ತು ವಕ್ಫ್ ಸಚಿವ ಪ್ರಭು ಚವ್ಹಾಣ್ ಹರ್ಷ ವ್ಯಕ್ತ ಪಡಿಸಿದ್ದಾರೆ.
ಸ್ಥಳೀಯ ನಾಟಿ ಹಸು ಹಾಗೂ ಗೀರ್ ತಳಿಯ ಗೋವುಗಳನ್ನು ದೇವಸ್ಥಾನಕ್ಕೆ ನೀಡಿ ಅವುಗಳ ಉತ್ಪನ್ನಗಳಿಂದಲೇ ನಿತ್ಯದ ಪೂಜಾ ಕೈಂಕರ್ಯ ನೇರವೆರುವುದರಿಂದ ಸಹಜವಾಗಿಯೇ ಗೋವುಗಳ ಬಗೆಗಿನ ಶೃದ್ಧೆ ಹೆಚ್ಚುತ್ತದೆ ಎಂದು ಸಚಿವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಲ್ಲ ಹಿಂದೂ ದೇವಾಲಯಗಳಲ್ಲಿ ಗೋಶಾಲೆಯನ್ನು ಆರಂಭಿಸಿದ್ದಾದಲ್ಲಿ ಗೋವುಗಳ ಸಂರಕ್ಷಣೆಗೆ ಮತ್ತಷ್ಟು ವೇಗ ದೊರೆತಂತಾಗುತ್ತದೆ. ಗೋಹತ್ಯೆ ನಿಷೇಧ ವಿಧೇಯಕದ ಬೆನ್ನಲ್ಲೇ ಈ ಬೆಳವಣಿಗೆ ನಿಜಕ್ಕೂ ಸ್ವಾಗತಾರ್ಹ. ಸರ್ಕಾರದೊಂದಿಗೆ ಸ್ಥಳಿಯ ಸಂಘ ಸಂಸ್ಥೆಗಳೂ ಹೆಚ್ಚು ಆಸಕ್ತಿವಹಿಸಿ ಗೋಪಾಲನೆಗೆ ಮುಂದಾದರೆ ಗೋವಂಶದ ಸಂರಕ್ಷಣೆ ಮತ್ತು ಸಂವರ್ಧನೆ ಯಶಸ್ವಿಯಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ: ಸಂಕಷದಲ್ಟಿ ರುವ ಗಡಿನಾಡ ಕವಿ ಗೈಬಿಶಾ ಮಕಾನದಾರ್‌ಗೆ ಸಹಾಯಹಸ್ತ
ಟಿಟಿಡಿಯ ಈ ಯೋಜನೆಯ ಲಾಭವನ್ನು ಎಲ್ಲ ಹಿಂದೂ ದೇವಾಲಯಗಳು ಪಡೆದುಕೊಳ್ಳಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.