Advertisement

ಬಹುಕೋಟಿ ವೆಚ್ಚದ ಮಕ್ಕಳ ಆಸ್ಪತ್ರೆ ಸ್ಥಾಪಿಸಲು ಟಿಟಿಡಿ ಇಂಗಿತ

07:07 PM Dec 21, 2021 | Team Udayavani |

ತಿರುಪತಿ:ಪವಿತ್ರ ಕ್ಷೇತ್ರ ತಿರುಪತಿ ವೆಂಕಟೇಶ್ವರ ದೇಗುಲದ ಆಡಳಿತ ಮಂಡಳಿ, ತಿರುಪತಿ ತಿರುಮಲ ದೇವಸ್ಥಾನಮ್ಸ್‌ (ಟಿಟಿಡಿ) ಅತ್ಯಾಧುನಿಕ ವೈದ್ಯಕೀಯ ಸೌಕರ್ಯಗಳು ಇರುವ ಮಕ್ಕಳ ಆಸ್ಪತ್ರೆ ಸ್ಥಾಪಿಸಲು ಮುಂದಾಗಿದೆ.

Advertisement

ತಿರುಪತಿಯಲ್ಲಿ ನಿರ್ಮಾಣವಾಗಲಿರುವ ಈ ಆಸ್ಪತ್ರೆಗೆ 550 ಕೋಟಿ ರೂ. ವೆಚ್ಚವಾಗಲಿದೆ. ಟಿಟಿಡಿ ಸ್ಥಾಪನೆಗೊಂಡ ಬಳಿಕ ಇದೇ ಮೊದಲ ಬಾರಿಗೆ ದೇಣಿಗೆ ಮೂಲಕ ಇಷ್ಟು ದೊಡ್ಡ ಮೊತ್ತ ಸಂಗ್ರಹಿಸಲು ಮುಂದಾಗಿದೆ. ಅದಕ್ಕಾಗಿ ದಾನಿಗಳಿಗೂ ಅವಕಾಶ ಕಲ್ಪಿಸಲಾಗಿದೆ.

ಇತ್ತೀಚೆಗೆ ನಡೆದಿದ್ದ ಟಿಟಿಡಿ ಟ್ರಸ್ಟಿಗಳ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಮಂಡಿಸಿ, ಅಂಗೀಕರಿಸಲಾಗಿದೆ.

ಬಡ ಕುಟುಂಬಕ್ಕೆ ಸೇರಿದ ಮಕ್ಕಳಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಬಗ್ಗೆಯೂ ಸಮ್ಮತಿ ನೀಡಲಾಗಿದೆ. ದೇಗುಲಕ್ಕೆ ವಿಶೇಷ ಸೇವೆ ಸಲ್ಲಿಸುವ ಮೂಲಕ ಅದರಿಂದ ಬಂದ ಮೊತ್ತವನ್ನು ಆಸ್ಪತ್ರೆ ನಿರ್ಮಾಣಕ್ಕೆ ಮೀಸಲಾಗಿ ಇರಿಸಲಾಗುತ್ತದೆ. ಸಭೆಯಲ್ಲಿ ಕೈಗೊಳ್ಳಲಾದ ನಿರ್ಣಯದ ಪ್ರಕಾರ ದಾನಿಗಳು 1 ಕೋಟಿ ರೂ. ನೀಡಿದರೆ, 25 ವರ್ಷಗಳ ಕಾಲ ಶುಕ್ರವಾರ ಹೊರತುಪಡಿಸಿ ವರ್ಷದಲ್ಲಿ ನಿಗದಿತ ದಿನದಲ್ಲಿ ಬೆಳಗ್ಗೆ ಮತ್ತು ಸಂಜೆಯ ವೇಳೆ ಪೂಜೆ (ಉದಯಾಸ್ತಮಾನ)ಗೆ ಅವಕಾಶ ಕಲ್ಪಿಸಲಾಗುತ್ತದೆ. 1.5 ಕೋಟಿ ರೂ. ನೀಡಿದರೆ ಶುಕ್ರವಾರವೂ ದೇಣಿಗೆ ನೀಡಿದವರ ಹೆಸರಿನಲ್ಲಿ ಅದೇ ಸೇವೆ ನಡೆಸಲಾಗುತ್ತದೆ. ಈ ಅವಧಿಯಲ್ಲಿ ಸೇವಾಕರ್ತರು ಪತ್ನಿ ಮತ್ತು ಕುಟುಂಬದ ಇತರ ಐವರು ಸದಸ್ಯರೊಂದಿಗೆ ದೇಗುಲಕ್ಕೆ ಭೇಟಿ ನೀಡಿ, ಬೆಳಗ್ಗಿನಿಂದ (ಸುಪ್ರಭಾತ) ರಾತ್ರಿಯ (ಏಕಾಂತ)ವರೆಗೆ ಶ್ರೀ ಸನ್ನಿಧಿಯಲ್ಲಿ ನಡೆಯುವ ಎಲ್ಲಾ ಸೇವೆಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುತ್ತದೆ.

ಇದನ್ನೂ ಓದಿ:ಬೆಳಗಾವಿಯಲ್ಲಿ 16.50 ಕೋಟಿ ವೆಚ್ಚದ ಕ್ರೀಡಾ ಸಮುಚ್ಚಯಗಳ ಲೋಕಾರ್ಪಣೆ

Advertisement

531 ಟಿಕೆಟ್‌:
ಮೊದಲು ಬಂದವರಿಗೆ ಮೊದಲು ಆದ್ಯತೆ ಎಂಬ ನೆಲೆಯಲ್ಲಿ ದೇಣಿಗೆ ನೀಡಿದವರಿಗೆ 531 ಟಿಕೆಟ್‌ಗಳನ್ನು ನೀಡಲು ಟಿಟಿಡಿ ಮುಂದಾಗಿದೆ. 1.5 ಕೋಟಿ ರೂ. ನೀಡಿದವರಿಗೆ ಶುಕ್ರವಾರ ಸಹಿತ ಎಲ್ಲಾ ದಿನಗಳಲ್ಲಿ ನಡೆಯುವ “ಅಭಿಷೇಕ ದರ್ಶನ’ ಸೇವೆಗಳಲ್ಲಿ ಭಾಗಿಯಾಗಲು ಅವಕಾಶ ಉಂಟು. ಇದೇ ಉದ್ದೇಶಕ್ಕಾಗಿ ಟಿಟಿಡಿ ಪ್ರತ್ಯೇಕ ಆ್ಯಪ್‌ ಅನ್ನು ಅಭಿವೃದ್ಧಿಪಡಿಸಿ, ಅದರ ಮೂಲಕ ದೇಣಿಗೆ ಪಡೆದು ಸೇವೆ ಪಡೆಯುವವರಿಗೆ ಅನುಕೂಲ ಕಲ್ಪಿಸಲೂ ಮುಂದಾಗಿದೆ.

ಯಾವ ರೀತಿಯ ಸೇವೆ?
1 ಕೋಟಿ ರೂ.- ಶುಕ್ರವಾರ ಹೊರತುಪಡಿಸಿ ನಿಗದಿತ ದಿನ 25 ವರ್ಷ ವರೆಗೆ ಉದಯಾಸ್ತಮಾನ ಪೂಜೆಗೆ ಅವಕಾಶ
1.5 ಕೋಟಿ ರೂ.- ಶುಕ್ರವಾರ ಸೇರಿದಂತೆ ವರ್ಷದಲ್ಲಿ ನಿಗದಿತ ದಿನ 25 ವರ್ಷ ವರೆಗೆ ಉದಯಾಸ್ತಮಾನ ಪೂಜೆಗೆ ಅವಕಾಶ ಸೇವೆ ಮಾಡಿಸುವವರು, ಪತ್ನಿ, ಕುಟುಂಬದ ಐವರು ಸದಸ್ಯರಿಗೆ ಬೆಳಗ್ಗಿನಿಂದ ರಾತ್ರಿಯ ವರೆಗೆ ನಡೆಯುವ ಎಲ್ಲಾ ಸೇವೆಗಳಲ್ಲಿ ಭಾಗವಹಿಸುವ ಅವಕಾಶ

Advertisement

Udayavani is now on Telegram. Click here to join our channel and stay updated with the latest news.

Next