Advertisement

ಸದ್ಯ ತಿರುಪತಿಗೆ ಬರಬೇಡಿ;ಕೊರೊನಾ ಭೀತಿ ಹಿನ್ನೆಲೆಯಲ್ಲಿ ಭಕ್ತರಲ್ಲಿ ಟಿಟಿಡಿ ಮನವಿ

11:50 PM Mar 20, 2020 | Sriram |

ತಿರುಪತಿ/ ಭುವನೇಶ್ವರ: ದೇಶದಲ್ಲಿ ಕೊರೊನಾ ಸೋಂಕಿನ ಭೀತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸದ್ಯ ತಿರುಪತಿಗೆ ಭೇಟಿ ನೀಡುವುದು ಬೇಡ ಎಂದು ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ಆಡಳಿತ ಮಂಡಳಿ ಭಕ್ತರಲ್ಲಿ ಮನವಿ ಮಾಡಿಕೊಂಡಿದೆ.

Advertisement

ಕೆಮ್ಮು, ಶೀತ ಇರುವವರು ಸದ್ಯ ತಿರುಪತಿ ಯಾತ್ರೆ ಮುಂದೂಡಿ ಎಂದು ಟಿಟಿಡಿಯ ಹೆಚ್ಚುವರಿ ಕಾರ್ಯಕಾರಿ ಅಧಿಕಾರಿ ಎ.ವಿ. ಧರ್ಮ ರೆಡ್ಡಿ ಸಲಹೆ ನೀಡಿದ್ದಾರೆ. ಸೋಂಕು ತಪಾಸಣೆಗಾಗಿ ದೇಗುಲ ವ್ಯಾಪ್ತಿಯಲ್ಲಿ ಎಲ್ಲ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ ಎಂದಿದ್ದಾರೆ. ಆಗಮಿಸುವ ಭಕ್ತರು ಹ್ಯಾಂಡ್‌ ಸ್ಯಾನಿಟೈಸರ್‌ ಇರಿಸಿಕೊಳ್ಳುವಂತೆ, ಮಾಸ್ಕ್ ಧರಿಸಿಕೊಳ್ಳುವಂತೆ ಸಲಹೆ ಮಾಡಿದ್ದಾರೆ.

ದೇಗುಲದಿಂದಲೇ ಥರ್ಮಲ್‌ ಸ್ಕ್ರೀನಿಂಗ್‌
ದೇಗುಲ ಮಂಡಳಿಯಿಂದಲೇ ಭಕ್ತರನ್ನು ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಪಡಿಸುವುದಕ್ಕೂ ಕ್ರಮ ಕೈಗೊಳ್ಳಲಾಗಿದೆ. ಮುಡಿ ಒಪ್ಪಿಸುವ ಕೇಂದ್ರಗಳಲ್ಲಿ , ಅನ್ನ ಪ್ರಸಾದಂ ಕಟ್ಟಡಗಳಲ್ಲಿ , ದರ್ಶನ ಕಾಯ್ದಿರಿಸುವ ಕೊಠಡಿಗಳಲ್ಲಿ ಕ್ರಿಮಿನಾಶಕ ಸಿಂಪಡಿಸಲಾಗುತ್ತಿದೆ ಎಂದಿದ್ದಾರೆ.

ಪುರಿ ದೇಗುಲದಲ್ಲೂ ಮುನ್ನೆಚ್ಚರಿಕೆ
ಪುರಿ ಜಗನ್ನಾಥ ದೇಗುಲದಲ್ಲಿಯೂ ಒಡಿಶಾ ಸರಕಾರವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದೆ. ಆರೋಗ್ಯ ಪಾಲನ ಸೂತ್ರ ಗಳನ್ನು ಅನುಸರಿಸಲು ಹೊಟೇಲ್‌ಗ‌ಳು, ಲಾಡಿjಂಗ್‌ಗಳಿಗೆ ಸೂಚನೆ ನೀಡಲಾಗಿದೆ. ಪ್ರವಾಸಿಗ ರಲ್ಲಿ ಸೋಂಕು ಕಂಡುಬಂದರೆ ಚಿಕಿತ್ಸೆ ನೀಡುವ ಮತ್ತು ಪ್ರತ್ಯೇಕ ವಾಗಿ ಇರಿಸುವ ವ್ಯವಸ್ಥೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next