ಬೆಳ್ತಂಗಡಿ: ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಚಾರ್ಮಾಡಿ ಘಾಟ್ ನ ಎರಡನೇ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಟಿಟಿ ವಾಹನವೊಂದು ಧರ್ಮಸ್ಥಳ ಕ್ಷೇತ್ರಕ್ಕೆ ಶಿವರಾತ್ರಿಗೆಂದು ಬರುತ್ತಿದ್ದ ಪಾದಚಾರಿಗಳಿಗೆ ಢಿಕ್ಕಿ ಹೊಡೆದ ಘಟನೆ ರವಿವಾರ ನಡೆದಿದೆ.
ಪರಿಣಾಮ ಇಬ್ಬರು ಗಂಭೀರ ಗಾಯಗೊಂಡಿದ್ದು, ಉಳಿದ 10 ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಇದನ್ನೂ ಓದಿ:HDK ಮಾಡಿದ 5 ಕೋಟಿ ಡೀಲ್ ಆರೋಪದಿಂದ ನೊಂದು ದೂರು ವಾಪಸ್ ಪಡೆದಿದ್ದೇನೆ: ದಿನೇಶ್ ಕಲ್ಲಹಳ್ಳಿ
ಚಾರ್ಮಾಡಿ ಘಾಟ್ ಎರಡನೇ ತಿರುವಿನಲ್ಲಿ ಈ ಅಪಘಾತ ಸಂಭವಿಸಿದ್ದು, ಢಿಕ್ಕಿ ರಭಸಕ್ಕೆ 12 ಮಂದಿ ಗಾಯಗೊಂಡಿದ್ದಾರೆ. ಇವರನ್ನು ಚಾರ್ಮಾಡಿ ಸಮಾಜ ಸೇವಕ ಹಸನಬ್ಬ ಹಾಗೂ ಸ್ಥಳೀಯರು ಉಜಿರೆ ಖಾಸಗಿ ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಗಿದ್ದಾರೆ.
ನಾಲ್ಕು ಮಂದಿ ಪಾದಯಾತ್ರಿಗಳು ಹಾಸನದ ಅಗರೆಯಿಂದ ಧರ್ಮಸ್ಥಳ ದೇವಸ್ಥಾನಕ್ಕೆ ಹೊರಟಿದ್ದರು. ರವಿವಾರ ಘಾಟ್ ರಸ್ತೆಯಾಗಿ ಬರುತ್ತಿದ್ದಾಗ ಪ್ರವಾಸಿಗರ ಟಿಟಿ ವಾಹನ ಢಿಕ್ಕಿ ಹೊಡೆದ ಘಟನೆ ನಡೆದಿದೆ.
ಇದನ್ನೂ ಓದಿ: ಐಪಿಎಲ್ 2021ಕ್ಕೆ ಮುಹೂರ್ತ ನಿಗದಿ: 6 ನಗರದಲ್ಲಿ ನಡೆಯಲಿದೆ ಕೂಟ, ಸಂಪೂರ್ಣ ವೇಳಾಪಟ್ಟಿ