Advertisement
ಈ ನಡುವೆ ವಿಶ್ವದ ನಂ.2 ಆಟಗಾರ ರಷ್ಯಾದ ಡ್ಯಾನಿಲ್ ಮೆಡ್ವೆಡೇವ್ ಮೊದಲ ಸುತ್ತಿನಲ್ಲೇ ಆಘಾತಕಾರಿ ಸೋಲನುಭವಿಸಿದರು. ಈ ನೆಚ್ಚಿನ ಟೆನಿಸಿಗನನ್ನು ಮಣಿಸಿದವರು ಬ್ರಝಿಲ್‌ನ ಅರ್ಹತಾ ಆಟಗಾರ ಥಿಯಾಗೊ ಸೆಬೋತ್ ವೈಲ್ಡ್. 5 ಸೆಟ್‌ಗಳ ಜಿದ್ದಾಜಿದ್ದಿ ಕಾಳಗವನ್ನು ವೈಲ್ಡ್ 7-6 (7-5), 6-7 (6-8), 2-6, 6-3, 6-4ರಿಂದ ಗೆದ್ದರು.
Related Articles
Advertisement
ಬುಧವಾರದ ದ್ವಿತೀಯ ಸುತ್ತಿನ ಮುಖಾ ಮುಖೀಯಲ್ಲಿ ಸ್ಟೆಫನಸ್ ಸಿಸಿಪಸ್ ಸ್ಪೇನ್‌ನ ರಾಬರ್ಟೊ ಕಾರ್ಬಲ್ಲೆಸ್ ಬೇನ ಅವರನ್ನು 6-3, 7-6 (4), 6-2ರಿಂದ ಮಣಿಸಿದರು.
ಸ್ವಿಯಾಟೆಕ್‌ಗೆ ಸುಲಭ ಜಯವನಿತಾ ವಿಭಾಗದ ಹಾಲಿ ಚಾಂಪಿಯನ್, ವಿಶ್ವದ ನಂ.1 ಆಟಗಾರ್ತಿ ಇಗಾ ಸ್ವಿಯಾಟೆಕ್ ಸ್ಪೇನ್‌ನ ಕ್ರಿಸ್ಟಿನಾ ಬುಕ್ಸಾ ಅವರನ್ನು 6-4, 6-0 ಅಂತರದಿಂದ ಸುಲಭದಲ್ಲಿ ಸೋಲಿಸಿದರು. ಎದುರಾಳಿ ಕ್ಯಾಮಿಲಾ ಜಾರ್ಜಿ ಗಾಯಾಳಾಗಿ ಹಿಂದೆ ಸರಿದ ಕಾರಣ ಅಮೆರಿಕದ ಜೆಸ್ಸಿಕಾ ಪೆಗುಲಾ ಮೊದಲ ಸುತ್ತು ದಾಟಿದರು. ಆಗ ಪೆಗುಲಾ 6-2ರಿಂದ ಮೊದಲ ಸೆಟ್ ವಶಪಡಿಸಿಕೊಂಡಿದ್ದರು. ಭಾರತೀಯರಿಗೆ ಸೋಲು
ಪುರುಷರ ಡಬಲ್ಸ್‌ನಲ್ಲಿ ಭಾರತದ ಶ್ರೀರಾಮ್ ಬಾಲಾಜಿ-ಜೀವನ್ ನೆಡುಂಶೆಜಿಯನ್ ಮೊದಲ ಸುತ್ತಿನ ಆಘಾತಕ್ಕೆ ಸಿಲುಕಿದರು. ಇವರೆದುರು ಬೆಲರೂಸ್‌ನ ಇಲ್ಯ ಇವಾಶ್ಕ-ಆಸ್ಟ್ರೇಲಿಯದ ಅಲೆಕ್ಸಿ ಪೋಪಿರಿನ್ 6-3, 6-4 ಅಂತರದ ಗೆಲುವು ಸಾಧಿಸಿದರು.