ಔರಾದ: ಸರ್ಕಾರದ ಯೋಜನೆಗಳು ಜನ ಸಾಮಾನ್ಯರ ಮನೆ ಬಾಗಿಲಿಗೆ ಮುಟ್ಟಿಸಬೇಕು ಎನ್ನುವ ಉದೇಶದಿಂದ ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ ಕಾರ್ಯಕ್ರಮ ಆಯೋಜನೆ ಮಾಡಲಾ ಗಿದೆ. ನಿಮ್ಮ ಹಾಗೂ ನಿಮ್ಮೂರಿನ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ. ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಲು ತಾಲೂಕು ಆಡಳಿತ ಸಿದ್ಧವಾಗಿದೆ ಎಂದು ತಹಶೀಲ್ದಾರ್ ಅರುಣಕುಮಾರ ಕುಲಕರ್ಣಿ ತಿಳಿಸಿದರು.
ತಾಲೂಕಿನ ಕಂದಗೂಳ ಗ್ರಾಮದಲ್ಲಿ ಶನಿವಾರ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಗ್ರಾಮೀಣ ಜನರ ಹತ್ತು ಹಲವಾರು ಕುಂದು-ಕೊರತೆಗಳನ್ನು ಸ್ಥಳದಲ್ಲಿಯೇ ಪರಿಹಾರ ನೀಡಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಂದಾಯ ಇಲಾಖೆ ಸೇರಿದಂತೆ ತಾಲೂಕಿ ನಲ್ಲಿರುವ ಪ್ರತಿಯೊಂದು ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ನಿಮ್ಮೂರಿಗೆ ಬಂದಿದ್ದಾರೆ. ನಿಮ್ಮ ಸಮಸ್ಯೆ ತಿಳಿಸಿ ಎಂದು ಮನವಿ ಮಾಡಿದರು.
ಪಡಿತರ ಚೀಟಿಗಾಗಿ 21 ಅರ್ಜಿಗಳು ಬಂದಿದ್ದು, ಅವುಗಳನ್ನು ಪರಿಶೀಲನೆ ನಡೆಸಿ ಸ್ಥಳದಲ್ಲಿಯೇ 16 ಜನರಿಗೆ ವಿತರಣೆ ಮಾಡಲಾಗಿದೆ. ಇನ್ನೂಳಿದ ಐದು ಪಡಿತರ ಕಾರ್ಡ್ ವೀಕ್ಷಣೆಯಲ್ಲಿವೆ. ಅದರಂತೆ ಬೆಳೆ ಪರಿಹಾರ ಬಂದಿಲ್ಲವೆಂದು 50 ಅರ್ಜಿಗಳು ಬಂದಿವೆ. ಕಂದಗೂಳ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಟ್ಟು 120 ಅರ್ಜಿಗಳು ಬಂದಿವೆ. ಅದರಲ್ಲಿ 24 ಸ್ಥಳದಲ್ಲಿಯೇ ಬಗೆಹರಿಸಲಾಗಿದೆ. ಇನ್ನೂಳಿದ 96 ಅರ್ಜಿಗಳು ಪರಿಶೀಲನೆ ನಡೆಸಿ ಬಗೆ ಹರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಗ್ರೇಡ್-2 ತಹಶೀಲ್ದಾರ್ ಮಲಶೆಟ್ಟಿ ಚಿದ್ರೆ ಮಾತನಾಡಿದರು. ಸ್ಥಳದಲ್ಲಿಯೇ ಕೆಲವೊಂದು ಹಿರಿಯ ನಾಗರಿಕರಿಗೆ ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿ ಆದೇಶ ಪತ್ರಗಳನ್ನು ವಿತರಿಸಲಾಯಿತು. ಬಾಲಾಜಿ ನೈಕವಾಡೆ, ತಾಪಂ ಇಒ ಮಾಣಿಕರಾವ್ ಪಾಟೀಲ್, ಗ್ರಾಪಂ ಅಧ್ಯಕ್ಷೆ ಪ್ರೇಮಾಲಾ ಸಿಂಧೆ, ತಾಪಂ ಎಡಿ ಸುದೇಶ, ಜೆಸ್ಕಾಂ ಎಇಇ ರವಿ ಕಾರಬಾರಿ, ಸುಮನಬಾಯಿ ಪಾಟೀಲ್, ರವಿ ಸುಕುಮಾರ್, ಬಾಲಿಕಾ, ನಾಮದೇವ ಮೇತ್ರೆ, ಬಿಇಒ ಎಚ್.ಎಸ್ ನಗನೂರು, ಕೃಷಿ ಎಡಿ ಅನ್ಸಾರಿ ಎಂ.ಎ.ಕೆ, ಸಂತೋಷ ಪಾಟೀಲ್, ಬಾಬುರಾವ್ ಮಸ್ಕಲೆ, ಪಪಂ ಮುಖ್ಯಾಧಿಕಾರಿ ರವಿ ಸುಕುಮಾರ್, ಸಿಡಿಪಿಒ ಶಂಭುಲಿಂಗ ಹಿರೇಮಠ, ಮೇಲ್ವಿಚಾರಕಿ ಶೋಭಾ, ಭೀಮಾಶಂಕರ್, ಸಿರಸ್ತೇದಾರ ಮಂಜುನಾಥ, ಮುಖ್ಯಗುರು ಸುರೇಶರೆಡ್ಡಿ, ಶಿವರಾಜ್ ಪಾಟೀಲ್, ರಾಜಕುಮಾರ್, ಬಾಬುರಾವ್, ಸರ್ವೇ ಇಲಾಖೆಯ ಎಡಿಎಲ್‌ಆರ್ ರಾಜೇಶ್ರೀ, ಹಣಮಂತರಾವ್ ಪಾಟೀಲ್, ವೀರಶೆಟ್ಟಿ ರಾಠೊಡ್, ಸುಭಾಷ ನಾಗುರೆ, ಅಶೋಕ ಸಜ್ಜನಶೆಟ್ಟಿ, ಪಿಡಿಒ ಮಹೇಬೂಬ್ ಪಾಶಾ, ರಾಜು ಮಹಾರಾಜವಾಡಿ, ಬಾಲಾಜಿ ಪಾಟೀಲ್ ಇದ್ದರು.