ಒಬ್ಬ ಬುದ್ಧಿವಂತ ಆನೆಗಳ ಕ್ಯಾಂಪ್‌ನಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆನೆಗಳನ್ನು ಸರಪಳಿಯಲ್ಲಿ ಕಟ್ಟಿಲ್ಲದೆ ಇರುವುದು ಮತ್ತು ಗೂಡಿನೊಳಗೆ ಹಾಕದೇ ಇರುವುದನ್ನು ಗಮನಿಸುತ್ತಾನೆ. ಆದರೆ ಸಣ್ಣದಾದ ಮರದ ದಿಂಬಿಯೊಂದರಲ್ಲಿ ಒಂದು ಆನೆಯನ್ನು ಕಟ್ಟಿ ಹಾಕಿರುವುದನ್ನು ಗಮನಿಸಿದ ಆತ, ಆನೆ ತನ್ನ ಶಕ್ತಿಯನ್ನು ಬಳಸಿ ಯಾಕೆ ಅದರಿಂದ ಬಿಡಿಸಿಕೊಳ್ಳುತ್ತಿಲ್ಲ ಎಂದು ಯೋಚಿಸುತ್ತಾನೆ. ಆನೆಗಳಿಗೆ ತಮ್ಮ ಶಕ್ತಿ ಬಳಸಿ ಸುಲಭವಾಗಿ ಅಲ್ಲಿಂದ ತಪ್ಪಿಸಿಕೊಳ್ಳಬಹುದು. ಆದರೆ ಅವು ಪ್ರಯತ್ನವೇ ಪಡುತ್ತಿಲ್ಲ. ಆದ್ದರಿಂದ ಆತ ಇದರ ಬಗ್ಗೆ ಆಸಕ್ತನಾಗಿ ಉತ್ತರ ತಿಳಿಯಲು ಬಯಸುತ್ತಾನೆ.
ಆತ ಆನೆಯನ್ನು ಪಳಗಿಸುವವನ ಬಳಿ ಹೋಗಿ ತನ್ನ ಪ್ರಶ್ನೆಯನ್ನು ಕೇಳುತ್ತಾನೆ. ಆಗ ಆನೆ ಪಳಗಿಸುವಾತ, ಆನೆಗಳು ಸಣ್ಣದಾಗಿರುವಾಗ ಅದೇ ಗಾತ್ರದ ಮರದ ದಿಮ್ಮಿಯಲ್ಲಿ ಅವುಗಳನ್ನು ಕಟ್ಟಿ ಹಾಕುತ್ತಿದ್ದೆವು. ಅವು ದೊಡ್ಡದಾದರೂ ಅದೇ ಮನಸ್ಥಿತಿಯಲ್ಲಿ ತಮ್ಮಿಂದ ಸಾಧ್ಯವಿಲ್ಲ ಎಂದೇ ತಿಳಿದಿದೆ ಎನ್ನುತ್ತಾನೆ.
ಶಕ್ತಿಯಿದ್ದರೂ ಅದರ ಬಗ್ಗೆ ತಿಳಿಯದ ಆನೆಗಳು ಯಾವುದೇ ಪ್ರಯತ್ನ ಪಡದೆ ಬಂಧಿ ಯಾಗಿಯೇ ಇರುತ್ತದೆ.
ಪ್ರಪಂಚ ನಮ್ಮನ್ನೆಷ್ಟೇ ಹಿಂದೆ ಎಳೆಯಲು ಪ್ರಯತ್ನಿಸಿದರೂ, ನಮ್ಮ ಶಕ್ತಿಯ ಅರಿವಿದ್ದರೆ, ಪ್ರಯತ್ನ ಪಟ್ಟರೆ ಸ್ವತಂತ್ರವಾ ಗಿರಬಹುದು. ಪ್ರಯತ್ನವೊಂದೇ ಸ್ವತಂತ್ರ ಪಡೆಯಲಿರುವ ಮೆಟ್ಟಿಲು.