Advertisement

Rae Bareli ಯಲ್ಲಿ ಗೆಲ್ಲಲು ಯತ್ನಿಸಿ: ವಿವಾದ ತಂದ ರಷ್ಯಾದ ಕ್ಯಾಸ್ಪರೋವ್‌ ಸಲಹೆ

01:52 AM May 05, 2024 | Team Udayavani |

ಹೊಸದಿಲ್ಲಿ: ಉತ್ಕೃಷ್ಟ ವ್ಯಕ್ತಿಗಳಿಗೆ ಸವಾಲು ಹಾಕುವ ಮೊದಲು ರಾಯ್‌ಬರೇಲಿ ಗೆಲ್ಲಿ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಚೆಸ್‌ ದಂತಕತೆ ಗ್ಯಾರಿ ಕ್ಯಾಸ್ಪರೋವ್‌ ಸಲಹೆ ನೀಡಿದ್ದಾರೆ. ಅದು ವಿವಾದಕ್ಕೆ ತಿರುಗುತ್ತಿದ್ದಂತೆಯೇ ಎಕ್ಸ್‌ ನಲ್ಲಿ ಸ್ಪಷ್ಟನೆ ನೀಡಿದ ಅವರು, ಭಾರತೀಯ ರಾಜಕಾರಣ ಕುರಿತ ನನ್ನ ಚಿಕ್ಕ ಜೋಕ್‌ ವಾದ ಪರಿಣತಿ ಹೊಂದಿಲ್ಲ. ನನ್ನ ಪ್ರೀತಿಯ ಚೆಸ್‌ನಲ್ಲಿ ರಾಜಕಾರಣಿಯೊಬ್ಬರು ತೊಡಗುವುದನ್ನು ನಾನು ನೋಡದೇ ಇರಲು ಆಗುವುದಿಲ್ಲ ಎಂದು ವಿಶ್ವದ ಮಾಜಿ ಚೆಸ್‌ ಚಾಂಪಿಯನ್‌ ಗ್ಯಾರಿ ಸ್ಪಷ್ಟನೆ ನೀಡಿದ್ದಾರೆ.

Advertisement

ರಾಯ್‌ಬರೇಲಿಯಿಂದ ರಾಹುಲ್‌ ಗಾಂಧಿ ಕಣಕ್ಕೆ ಇಳಿದ ಬಗ್ಗೆ ಸ್ಪಷ್ಟನೆ ನೀಡಿದ್ದ ಕಾಂಗ್ರೆಸ್‌ ಸಂಸದ ಜೈರಾಮ್‌ ರಮೇಶ್‌ “ನಮ್ಮ ನಾಯಕ ರಾಜಕೀಯ ಮತ್ತು ಚೆಸ್‌ನಲ್ಲಿ ಪರಿಣತ’ ಎಂದು ಹೇಳಿದ್ದರು. ಜತೆಗೆ ರಾಹುಲ್‌ ಪ್ರಚಾರದ ವೇಳೆ “ಭಾರತದ ಎಲ್ಲ ರಾಜಕಾರಣಿಗಳ ಪೈಕಿ ತಾವು ಅತ್ಯುತ್ತಮ ಚೆಸ್‌ ಆಟಗಾರ’ ಎಂದು ಹೇಳಿದ್ದ ವೀಡಿಯೋವನ್ನು ಕಾಂಗ್ರೆಸ್‌ ಎಕ್ಸ್‌ನಲ್ಲಿ ಹಂಚಿ ಕೊಂಡಿತ್ತು. ವೀಡಿಯೋ ಬಗ್ಗೆ ಎಕ್ಸ್‌ನಲ್ಲೊಬ್ಬರು ಭಾರತೀಯ ರಾಜಕಾರಣದಲ್ಲಿ ಉತ್ತಮ ಚೆಸ್‌ ಆಟಗಾರ ಯಾರು ಎಂದು ಪ್ರಶ್ನಿಸಲಾಗಿತ್ತು. ಗ್ಯಾರಿಕ್ಯಾಸ್ಪ ರೋವ್‌ ಅವರು ಕಮೆಂಟ್‌ ಮಾಡಿದ್ದರಿಂದ ವಿವಾದ ಉಂಟಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next