Advertisement
ನಗರದ ಜೆಸಿಆರ್ ಬಡಾವಣೆಯಲ್ಲಿರುವ ಸಂಶೋಧಕ ಡಾ| ರಾಜಶೇಖರಪ್ಪ ಮನೆಯಲ್ಲಿ ಪ್ರಾಧಿಕಾರದ ಬೆಳ್ಳಿಹಬ್ಬದ ಅಂಗವಾಗಿ ಬುಧವಾರ ಆಯೋಜಿಸಿದ್ದ “ನಿಮ್ಮ ಮನೆಗೆ ನಮ್ಮ ಪುಸ್ತಕ’ ಎಂಬ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಪುಸ್ತಕ ವಿತರಿಸಿ ಅವರುಮಾತನಾಡಿದರು.
ರಾಜ್ಯದ 25 ಕಡೆಗಳಲ್ಲಿ ಇಂತಹ ಕಾರ್ಯಕ್ರಮವನ್ನು ಅಭಿಯಾನದ ರೀತಿಯಲ್ಲಿ ಆಯೋಜಿಸಲಾಗುತ್ತದೆ ಎಂದರು. ಮನೆ ಮನೆಗೆ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡ ಮೇಲೆ ಮತ್ತು ಶೇ. 50ರ ರಿಯಾಯತಿ ದರದಲ್ಲಿ ಆನ್ಲೈನ್ ಪುಸ್ತಕ ಖರೀದಿಗೆ ಅವಕಾಶ ಕಲ್ಪಿಸಿದ ಮೇಲೆ ಓದುಗರು ಸಾಕಷ್ಟು ಪುಸ್ತಕಗಳನ್ನು ಖರೀದಿಸಿದ್ದಾರೆ. ಆನ್ಲೈನ್ ಖರೀದಿಯಲ್ಲಿ 89 ಸಾವಿರ ಪುಸ್ತಕಗಳು ಖರೀದಿಯಾಗಿದೆ.
Related Articles
Advertisement
ಸಾರ್ವಜನಿಕರಲ್ಲಿ ಓದುವ ಅಭಿರುಚಿ ಹೆಚ್ಚಿಸುವ ಉದ್ದೇಶದಿಂದ ಪ್ರಾಧಿಕಾರ ಹೊಸ ಹೊಸ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದೆ. ಪುಸ್ತಕೋತ್ಸವದ ಮೂಲಕ ದಸರಾ ಆಚರಿಸಲು ಎಲ್ಲರೂ ಮುಂದಾಗಬೇಕು. ಪ್ರತಿ ಮನೆಯಲ್ಲಿ ಗ್ರಂಥಾಲಯ ಕೊಠಡಿಗಳನ್ನು ನಿರ್ಮಿಸುವ ಮನೋಭಾವ ಬೆಳೆಯಬೇಕು ಎಂದು ಆಶಿಸಿದರು. ನಿವೃತ್ತ ಪ್ರಾಧ್ಯಾಪಕ ಜಿ. ಶರಣಪ್ಪ ಮಾತನಾಡಿ, ಬಹಳಷ್ಟು ಲೇಖಕರು ಪ್ರಾಧಿಕಾರವನ್ನು ಹುಡುಕಿಕೊಂಡು ಬರುತ್ತಿದ್ದರು. ಆದರೆಈಗ ಪ್ರಾಧಿಕಾರವೇ ಮನೆಗಳಿಗೆ ಬರುತ್ತಿದೆ. ಶಾಲೆ-ಕಾಲೇಜುಗಳಿಗೆ ಹೋಗುತ್ತಿದೆ. ನೀರು, ಆಹಾರ, ಬಟ್ಟೆಯಂತೆ ಪುಸ್ತಕಗಳು ಜೀವನಾವಶ್ಯಕ ವಸ್ತುಗಳಾಗಬೇಕು ಎಂದು ಅಭಿಪ್ರಾಯಪಟ್ಟರು. ಸಂಶೋಧಕ ಡಾ| ಬಿ. ರಾಜಶೇಖರಪ್ಪ, ನಿವೃತ್ತ ಪ್ರಾಧ್ಯಾಪಕಿ ಯಶೋದಾ ರಾಜಶೇಖರಪ್ಪ, ಸಾಹಿತಿಗಳಾದ ತಾರಿಣಿ ಶುಭದಾಯಿನಿ, ಡಾ| ಗಾಯತ್ರಿ, ಜಿ.ಎಸ್. ಉಜ್ಜಿನಪ್ಪ ಮತ್ತಿತರರು ಇದ್ದರು. ಕನ್ನಡದ ಮೊಟ್ಟ ಮೊದಲ ಕಾದಂಬರಿಯನ್ನು ಇ-ಬುಕ್ ಗೆ ಅಳಡಿಸಲಾಗಿದೆ, ವೆಬ್ಸೈಟ್ ಉನ್ನತೀಕರಿಸಿಲಾಗಿದೆ. ಈಗ ಪ್ರಾಧಿಕಾರದ ವತಿಯಿಂದ ಶೇ. 50ರ ರಿಯಾಯತಿ ದರದಲ್ಲಿ 362 ಪುಸ್ತಕಗಳು ಮಾರಾಟಕ್ಕೆ ಲಭ್ಯ ಇವೆ. ಕನ್ನಡದ ಖ್ಯಾತ ಬರಹಗಾರರ ಸಾಹಿತ್ಯವನ್ನು ಸಮಗ್ರವಾಗಿ ಪ್ರಕಟಿಸಲಾಗುತ್ತದೆ.
ಡಾ| ವಸುಂಧರಾ ಭೂಪತಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ.