ಬೆಂಗಳೂರು: ರಾಜ್ಯದಲ್ಲಿ ಒಡೆದು ಹೋಳಾಗಿರುವ, ಪರಿವಾರ ಬಿಟ್ಟು ಬೇರೆ ಪಕ್ಷಗಳನ್ನು ಸೇರಿರುವ ನಾಯಕರನ್ನು ಸೇರಿಸಿಕೊಂಡು ಜನತಾ ಪರಿವಾರವನ್ನು ಮತ್ತೆ ಸಂಘಟಿಸಲು ಜೆಡಿಎಸ್ ನೂತನ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಮುಂದಾಗಿದ್ದಾರೆ.
ಸೋಮವಾರ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನ ಮತ್ತು ಗವಿ ಗಂಗಾಧರೇಶ್ವರ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದ ಬಳಿಕ ಜೆಡಿಎಸ್ ಕಚೇರಿ ಜೆ.ಪಿ.ಭವನಕ್ಕೆ ತೆರಳಿ ಅಧಿಕೃತವಾಗಿ ಅಧ್ಯಕ್ಷರಾಗಿ ಕಾರ್ಯಭಾರ ವಹಿಸಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಹಿಂದೆ ಜನತಾ ಪರಿವಾರದಲ್ಲಿದ್ದು ಯಾವುದೋ ಕಾರಣಕ್ಕೆ ಪಕ್ಷ ತೊರೆದು ಹೋಗಿದ್ದಾರೋ ಅವರೆಲ್ಲರನ್ನೂ ಈ ಸನ್ನಿದಾನದಲ್ಲಿ ನಿಂತು ವಾಪಸ್ ಬರುವಂತೆ ಮನವಿ ಮಾಡುತ್ತೇನೆ ಎಂದರು.
ಉತ್ತರ ಕರ್ನಾಟಕದಿಂದ ಪ್ರವಾಸ ಆರಂಭ: ದೇವೇಗೌಡರು ಮತ್ತು ಅವರ ಕುಟುಂಬ ಉತ್ತರ ಕರ್ನಾಟಕಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿದ್ದರೂ ಅವರು ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿದ್ದಾರೆಂಬ ಆರೋಪವಿದೆ. ಹೀಗಾಗಿ ರಾಜ್ಯಾಧ್ಯಕ್ಷನಾಗಿ ಉತ್ತರ ಕರ್ನಾಟಕದಿಂದಲೇ ಪ್ರವಾಸ ಆರಂಭಿಸುತ್ತೇನೆ. ದೇವೇಗೌಡರ ಕುಟುಂಬ ಆ ಭಾಗಕ್ಕೆ ಏನು ಕೊಡುಗೆ ನೀಡಿದೆ ಎಂಬುದನ್ನು ಜನರಿಗೆ ತಲುಪಿಸುತ್ತೇನೆ ಎಂದರು. ಬಿಜೆಪಿ ವಿರುದಟಛಿ ಹರಿಹಾಯ್ದ ಅವರು, ಸಾಲ ಮನ್ನಾ, ಮುಖ್ಯಮಂತ್ರಿಗಳು ಮಾಜಿ ಪ್ರಧಾನಿ ದೇವೇಗೌಡರಿಂದ ಸಲಹೆ ಪಡೆಯುತ್ತಿರುವ ಬಗ್ಗೆ ಬಿಜೆಪಿಯವರು ಸಾಕಷ್ಟು ಗೊಂದಲ ಮೂಡಿಸುತ್ತಿದೆ ಎಂದರು. ಇಂದು ನಮ್ಮೆಲ್ಲರಿಗೂ ಯೋಗಾ ಯೋಗ.
ಕುರುಬರೆಲ್ಲಾ ಒಟ್ಟಾಗಿ ಸೇರಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಕುರುಬರು, ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಕುರುಬರು. ಬೂತ್ ಸಮಿತಿ ಅಧ್ಯಕ್ಷ ಸುರೇಶ್ ಬಾಬು ಅವರೂ ಕುರುಬರು.
– ಎನ್.ಎಚ್.ಕೋನರೆಡ್ಡಿ, ಮಾಜಿ ಶಾಸಕ
(ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಎಚ್.ವಿಶ್ವನಾಥ್ ಅಧಿಕಾರ
ಸ್ವೀಕರಿಸಿದ ಸಂದರ್ಭದಲ್ಲಿ ಹೇಳಿದ್ದು)