ಕೆ.ಆರ್.ಪುರ: ಕ್ಷೇತ್ರದಲ್ಲಿ ಕಳೆದ ಐದು ವರ್ಷ ಅವಧಿಯಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಚುನಾವಣೆ ದೃಷ್ಟಿಯಿಂದ ಬಿಜೆಪಿಯವರು ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಜನರನ್ನು ತಪ್ಪು ದಾರಿಗೆ ಎಳೆಯಲು ಯತ್ನಿಸುತ್ತಿದ್ದಾರೆ ಎಂದು ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅ¸Âರ್ಥಿ ಹಾಗೂ ಹಾಲಿ ಶಾಸಕ ಬೈರತಿ ಬಸವರಾಜ ಹೇಳಿದರು.
ಕ್ಷೇತ್ರದ ಎಚ್‌ಎಎಲ್ ವಾರ್ಡ್‌ನ ವಿವಿಧ ಬಡಾವಣೆಗಳಲ್ಲಿ ಮತಯಾಚನೆ ನಡೆಸಿದ ವೇಳೆ ಮಾತನಾಡಿದ ಅವರು, ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಒಂದು ಸುಳ್ಳು ನೂರು ಬಾರಿ ಹೇಳಿ ಅದನ್ನೆ ಸತ್ಯ ಮಾಡಲು ಪ್ರಯತ್ನಿಸುತ್ತಾರೆ.
ಚುನಾವಣೆ ಸಮಯದಲ್ಲಿ ಹಿಂಬಾಗಿಲ ಮೂಲಕ ರಾಜಕಾರಣ ಮಾಡುತ್ತಿರುವ ವಿರೋಧಿಗಳು, ಕ್ಷೇತ್ರದ ಅಭಿವೃದ್ಧಿ ಸಹಿಸದೆ ವಾಮಮಾರ್ಗದ ಮೂಲಕ ಮತದಾರರನ್ನು ಸೆಳೆಯಲು ಮಾಧ್ಯಮಗಳ ಮುಂದೆ ಸುಳ್ಳು ಆರೋಪ ಮಾಡಿ ಅಪಪ್ರಚಾರ ಮಾಡುತ್ತಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂಬ ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದರು.
ಕ್ಷೇತ್ರಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ತಂದಿರುವ ಅನುದಾನ ಸಮರ್ಪಕವಾಗಿ ಬಳಸಿಕೊಂಡು ರಾತ್ರಿ ಹಗಲು ಎನ್ನದೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸಿದ್ದೇನೆ. ಅಲ್ಲದೇ ಪಾರದರ್ಶಕ ಆಡಳಿತ ನೀಡಿದ್ದೇವೆ. ಆದರೂ ಈ ಬಾರಿಯೂ ಸೋಲುವ ಹತಾಶೆಯಲ್ಲಿರುವ ಬಿಜೆಪಿಯವರು, ಐದು ವರ್ಷಗಳಿಂದ ಮಾಡುತ್ತಾ ಬಂದಿರುವ ಹಳೇ ಆರೋಪಗಳನ್ನೇ ಮತ್ತೆ ಮತ್ತೆ ಮಾಡುತ್ತಿದ್ದಾರೆ. ಇವರ ಅಪಪ್ರಚಾರದಿಂದ ರೋಸಿ ಹೋಗಿರುವ ಮತದಾರರು ಮೇ 12ರಂದು ನಡೆಯುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಕೆ.ಆರ್.ಪುರ ಕ್ಷೇತ್ರದ ಎಚ್‌ಎಎಲ್ ವಾರ್ಡ್‌ನ ರೆಡ್ಡಿಪಾಳ್ಯ, ನೆಲ್ಲೂರುಪುರ, ಜಗದೀಶ್‌ನಗರ, ಇಸ್ಲಾಂಪುರ, ವಿ¸ೂತಿಪುರ, ಎಲ್.ಬಿ.ಶಾಸಿನಗರ, ಅನ್ನಸಂದ್ರಪಾಳ್ಯ ಸೇರಿ ವಿವಿಧಡೆ ಕಾಂಗ್ರೆಸ್ ಅ¸Âರ್ಥಿ, ಶಾಸಕ ಭೈರತಿ ಬಸವರಾಜ ಅವರು ಮನೆಮನೆಗೆ ತೆರಳಿ ಮತಯಾಚನೆ ಮಾಡಿದರು. ಈ ವೇಳೆ ಪಾಲಿಕೆ ಸದಸ್ಯ ಮಂಜುನಾಥ, ಉದಯನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮನೋಜ್‌ಕುಮಾರ್, ಮಾರ್ಕೆಟ್ ರಮೇಶ್, ಪ್ರಸಾದ ರೆಡ್ಡಿ ಮತ್ತಿತ್ತರರು ಇದ್ದರು.