ಉಳ್ಳಾಲ: ಸರ್ಕಾರದಿಂದ ಬರುವ ಸವಲತ್ತು ಕಟ್ಟಕಡೆಯ ಜನರಿಗೂ ತಲುಪಿಸುವ ಜತೆ ಕೆಡುಕು ಮುಕ್ತ ಸಮಾಜ ನಿರ್ಮಾಣದಲ್ಲಿ ಸಂಘಟನೆ ತೊಡಗಿಸಿಕೊಂಡು ಜನಮನ್ನಣೆಗಳಿಸಲು ಮುಂದಾಗಬೇಕು ಎಂದು ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಭಿಪ್ರಾಯಪಟ್ಟರು.
ಉಳ್ಳಾಲ ದರ್ಗಾ ವಠಾರದಲ್ಲಿ ನಡೆದ ಸಯ್ಯದ್ ಮದನಿ ಸೋಶಿಯಲ್ ಫ್ರೆಂಡ್ಸ್ (ಎಸ್‌ಎಂಎಸ್‌ಎಫ್) ಸಂಘಟನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮುದಾಯದ ಯುವಕರನ್ನು ಧಾರ್ಮಿಕತೆಯತ್ತ ಸೆಳೆಯುವ ಮೂಲಕ ಮಾದಕ ವಸ್ತುಗಳ ದಾಸರಾಗಿ ದುಷ್ಕೃತ್ಯ ಮಾಡುವುದನ್ನು ತಡೆಯುವುದು ಇಂದಿನ ಅವಶ್ಯಕತೆಯಾಗಿದೆ. ದರ್ಗಾ ಅಧೀನದಲ್ಲಿ ಸಯ್ಯದ್ ಮದನಿ ತಂಙಳ್ ಹೆಸರಲ್ಲಿ ಮದರಸಾ ಪುಸ್ತಕಗಳನ್ನು ಹೊರತರಲಾಗಿದ್ದು ಇದರಿಂದಾಗಿ ಆ ಪ್ರದೇಶದ ಮಕ್ಕಳು ಧಾರ್ಮಿಕ ಶಿಕ್ಷಣ ದಿಂದ ವಂಚಿತರಾಗಿದ್ದಾರೆ ಎಂದರು.
ಕೇಂದ್ರ ಜುಮಾ ಮಸೀದಿ ಖತೀಬ್ ಶಮೀಮ್ ಸಖಾಫಿ, ಮೇಲಂಗಡಿ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಫಾರೂಕ್ ಉಳ್ಳಾಲ್, ದರ್ಗಾ ಸಮಿತಿ ಪ್ರಧಾನ ಕಾರ್ಯದರ್ಶಿ ಮಹಮ್ಮದ್‌ತ್ವಾಹ, ಉಪಾಧ್ಯಕ್ಷರುಗಳಾದ ಬಾವ ಮಹಮ್ಮದ್, ಯು.ಕೆ.ಇಸ್ಮಾಯಿಲ್, ಲೆಕ್ಕ ಪರಿಶೋಧಕ ಯು.ಟಿ.ಇಲ್ಯಾಸ್, ಸದಸ್ಯ ಖಾಸಿಂ ಕೋಡಿ, ಜತೆ ಕಾರ್ಯದರ್ಶಿ ನೌಷಾದ್ ಅಲಿ, ಅರೆಬಿಕ್ ಟ್ರಸ್ಟ್ ಉಪಾಧ್ಯಕ್ಷ ಯು.ಎಚ್.ಮೊಹಮ್ಮದ್, ಜತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲಾ, ಕೋಶಾಧಿಕಾರಿ ಅಬ್ಟಾಸ್ ಕೆನರಾ, ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಫಾ ಅಬ್ದುಲ್ಲಾ, ಕೋಶಾಧಿಕಾರಿ ಹಮೀದ್ ಕಲ್ಲಾಪು, ಸದಸ್ಯ ಅಯೂಬ್ ಯು.ಪಿ, ಅಕ್ಕರೆಕೆರೆ ಮಸೀದಿ ಅಧ್ಯಕ್ಷ ಇಸ್ಮಾಯಿಲ್, ಪ್ರಮುಖರಾದ ಅಬೂಬಕ್ಕರ್, ಕುಂಞಿ ಅಹ್ಮದ್, ಅಬೂಬಕ್ಕರ್ ಹೈದರಾಲಿ ರಸ್ತೆ, ಹಮೀದ್ ಅಲೇಕಳ, ಹಮೀದ್ ಕೋಡಿ, ಚೆಯಿಮೋನು, ಆಲಿಮೋನು, ಇಬ್ರಾಹಿಂ ಉಳ್ಳಾಲಬೈಲ್, ಜಮಾಲ್ ಬಾರ್ಲಿ, ಅಬ್ಟಾಸ್ ಕೋಟೆಪುರ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ದರ್ಗಾ ಅಧೀನ ಕ್ಕೊಳಪಡುವ ಐದು ಮೊಹಲ್ಲಾಗಳಿಗೆ ಸಂಚಾಲಕರನ್ನು ನೇಮಿಸಲಾಯಿತು. ಕಲ್ಲಾಪುವಿಗೆ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ಕೋಟೆಪುರಕ್ಕೆ ಸ್ವದಕತ್ತುಲ್ಲಾ, ಅಲೇಕಳಕ್ಕೆ ಇಬ್ರಾಹಿಂ, ಮುಕಚ್ಚೇರಿಗೆ ಖಾಲಿದ್ ಉಳ್ಳಾಲಬೈಲ್ ಹಾಗೂ ಮೇಲಂಗಡಿಗೆ ಕೌನ್ಸಿಲರ್ ಪೊಡಿಮೋನು ನೇಮಕಗೊಂಡರು.