Advertisement

ಸತ್ಯವನ್ನು ಸೋಲಿಸಲಾಗದು: ಕರ್ನಾಟಕದ ಬಗ್ಗೆ ತೇಜಸ್ವಿ ಪ್ರತಿಕ್ರಿಯೆ

07:09 PM May 19, 2018 | udayavani editorial |

ಪಟ್ನಾ : ಕರ್ನಾಟಕ ವಿಧಾನಸಭೆಯ ಸದನದಲ್ಲಿ ವಿಶ್ವಾಸ ಮತ ಎದುರಿಸುವುದಕ್ಕೆ ಮುನ್ನವೇ ರಾಜ್ಯ ಮುಖ್ಯಮಂತ್ರಿ ಪದಕ್ಕೆ ಬಿ ಎಸ್‌ ಯಡಿಯೂರಪ್ಪ ಇಂದು ಶನಿವಾರ ರಾಜೀನಾಮೆ ನೀಡಿರುವುದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಅವರು “ಸತ್ಯವನ್ನು ಯಾವತ್ತೂ ಸೋಲಿಸಲು ಸಾದ್ಯವಿಲ್ಲ; ಅದು ಯಾವತ್ತೂ ಸುಳ್ಳನ್ನು ಮತ್ತು ಸುಳ್ಳುಗಾರನನ್ನು ಸೋಲಿಸುತ್ತದೆ’ ಎಂದು ಹೇಳುವ ಮೂಲಕ ಬಿಜೆಪಿ ನಾಯಕತ್ವಕ್ಕೆ ಟಾಂಗ್‌ ನೀಡಿದ್ದಾರೆ.

Advertisement

ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್‌ ಯಾದವ್‌ ಅವರ ಪುತ್ರ ತೇಜಸ್ವಿ ಅವರು ನಿನ್ನೆಯಷ್ಟೇ ಕರ್ನಾಟಕ ಮಾದರಿಯಲ್ಲಿ ಬಿಹಾರದಲ್ಲಿ ಈಚಿನ ಚುನಾವಣೆಯಲ್ಲಿ ಅತೀ ದೊಡ್ಡ ಪಕ್ಷವಾಗಿ ಮೂಡಿ ಬಂದಿರುವ ಆರ್‌ಜೆಡಿ ಯ ಸಂಗಡ ಕಾಂಗ್ರೆಸ್‌, ಸಿಪಿಐ-ಎಂಎಲ್‌ ಮತ್ತು ಎಚ್‌ಎಎಂ ನಾಯಕರೊಂದಿಗೆ ಬಿಹಾರ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಅವರನ್ನು ಭೇಟಿಯಾಗಿ ಸರಕಾರ ರಚಿಸುವುದಕ್ಕೆ ತಮ್ಮ ಮೈತ್ರಿ ಕೂಟಕ್ಕೆ ಆಹ್ವಾನ ನೀಡಬೇಕೆಂಬ ಮನವಿಯನ್ನು ಸಲ್ಲಿಸಿದ್ದರು.

243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ  80 ಸ್ಥಾನ ಹೊಂದಿರುವ ಆರ್‌ಜೆಡಿ ಅತೀ ದೊಡ್ಡ ಏಕೈಕ ಪಕ್ಷವಾಗಿ ಮೂಡಿ ಬಂದಿತ್ತು. ಕಳೆದ ವರ್ಷ ಜುಲೈಯಲ್ಲಿ  ನಿತೀಶ್‌ ಕುಮಾರ್‌ ನೇತೃತ್ವದ ಮಹಾ ಘಟ ಬಂಧನ ಮೈತ್ರಿಕೂಟದಲ್ಲಿ ಅದು ಕಾಂಗ್ರೆಸ್‌ ನೊಂದಿಗೆ ಸೇರಿಕೊಂಡಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next