Advertisement

CSK; ಧೋನಿ ಯಾಕೆ ಕೆಳ ಕ್ರಮಾಂಕದಲ್ಲಿ ಆಡುತ್ತಿದ್ದಾರೆ…: ಹೊರಬಿತ್ತು ಸತ್ಯ

06:04 PM May 07, 2024 | Team Udayavani |

ಚೆನ್ನೈ: ಕೆಲ ದಿನಗಳ ಹಿಂದೆ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರು 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಅಚ್ಚರಿ ಮೂಡಿಸಿದ್ದರು. ಶಾರ್ದೂಲ್ ಠಾಕೂರ್, ಮಿಚೆಲ್ ಸ್ಯಾಂಟ್ನರ್ ಅವರ ಬಳಿಕ ಬ್ಯಾಟಿಂಗ್ ಗೆ ಇಳಿದಿದ್ದ ಧೋನಿ ಬಗ್ಗೆ ಹಲವರು ಟೀಕೆ ಮಾಡಿದ್ದರು.

Advertisement

ಮಾಜಿ ಆಟಗಾರರಾದ ಹರ್ಭಜನ್ ಸಿಂಗ್ ಮತ್ತು ಇರ್ಫಾನ್ ಪಠಾಣ್ ಕಟು ಮಾತಿನಲ್ಲಿ ಟೀಕಿಸಿದ್ದರು. 9ನೇ ಕ್ರಮಾಂಕದಲ್ಲಿ ಆಡುವುದಕ್ಕಿಂತ ಧೋನಿ ಬದಲಿಗೆ ಚೆನ್ನೈ ತಂಡದಲ್ಲಿ ವೇಗಿಯನ್ನು ಆಡಿಸಬಹುದು ಎಂದಿದ್ದರು. ಇದೀಗ ಧೋನಿ ಕೆಳ ಕ್ರಮಾಂಕದಲ್ಲಿ ಆಡಲು ಕಾರಣ ಇದೀಗ ಬಯಲಾಗಿದೆ.

ಧೋನಿ ತನ್ನ ಕಾಲಿನ ಸ್ನಾಯು ನೋವಿಗೆ ಒಳಗಾಗಿದೆ. ಇದರಿಂದ ಮೈದಾನದಲ್ಲಿ ಹೆಚ್ಚು ಹೊತ್ತು ಓಡುವುದು ಕಷ್ಟವಾಗುತ್ತದೆ. ಹೀಗಾಗಿ ಧೋನಿ ಮೈದಾನಕ್ಕಿಳಿಯಲು ಬಯಸುತ್ತಿಲ್ಲ ಎಂದು ಟೈಮ್ಸ್ ಆಫ್ ಇಂಡಿಯಾದ ವರದಿ ತಿಳಿಸಿದೆ.

“ನಾವು ವಾಸ್ತವಿಕವಾಗಿ ನಮ್ಮ ‘ಬಿ’ ತಂಡದೊಂದಿಗೆ ಆಡುತ್ತಿದ್ದೇವೆ. ಧೋನಿ ಅವರನ್ನು ಟೀಕಿಸುವವರಿಗೆ ಅವರು ಈ ತಂಡಕ್ಕಾಗಿ ಮಾಡುತ್ತಿರುವ ತ್ಯಾಗದ ಬಗ್ಗೆ ತಿಳಿದಿಲ್ಲ” ಎಂದು ಮೂಲವನ್ನು ಉಲ್ಲೇಖಿಸಿ ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next