Advertisement

ಪ್ರತಿಭಾವಂತರಿಗೆ ಪ್ರೋತ್ಸಾಹ ನೀಡುವುದೆ ಟ್ರಸ್ಟ್‌ ಉದ್ದೇಶ: ಜಯಂತಿ ರಾವ್‌

06:21 PM Jan 15, 2020 | Suhan S |

ಮುಂಬಯಿ, ಜ. 14: ದಿ| ಚಂದ್ರಶೇಖರ ರಾವ್‌ ಮೆಮೋರಿಯಲ್‌ ಟ್ರಸ್ಟ್‌ ಮತ್ತು ಮುಂಬಯಿ ಚುಕ್ಕಿ ಸಂಕುಲ ಸಹಕಾರದೊಂದಿಗೆ ಸ್ವರ್ಗೀಯ ಚಂದ್ರಶೇಖರ ರಾವ್‌ ಸಂಸ್ಮರಣಾ ಕಾರ್ಯಕ್ರಮವು ಜ. 9 ರಂದು ಭಾಂಡೂಪ್‌ನಲ್ಲಿ ಹಮ್ಮಿಕೊಳ್ಳಲಾಯಿತು.

Advertisement

ಜಯಂತಿ ಸಿ. ರಾವ್‌ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಚಂದ್ರಶೇಖರ ರಾವ್‌ ಅವರ ಆಶಯದಂತೆ ಈ ಟ್ರಸ್ಟ್‌ ರಚಿಸಲಾಗಿದ್ದು, ಮಕ್ಕಳ ಪ್ರತಿಭೆ ಪುರಸ್ಕಾರ, ಅಸಹಾಯಕರಿಗೆ ನೆರವು ಮತ್ತು ಅವರ ಆಸಕ್ತಿಯ ಕ್ಷೇತ್ರವಾದ ಸಾಹಿತ್ಯದಲ್ಲಿ ತೆರೆಮರೆಯಲ್ಲಿರುವ ಪ್ರತಿಭಾವಂತರಿಗೆ ಪ್ರೋತ್ಸಾಹ ನೀಡುವುದೇ ಉದ್ದೇಶವಾಗಿದೆ. ತಮ್ಮೆ ಲ್ಲರ ಸಹಕಾರದಿಂದ ಈ ನಿಟ್ಟಿಯಲ್ಲಿ ಮುಂದುವರಿಯುವ ಇಚ್ಛೆ ಇದೆ. ಇದೆಲ್ಲವನ್ನು ಸಾಧ್ಯವಾಗಿಸಲು ಸದಾ ಬೆನ್ನೆಲುಬಾಗಿರುವ ಚುಕ್ಕಿ ಸಂಕುಲದ ಕವಿ, ಸಾಹಿತಿ, ಕಲಾವಿದರಾದ, ರಾವ್‌ ಅವರ ನಿಕಟವರ್ತಿಗಳೂ ಆಗಿರುವ ಸಾ. ದಯಾ ಮತ್ತು ಗೋಪಾಲ ತ್ರಾಸಿ ಇವರ ಸಹಕಾರ ಅನುಪಮವಾದುದು ಎಂದರು.

ಈ ಸಂದರ್ಭದಲ್ಲಿ ನೆರೆದ ಕವಿಗಳಾದ ಶಾರದಾ ಅಂಬೆಸಂಗೆ, ಡಾ| ರಜನಿ ವಿ. ಪೈ, ಡಾ| ದಾಕ್ಷಾಯಣಿ ಯಡಹಳ್ಳಿ, ಸರೋಜ ಅಮಾತಿ, ಕುಮುದಾ ಶೆಟ್ಟಿ ಕಾವ್ಯ ವಾಚನ ಮಾಡಿದರು. ಅರುಣ್‌ ಶೇಠ್ ಮತ್ತು ಎಸ್‌. ಶೆಣೈ ಮಾತಾಡಿದರು. ಕಾರ್ಯಕ್ರಮದಲ್ಲಿ ಬಡ ವಿದ್ಯಾರ್ಥಿಗಳಿಗೆ ನೆರವು ನೀಡಲಾಯಿತು. ರಾವ್‌ ಅವರ ಹಿತೈಷಿಗಳು ಪಾಲ್ಗೊಂಡ ಈ ಕಾರ್ಯಕ್ರಮದಲ್ಲಿ, ಮಕ್ಕಳ ಹಾಡು, ನೃತ್ಯ ಮತ್ತು ಕಾವ್ಯ ವಾಚನಗೈದರು. ಹೋಪ್‌ ಫೌಂಡೇಶನ್‌ ಧಾರಾವಿ ಇದರ ಅನಿಲ ಬೊಡಲ್‌, ಭೀಮರಾಯ ಚಿಲ್ಕಾ ಮತ್ತಿತರರು ಉಪಸ್ಥಿತರಿದ್ದರು. ಕವಿ, ಕಥೆಗಾರ ಗೋಪಾಲ ತ್ರಾಸಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಶೇಖರ ರಾವ್‌ ಅವರ ಕವನ ವಾಚಿಸಿ, ಕಾರ್ಯಕ್ರಮ ನಿರೂಪಿಸಿದರು. ಸಾಹಿತ್ಯಾಭಿಮಾನಿ ಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next