Advertisement
“39ರ ಹರೆಯದ ಯುವಕ ಕುಶ್ನರ್‌ವಾಷಿಂಗ್ಟನ್‌ಗೆ ಹೊಸಬರೇನಲ್ಲ. ಈ ಮೊದಲು ಅವರು ಸರಕಾರದ ಮಟ್ಟದಲ್ಲಿ ಸೇವೆ ಸಲ್ಲಿಸಿದ ಅನುಭವವಿಲ್ಲ. ಟ್ರಂಪ್ ಅವರ ಪುತ್ರಿ ಇವಾಂಕಾ ಅವರೊಂದಿಗೆ ವಿವಾಹವಾಗಿದ್ದ ಅವರ ಹೊಣೆ 2016ರ ಚುನಾವಣೆಯ ಅನಂತರ ಇನ್ನಷ್ಟು ಹೆಚ್ಚಾಗಿತ್ತು. ಯಾವುದೇ ವೈದ್ಯಕೀಯ ಅನುಭವವಿಲ್ಲ. ಯಾವುದೇ ಚುನಾವಣೆಗೆ ನಿಂತು ಚುನಾಯಿತರಾಗಿಲ್ಲ. ಮಿಲಿಟರಿ ಸೇವೆ ಬಗ್ಗೆ ಪರಿವೇ ಇಲ್ಲದ ಕುಶ್ನರ್, ತಾವಾಗಿಯೇ ಮಹತ್ತರ ಜವಾಬ್ದಾರಿ ಹೊರಲು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಶ್ವೇತ ಭವನದ ಪ್ರಮುಖರಾಗಿ ಕಾರ್ಯ ನಿರ್ವಹಿಸಲಾರಂಭಿಸಿದ್ದಾರೆ.
ಕೋವಿಡ್-19 ಸೋಂಕು ಹರಡುವಿಕೆ ಸಂಬಂಧ ಪಟ್ಟಂತೆ ದೈನಂದಿನ ಕಿರು ಮಾಧ್ಯಮ ಗೋಷ್ಠಿಯಲ್ಲಿ ಟ್ರಂಪ್ ಜತೆ ಕುಶ್ನರ್ ಪಾಲ್ಗೊಂಡಿದ್ದು, ಅಮೆರಿಕ ಇತಿಹಾಸದಲ್ಲೇ ಎದುರಾಗಿರುವ ದೊಡ್ಡ ಬಿಕ್ಕಟ್ಟನ್ನು ಸಮರ್ಥ ವಾಗಿ ಎದುರಿಸುವ ಸಾಮರ್ಥ್ಯವನ್ನು ನಾವು ಬೆಳೆಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಅವರ ಉಪಸ್ಥಿತಿ ಅಲ್ಲಿನ ಸಭೆಗೆ ಆಶ್ಚರ್ಯ ತಂದಿದ್ದು, ಕುಶ°ರ್‌ಗೆ ಬಿಕ್ಕಟ್ಟನ್ನು ಪರಿಹರಿಸುವ ನಾಯಕತ್ವ ಗುಣ ಇದೆ ಎಂಬ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ಚಿಂತಕರ ಸಲಹೆ
ಕ್ರಿಯಾತ್ಮಕ ಚಿಂತಕನಾಗಿ ತನ್ನನ್ನು ತಾನು ಬಿಂಬಿಸಿಕೊಳ್ಳುತ್ತಿರುವ ರಿಯಲ್ ಎಸ್ಟೇಟ್ ಉದ್ಯಮಿ ಕುಶ್ನರ್, ಕೋವಿಡ್-19 ನಿಯಂತ್ರಣಕ್ಕಾಗಿ ಒಂದು ಗುಪ್ತವಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ ಎಂಬ ವದಂತಿ ಹಲವು ದಿನಗಳಿಂದ ಕೇಳಿಬರುತ್ತಿತ್ತು. ಇದೀಗ ಇವರ ಉಪಸ್ಥಿತಿಯಿಂದ ಆ ವದಂತಿಗೆ ಜೀವ ಬಂದಿದೆ. ಟ್ರಂಪ್ ಸಲಹೆ ಮೇರೆಗೆ ದೇಶದ ಉತ್ತಮ ಚಿಂತಕರೊಂದಿಗೆ ಅಮೂಲ್ಯ ಸಲಹೆಗಳನ್ನು ಕೇಳಿ ಯೋಜನೆ ರೂಪಿಸುವಲ್ಲಿ ಕುಶ್ನರ್ ಪಾತ್ರ ವಹಿಸಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾದ್ಯಮಗಳು ವರದಿ ಮಾಡಿವೆ.