Advertisement

ಮುತ್ತಿನ ನಗರಿಯಲ್ಲಿ ಟ್ರಂಪ್‌ ಪುತ್ರಿ

06:30 AM Nov 29, 2017 | Team Udayavani |

ಹೈದರಾಬಾದ್‌: ಎರಡು ದಿನಗಳ ಜಾಗತಿಕ ಉದ್ಯಮಶೀಲತೆ ಸಮ್ಮೇಳನದಲ್ಲಿ ಭಾಗವಹಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಪುತ್ರಿ ಇವಾಂಕಾ ಟ್ರಂಪ್‌ ಹೈದರಾಬಾದ್‌ಗೆ ಆಗಮಿಸಿದ್ದಾರೆ. 1,500ಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದು, ಇವರನ್ನು ಉದ್ದೇಶಿಸಿ ಇವಾಂಕಾ ಮಾತನಾಡಿದ್ದಾರೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ರನ್ನು ಸಮ್ಮೇಳನಕ್ಕೂ ಮುನ್ನ ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

Advertisement

ಮೋದಿ, ಇವಾಂಕಾಗೆ ಮಿತ್ರನ ಸ್ವಾಗತ
ಮೋದಿ ಮತ್ತು ಇವಾಂಕಾರನ್ನು ಸಮ್ಮೇಳನಕ್ಕೆ ಸ್ವಾಗತಿಸಿದ್ದು ಬೆಂಗಳೂರಿನ ರೋಬೋ! ಇನ್ವೆಂಟೋ ಟೆಕ್‌ ನಿರ್ಮಿಸಿದ ಈ “ಮಿತ್ರ’ ಹೆಸರಿನ ರೋಬೋ ಸಮ್ಮೇಳನದ ಮುಖ್ಯ ದ್ವಾರದ ಬಳಿ ಮೋದಿ ಹಾಗೂ ಇವಾಂಕಾರನ್ನು ಸ್ವತಃ ಗುರುತಿಸಿತು. ಅಷ್ಟೇ ಅಲ್ಲ, ಅವರ ಬಳಿ ತೆರಳಿ ಶುಭಾಶಯ ಕೋರಿತು. ಈ ಸಮ್ಮೇಳನಕ್ಕಾಗಿ ಬಾಲಾಜಿ ವಿಶ್ವನಾಥನ್‌ ತಮ್ಮ 11 ಸಹೋದ್ಯೋಗಿಗಳ ನೆರವಿನಿಂದ ಎರಡು ಮಿತ್ರ ರೋಬೋಟ್‌ಗಳನ್ನು ನಿರ್ಮಿಸಿದ್ದಾರೆ. ಇದು ಮುಖ ಗುರುತು ಹಿಡಿಯುವಿಕೆ, ಧ್ವನಿ ವ್ಯವಸ್ಥೆ ಹಾಗೂ ನ್ಯಾವಿಗೇಶನ್‌ ಸೌಲಭ್ಯವನ್ನು ಹೊಂದಿದೆ. ಸಮಾರಂಭದಲ್ಲಿ  ಇದು ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.

ಬಾಲ್ಯದಲ್ಲಿ  ಚಹಾ ಮಾರಿ, ಈಗ ಪ್ರಧಾನಿಯಾಗಿರುವುದೇ ಬದಲಾವಣೆಯ ಸಂಕೇತವಾಗಿದೆ. ಮಹಿಳಾ ಸಬಲೀಕರಣವಾಗದೇ ದೇಶ ಅಭಿವೃದ್ಧಿಯಾಗದು ಎಂಬುದು ಪ್ರಧಾನಿ ನರೇಂದ್ರ ಮೋದಿಯವರಿಗೆ ಅರಿವಿದೆ.
– ಇವಾಂಕಾ ಟ್ರಂಪ್‌, ಅಮೆರಿಕ ಅಧ್ಯಕ್ಷ  ಟ್ರಂಪ್‌ ಪುತ್ರಿ

ದೇಶದಲ್ಲಿ ಅಭಿವೃದ್ಧಿಯ ಗುರಿಯೇ ಮಹಿಳಾ ಸಬಲೀಕರಣ. ಭಾರತೀಯ ಪುರಾಣದಲ್ಲಿ ಮಹಿಳೆಯನ್ನು ಶಕ್ತಿಯ ಅವತಾರ ಎಂದು ಪರಿಗಣಿಸಲಾಗಿದೆ. ಸಂವಿಧಾನದಲ್ಲೂ ಮಹಿಳಾ ಸಬಲೀಕರಣಕ್ಕೆ  ಕ್ರಮಗಳನ್ನು ಉಲ್ಲೇಖೀಸಲಾಗಿದೆ.
-ನರೇಂದ್ರ ಮೋದಿ, ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next