ಪೆನ್ಸಿಲ್ವೇನಿಯಾ: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald trump) ಅವರು ಪೆನ್ಸಿಲ್ವೇನಿಯಾದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ವೇಳೆ ಅವರ ಮೇಲೆ ಗುಂಡಿನ ದಾಳಿಯಾಗಿದೆ. ಭಾಷಣ ಮಾಡುತ್ತಿದ್ದ ವೇಳೆ ಟ್ರಂಪ್ ಅವರೆಡೆಗೆ ಬಂಧೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಗುಂಡು ಟ್ರಂಪ್ ಅವರ ಬಲ ಕಿವಿಯ ಮೇಲ್ಭಾಗವನ್ನು ಹರಿದುಕೊಂಡು ಹೋಗಿದೆ.
ಟ್ರಂಪ್ ಕಿವಿಯಿಂದ ರಕ್ತ ಚಿಮ್ಮುತ್ತಿದ್ದಂತೆ ಅವರ ಭದ್ರತೆಯ ಸೀಕ್ರೆಟ್ ಸರ್ವಿಸ್ ಕೂಡಲೇ ಅವರನ್ನು ಸುತ್ತುವರಿದು, ಅವರನ್ನು ವೇದಿಕೆಯಿಂದ ಕರೆದುಕೊಂಡು ಹೋದರು. ಶೂಟ್ ಮಾಡಿರುವ ಬಂಧೂಕುಧಾರಿಯನ್ನು ಕೂಡಲೇ ಸೀಕ್ರೆಟ್ ಸರ್ವಿಸ್ ಏಜೆಂಟ್ ಗಳು ಹೊಡೆದುರುಳಿಸಿದ್ದಾರೆ.
ಟ್ರಂಪ್ ರ್ಯಾಲಿ ಗುಂಡಿನ ದಾಳಿಯನ್ನು ಹತ್ಯೆ ಯತ್ನ ಎಂದು ತನಿಖೆ ನಡೆಸಲಾಗುತ್ತಿದೆ ಎಂದು ಯುಎಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬುಲೆಟ್ ಒಂದು ವೇಳೆ ಅದರ ಬಲಕ್ಕೆ 2 ಸೆಂಟಿಮೀಟರ್ ಬಂದಿದ್ದರೆ, ಅದು ಮಾಜಿ ಅಧ್ಯಕ್ಷ ಟ್ರಂಪ್ ಗೆ ಮಾರಕವಾಗಿ ಸಾಬೀತಾಗುವ ಹೆಡ್‌ಶಾಟ್ ಆಗುತ್ತಿತ್ತು. ಟ್ರಂಪ್ ತಮ್ಮ ಭಾಷಣದ ಸಮಯದಲ್ಲಿ ಚಲಿಸುವ ಸನ್ನೆಗಳನ್ನು ಮಾಡುತ್ತಿದ್ದರಿಂದ ಬಹುಶಃ ಅವರು ಉಳಿದರು ಎನ್ನಲಾಗಿದೆ.
ಗುಂಡಿನ ಸದ್ದು ಕೇಳಿಸುತ್ತಿದ್ದಂತೆ, ಸೀಕ್ರೆಟ್ ಸರ್ವಿಸ್ ಟ್ರಂಪ್ ಅವರನ್ನು ಸುತ್ತುವರೆಯಿತು. ಅವರ ಎಸ್ ಯುವಿಗೆ ಕರೆದುಕೊಂಡು ಹೋಗಲಾಯಿತು.
ಘಟನೆಯಲ್ಲಿ ಕನಿಷ್ಠ ಒಬ್ಬ ಸಾವನ್ನಪ್ಪಿದ್ದಾನೆ ಮತ್ತು ಇಬ್ಬರು ಪ್ರೇಕ್ಷಕರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರ್ಯಾಲಿ ಸ್ಥಳದ ಹೊರಗಿನ ಎತ್ತರದ ಸ್ಥಾನದಿಂದ ದಾಳಿ ಮಾಡಿದ ಶಂಕಿತ ಶೂಟರ್ ನನ್ನು ಕೊಂದಿರುವುದಾಗಿ ಸೀಕ್ರೆಟ್ ಸರ್ವಿಸ್ ಹೇಳಿದೆ.