ವಾಷಿಂಗ್ಟನ್ ಡಿಸಿ: ಅಮೆರಿಕದ ನೂತನ ಅಧ್ಯಕ್ಷ- ಉಪಾಧ್ಯಕ್ಷರಾಗಿ ಜೋ ಬೈಡೆನ್ ಮತ್ತು ಕಮಲಾ ಹ್ಯಾರಿಸ್ ಇಂದು ಪದಗ್ರಹಣ ಮಾಡಲಿದ್ದಾರೆ. ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ವಿದಾಯ ಭಾಷಣದಲ್ಲಿ ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದ್ದಾರೆ.
ಈ ಮೊದಲೇ ಚಿತ್ರೀಕರಿಸಿದ್ದ ಡೊನಾಲ್ಡ್ ಟ್ರಂಪ್ ಅವರ ವಿಡಿಯೊ ಸಂದೇಶವನ್ನು ಶ್ವೇತಭವನ ಬಿಡುಗಡೆ ಮಾಡಿದೆ. ಅಮೆರಿಕ ಅಧ್ಯಕ್ಷ ಪದವಿ ವಹಿಸಿರುವುದು ವಿವರಣೆಗೂ ಮೀರಿದ ಗೌರವ ಎಂದವರು ಟ್ರಂಪ್ ಅಭಿಪ್ರಾಯಪಟ್ಟಿದ್ದಾರೆ.
ಈ ವಾರ ನಾವು ಹೊಸ ಆಡಳಿತವನ್ನು ಉದ್ಘಾಟಿಸುತ್ತಿದ್ದು, ಅಮೆರಿಕವನ್ನು ಸುರಕ್ಷಿತ ಹಾಗೂ ಸಮೃದ್ಧವಾಗಿಸುವಲ್ಲಿ ಅದರ ಯಶಸ್ಸಿಗಾಗಿ ಪ್ರಾರ್ಥಿಸುತ್ತೇವೆ. ಹೊಸ ಅಧ್ಯಕ್ಷರಿಗೆ ನಮ್ಮ ಶುಭಾಶಯಗಳನ್ನು ಅರ್ಪಿಸುತ್ತಿದ್ದೇವೆ. ಅದೃಷ್ಟ ಅವರ ಪಾಲಿಗಿರಲೆಂದು ಬಯಸುತ್ತೇವೆ ಎಂದು ಟ್ರಂಪ್ ತನ್ನ ಸಂದೇಶದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ:ಇಫಿ 2021: ಹೊಸ ಜಗತ್ತಿಗೆ ಮುಖ ಮಾಡಿದೆ; ನಟಿ ಗುಂಜಾಲಮ್ಮ ಮುಕ್ತ ಮಾತು
ಹಿಂದೆಂದಿಗಿಂತಲೂ ಹೆಚ್ಚಾಗಿ ಭಿನ್ನಾಭಿಪ್ರಾಯಗಳ ನಡುವೆ ಏಕತೆಯನ್ನು ತೋರಲು, ಪಕ್ಷಪಾತದ ಹಗೆತನವನ್ನು ಮೀರಿ ಬರಲು ಮತ್ತು ಸಮಾನ ಗುರಿಯತ್ತ ಮುನ್ನಡೆಯಲು ಡೊನಾಲ್ಡ್ ಟ್ರಂಪ್ ಕರೆ ನೀಡಿದ್ದಾರೆ.
ಇದನ್ನೂ ಓದಿ: ವಿಸ್ತರಣಾವಾದಿ ಚೀನಕ್ಕೆ ತಕ್ಕ ಪ್ರತ್ಯುತ್ತರ ಅಗತ್ಯ
ನಾವು ನಮ್ಮ ಮೈತ್ರಿಗಳನ್ನು ಪುನರುಜ್ಜೀವನಗೊಳಿಸಿದ್ದೇವೆ ಮತ್ತು ಹಿಂದೆಂದಿಗಿಂತಲೂ ಹೆಚ್ಚು ಚೀನಾದ ಎದುರು ನಿಲ್ಲುವಂತೆ ವಿಶ್ವ ರಾಷ್ಟ್ರಗಳನ್ನು ಒಟ್ಟುಗೂಡಿಸಿದ್ದೇವೆ ಎಂದು ಹೇಳಿದ ಟ್ರಂಪ್, ಹೊಸ ಯುದ್ಧಗಳನ್ನು ಪ್ರಾರಂಭಿಸದ ದಶಕಗಳಲ್ಲಿ ಮೊದಲ ಅಧ್ಯಕ್ಷನಾಗಿರುವುದಕ್ಕೆ ನಾನು ವಿಶೇಷವಾಗಿ ಹೆಮ್ಮೆಪಡುತ್ತೇನೆ ಎಂದರು.