Advertisement

Donald Trump: ಅಟ್ಲಾಂಟಾ ಕೋರ್ಟ್‌ಗೆ ಟ್ರಂಪ್‌ ಶರಣು

09:03 PM Aug 22, 2023 | Team Udayavani |

ವಾಷಿಂಗ್ಟನ್‌: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಂಕಷ್ಟ ಮುಗಿಯುವಂತೆ ಕಾಣುತ್ತಿಲ್ಲ. ಅವರು ಜಾರ್ಜಿಯ ಪ್ರಾಂತ್ಯದ ಅಟ್ಲಾಂಟ ನ್ಯಾಯಾಲಯಕ್ಕೆ ಗುರುವಾರ ಶರಣಾಗಲಿದ್ದಾರೆ. ಜಾರ್ಜಿಯ ಪ್ರಾಂತ್ಯದಲ್ಲಿ 2020ರ ಅಧ್ಯಕ್ಷೀಯ ಚುನಾವಣೆ ಫ‌ಲಿತಾಂಶವನ್ನು ಅಕ್ರಮವಾಗಿ ತಿದ್ದಲು ಯತ್ನಿಸಿದ ಆರೋಪ ಅವರ ಮೇಲಿದೆ. ಈ ಬಗ್ಗೆ ಅವರು ಜಾಲತಾಣಗಳಲ್ಲಿ “ನೀವು ನಂಬುತ್ತೀರಾ? ನಾನು ಗುರುವಾರ ಜಾರ್ಜಿಯದ ಅಟ್ಲಾಂಟಕ್ಕೆ ಬಂಧನಕ್ಕೊಳಗಾಗಲು ಹೋಗುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

Advertisement

ಅವರು ಕೋರ್ಟ್‌ಗೆ ಶರಣಾಗತರಾದರೂ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಲಿದ್ದಾರೆ. ನಿಯಮಿತವಾಗಿ ನ್ಯಾಯಾಲಯಕ್ಕೆ ಹಾಜರಾಗುವ ಷರತ್ತಿನ ಆಧಾರದಲ್ಲಿ ಹೊರಗೆಯೇ ಇರಲಿದ್ದಾರೆ. ಆದರೆ ಬಾಂಡ್‌ನ‌ಲ್ಲಿ ಅವರು ಹಲವು ಷರತ್ತುಗಳಿಗೆ ಸಹಿ ಹಾಕಲಿದ್ದಾರೆ. ಸಾಕ್ಷಿಗಳು, ಇತರೆ ಅರ್ಜಿದಾರರ ಮೇಲೆ ಯಾವುದೇ ರೀತಿಯ ಒತ್ತಡ ಹಾಕುವುದು, ಕಿರಿಕಿರಿ ಮಾಡುವುದನ್ನು ಮಾಡುವಂತಿಲ್ಲ. ಹಾಗೆಯೇ ಸಾಮಾಜಿಕ ತಾಣದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಸ್ಟ್‌, ರೀಪೋಸ್ಟ್‌ ಮಾಡುವಂತಿಲ್ಲ. ಯಾರನ್ನೂ ಗುರಿಯಾಗಿಸಿಕೊಂಡು ತೊಂದರೆ ನೀಡುವಂತಿಲ್ಲ ಎಂದು ಹೇಳಲಾಗಿದೆ.

ಏ. 4ರ ಬಳಿಕ ಟ್ರಂಪ್‌ ಅವರು ನಾಲ್ಕನೇ ಬಾರಿಗೆ ಕೋರ್ಟ್‌ ಮುಂದೆ ಹಾಜರಾಗಿ ಜಾಮೀನು ಪಡೆದುಕೊಳ್ಳಲಿದ್ದಾರೆ ಟ್ರಂಪ್‌.

Advertisement

Udayavani is now on Telegram. Click here to join our channel and stay updated with the latest news.

Next