Advertisement

ಮಾಸ್ಕ್ ತಯಾರಿಕೆ ಫ್ಯಾಕ್ಟರಿಗೆ ಭೇಟಿ…ಆದರೆ ಮಾಸ್ಕ್ ಧರಿಸಲು ಡೊನಾಲ್ಡ್ ಟ್ರಂಪ್ ನಕಾರ!

08:09 AM May 07, 2020 | Nagendra Trasi |

ವಾಷಿಂಗ್ಟನ್:ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಕೋವಿಡ್ 19 ವೈರಸ್ ಅಟ್ಟಹಾಸ ಮುಂದುವರಿದಿದೆ. ಏತನ್ಮಧ್ಯೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅರಿಝೋನಾದಲ್ಲಿರುವ ಮಾಸ್ಕ್ ತಯಾರಿಕಾ ಫ್ಯಾಕ್ಟರಿಗೆ ಭೇಟಿ ನೀಡಿದ್ದರು. ಆದರೆ ಈ ಸಂದರ್ಭದಲ್ಲಿ ಮಾಸ್ಕ್ ಹಾಕಿಕೊಳ್ಳಲು ಟ್ರಂಪ್ ನಿರಾಕರಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

Advertisement

ಕೋವಿಡ್ 19 ವೈರಸ್ ನಿಧಾನಕ್ಕೆ ಎಲ್ಲೆಡೆ ಹರಡುತ್ತಿರುವುದರಿಂದ ಅಮೆರಿಕನ್ ರು ಸಂಚಾರವನ್ನು ಕಡಿಮೆ ಮಾಡಿದ್ದಾರೆ. ಆದರೆ ಇದೀಗ ಚುನಾವಣೆ ಮೇಲೆ ಕಣ್ಣಿಟ್ಟಿರುವ ಟ್ರಂಪ್ ಅರಿಝೋನಾ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ಅರಿಝೋನಾದಲ್ಲಿನ ಹನಿವೆಲ್ ಇಂಟರ್ ನ್ಯಾಷನಲ್ ಫ್ಯಾಕ್ಟರಿಯಲ್ಲಿ ಎನ್ 95 ಮಾಸ್ಕ್ ತಯಾರಿಸಲಾಗುತ್ತದೆ.

ಪಿಪಿಇ (ಪ್ರೊಟೆಕ್ಟಿವ್ ಎಕ್ವಿಪ್ ಮೆಂಟ್) ಮತ್ತು ಮಾಸ್ಕ್ ಕೊರತೆಯಾಗಿದ್ದು, ಐದು ವಾರಗಳಲ್ಲಿ ಹೆಚ್ಚಿನ ಮಾಸ್ಕ್ ತಯಾರಿಸುವಂತೆ ಫ್ಯಾಕ್ಟರಿಯಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ.

ಫ್ಯಾಕ್ಟರಿ ಭೇಟಿ ವೇಳೆ ಡೊನಾಲ್ಡ್ ಟ್ರಂಪ್ ರಕ್ಷಣೆಗಾಗಿ ಕನ್ನಡ ಹಾಕಿಕೊಂಡಿದ್ದರು. ಆದರೆ ಮಾಸ್ಕ್ ಧರಿಸಲು ನಿರಾಕರಿಸಿದ್ದರು. ಫ್ಯಾಕ್ಟರಿ ಮುಂಭಾಗದಲ್ಲಿ… ಎಚ್ಚರಿಕೆ-ಈ ಪ್ರದೇಶದಲ್ಲಿ ಮಾಸ್ಕ್ ಅತ್ಯಗತ್ಯ. ಧನ್ಯವಾದಗಳು ಎಂಬ ಫಲಕ ಹಾಕಲಾಗಿದೆ ಎಂದು ವರದಿ ವಿವರಿಸಿದೆ.

ಡೊನಾಲ್ಡ್ ಟ್ರಂಪ್ ಜತೆ ಶ್ವೇತ ಭವನದ ಮುಖ್ಯ ಸಿಬ್ಬಂದಿ ಮಾರ್ಕ್ ಮೆಡೌಸ್ ಸೇರಿದಂತೆ ಹಲವು ಅಧಿಕಾರಿಗಳು ಜತೆಗಿದ್ದರು ಕೂಡಾ ಯಾರೂ ಮಾಸ್ಕ್ ಧರಿಸಿಲ್ಲವಾಗಿತ್ತು ಎಂದು ವರದಿ ತಿಳಿಸಿದೆ. ಹನಿವೆಲ್ ಫ್ಲ್ಯಾಂಟ್ ಗೆ ತೆರಳಿದ್ದ ಟ್ರಂಪ್ ಮಾಸ್ಕ್ ಧರಿಸಲು ನಿರಾಕರಿಸಿದ್ದು ಯಾಕೆ ಎಂಬ ಬಗ್ಗೆ ಶ್ವೇತಭವನ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Advertisement

ಒಂದು ವೇಳೆ ಅಮೆರಿಕದಲ್ಲಿ ಆರ್ಥಿಕ ಚಟುವಟಿಕೆ ಆರಂಭಗೊಂಡರೆ ಮತ್ತಷ್ಟು ಜನರು ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ಟ್ರಂಪ್ ಈ ವೇಳೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದರು. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಆರ್ಥಿಕ ಚಟುವಟಿಕೆ ಆರಂಭಿಸಿದರೆ ಸಾವಿನ ಸಂಖ್ಯೆ ಹೆಚ್ಚುತ್ತದೆ ಎಂಬ ಪ್ರಶ್ನೆಗೆ, ಹೌದು ಆ ಸಾಧ್ಯತೆ ಇದೆ. ಸ್ವಲ್ಪ ಮಂದಿ ಸಾವನ್ನಪ್ಪಬಹುದು ಎಂದು ತಿಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next