Advertisement

ಹರಿಯಾಣದ ಈ ಗ್ರಾಮದ ಮಹಿಳೆಯರಿಂದ ಟ್ರಂಪ್‌ ಪಡೆಯಲಿದ್ದಾರೆ 1001 ರಾಖಿ

05:52 PM Aug 05, 2017 | Team Udayavani |

ಹೊಸದಿಲ್ಲಿ : ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಹೆಸರನ್ನು ಸಾಂಕೇತಿಕವಾಗಿ ಹೊಂದಿರುವ ಹರಿಯಾಣದ ಮೇವಾತ್‌ ಪ್ರಾಂತ್ಯದ  ಮರೋರ ಗ್ರಾಮದ ಮಹಿಳೆಯರು ಟ್ರಂಪ್‌ ಅವರಿಗೆ 1001 ರಾಖೀಗಳನ್ನು ಕಳುಹಿಸಲಿದ್ದಾರೆ.

Advertisement

ಇದೇ ರೀತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ 501 ರಾಖೀಗಳನ್ನು ಕಳುಹಿಸುತ್ತಿದ್ದಾರೆ. ಇವರಿಬ್ಬರನ್ನೂ ಈ ಗ್ರಾಮದ ಮಹಿಳೆಯರು ತಮ್ಮ ಅಣ್ಣನೆಂಬ ಗೌರವಭಾವದಿಂದ ರಾಖೀ ಕಳುಹಿಸುತ್ತಿದ್ದಾರೆ. 

ಮರೋರ ಗ್ರಾಮವನ್ನು ಕೆಲ ಸಮಯದ ಹಿಂದೆ ದತ್ತು ತೆಗೆದುಕೊಂಡಿದ್ದ ಸುಲಭ್‌ ಇಂಟರ್‌ನ್ಯಾಶನಲ್‌ ಸೋಶಿಯಲ್‌ ಸರ್ವಿಸ್‌ ಆರ್ಗನೈಸೇಶನ್‌ (ಸಿಸ್ಕೋ) ಮುಖ್ಯಸ್ಥ ಬಿಂದೇಶ್ವರ್‌ ಪಾಠಕ್‌ ಅವರು ಈ ಗ್ರಾಮಕ್ಕೆ “ಟ್ರಂಪ್‌ ಗ್ರಾಮ’ ವೆಂದು ಹೆಸರಿಟ್ಟಿದ್ದರು. 

ಹೀಗೆ ನಾಮಕರಣ ಮಾಡುವ ಮೂಲಕ ಭಾರತ – ಅಮೆರಿಕ ನುಡವಿನ ಬಾಂಧವ್ಯ ಬಲಿಷ್ಠವಾಗಲೆಂಬ ಆಶಯ ಮರೋರ ಗ್ರಾಮದ ಜನರದ್ದಾಗಿತ್ತು. 

ಆದರೆ ಜಿಲ್ಲಾಡಳಿತವು “ಟ್ರಂಪ್‌ ಗ್ರಾಮ’ವೆಂದು ನಾಮಕರಣ ಮಾಡುವುದು ಕಾನೂನು ಪ್ರಕಾರ ಸರಿಯಲ್ಲ ಎಂದು ಹೇಳಿದ ಬಳಿಕ ಆ ಹೆಸರನ್ನು ಮತ್ತು ಫ‌ಲಕಗಳನ್ನು ತೆಗೆಯಲಾಗಿತ್ತು. 

Advertisement

ಹಾಗಿದ್ದರೂ ಈಗಲೂ ಜನರ ಬಾಯಲ್ಲಿ ಮರೋರ “ಟ್ರಂಪ್‌ ಗ್ರಾಮ’ವೆಂದೇ ಖ್ಯಾತವಾಗಿದೆ. ಸುಮಾರು 1,800 ಜನಸಂಖ್ಯೆಯನ್ನು ಹೊಂದಿರುವ ಈ ಗ್ರಾಮ ಗುರ್ಗಾಂವ್‌ನಿಂದ 60 ಕಿಮೀ. ದೂರದಲ್ಲಿದ್ದು ಪುನಹಾನಾ ತೆಹಶೀಲ್‌  ವ್ಯಾಪ್ತಿಗೆ ಒಳಪಡುತ್ತದೆ. 

ಪಾಠಕ್‌ ಅವರ ಎನ್‌ಜಿಓ ಮರೋರ ಗ್ರಾಮದ ಮಹಿಳೆಯರು ಮತ್ತು ಹುಡುಗಿಯರಿಗಾಗಿ ಅನೇಕ ಬಗೆಯ ಸಮಾಜ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದು ಗ್ರಾಮಸ್ಥರಲ್ಲಿ ಜನಪ್ರಿಯವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next