ವಾಷಿಂಗ್ಟನ್: ಅಮೆರಿಕದಲ್ಲಿ ಉಂಟಾಗಿರುವ ಹಿಂಸಾಚಾರ ನಿಯಂತ್ರಿ ಸಲು ಸೇನೆ ನಿಯೋಜಿಸುವುದಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ, ಆಫ್ರಿಕನ್ ಅಮೆರಿಕನ್ ಪ್ರಜೆ ಜಾರ್ಜ್ ಫ್ಲಾಯ್ಡ ಹತ್ಯೆಯಿಂದ ಉಂಟಾಗಿರುವ ಪರಿಸ್ಥಿತಿ ಮತ್ತಷ್ಟು ಕೈಮೀರುವಂತಾಗಿದೆ.
ಶ್ವೇತ ಭವನದ ರೋಸ್ ಗಾರ್ಡನ್‌ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿರುವ ಟ್ರಂಪ್, ಬೀದಿಗಳಲ್ಲಿನ ಪ್ರತಿಭಟನಕಾರರ ಪ್ರಾಬಲ್ಯ ತಡೆಯದಿದ್ದರೆ ಮತ್ತು ಗಲಭೆಕೋ ರರನ್ನು ನಿಗ್ರಹಿ ಸಲು ರಾಜ್ಯಗಳು ವಿಫಲ ವಾದರೆ ಸಾವಿರ ಸಾವಿರ ಸಂಖ್ಯೆಯ ಶಸ್ತ್ರ ಸಜ್ಜಿತ ಸೆ„ನಿಕರನ್ನು ಮತ್ತು ಕಾನೂನು ಜಾರಿ ಅಧಿಕಾರಿಗಳನ್ನು ನಿಯೋಜಿಸಿ, ಗಲಭೆ, ಲೂಟಿ, ವಿಧ್ವಂಸಕ ಕೃತ್ಯಗಳು, ಹಲ್ಲೆ ಮತ್ತು ಆಸ್ತಿಗೆ ಹಾನಿಮಾಡುವ ಪ್ರತಿ ಭ ಟ ನಕಾರರ ಹೆಡೆಮುರಿ ಕಟ್ಟುವುದಾಗಿ ತಿಳಿಸಿದ್ದಾರೆ.
“ಹಿಂಸಾತ್ಮಕ ಪ್ರತಿಭಟನೆ ನಿಯಂತ್ರಣಕ್ಕೆ ಬರು ವವರೆಗೂ ಕಟ್ಟುನಿಟ್ಟಿನ ಕಾನೂನು ಕ್ರಮಗಳನ್ನು ಜಾರಿಗೊಳಿಸಲು ಮೇಯರ್‌ಗಳು ಮತ್ತು ಗವರ್ನರ್‌ಗಳು ಗಮನಹರಿ ಸಬೇಕು. ಇಲ್ಲದಿದ್ದರೆ ಮಿಲಿಟರಿ ನಿಯೋ ಜಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ತರುವುದು ಹೇಗೆ ಎಂಬುದು ಗೊತ್ತಿದೆ’ ಎಂದಿದ್ದಾರೆ.
ಚರ್ಚ್‌ಗೆ ಭೇಟಿ: ಈ ನಡುವೆ ಪ್ರತಿಭಟನಾಕಾರರ ಆಕ್ರೋಶದ ಬೆಂಕಿಗೆ ತುತ್ತಾಗಿ ಭಾಗಶಃ ಹಾನಿಗೀಡಾಗಿರುವ ಐತಿಹಾಸಿಕ ಸೇಂಟ್ ಜಾನ್ಸ್ ಚರ್ಚ್‌ಗೆ ಅಧ್ಯಕ್ಷ ಟ್ರಂಪ್ ಸೋಮ ವಾರ ಭೇಟಿ ನೀಡಿ ಪರಿಶೀಲಿಸಿ ದರು. ಶ್ವೇತಭವನದ ಬಳಿ ಸಮೀಪದಲ್ಲಿನ ದಿ ಚರ್ಚ್ ಆಫ್ ದಿ ಪ್ರಸಿಡೆಂಟ್ಸ್ ಖ್ಯಾತಿಯ ಸೇಂಟ್ ಜಾನ್ಸ್ ಚರ್ಚ್‌ಗೆ ಗಲಭೆ ಕೋರರು ಬೆಂಕಿ ಹಚ್ಚಿದ್ದರು.
ಅಮೆರಿಕದಲ್ಲಿ ನ್ಯಾಯ ಕೋರಿ ಬೀದಿ ಗಿಳಿದಿರುವ ಪ್ರತಿಭಟನಕಾರರು ಹಿಂಸೆ ನಿಲ್ಲಿಸಿ ಶಾಂತಿಯ ಮಾರ್ಗ ಅನು ಸರಿಸುವಂತೆ ವಿಶ್ವಸಂಸ್ಥೆ ಮುಖ್ಯಸ್ಥ ಆಂಟೋ ನಿಯೊ ಗುಟೆರಸ್ ಮನವಿ ಮಾಡಿದ್ದಾರೆ. ಇನ್ನು ಸಿರಿಯಾದಲ್ಲೂ ಜಾರ್ಜ್ ಫ್ಲಾಯ್ಡ ಹತ್ಯೆ ಮತ್ತು ವರ್ಣಭೇದ ನೀತಿಗೆ ಆಕ್ರೋಶ ವ್ಯಕ್ತವಾಗಿದ್ದು, ಯುದ್ಧದಿಂದ ಹಾಳಾಗಿರುವ ಅರೆಬರೆ ಗೋಡೆಗಳ ಮೇಲೆ ಫ್ಲಾಯ್ಡ ಭಾವಚಿತ್ರ ಬಿಡಿಸಿ, ಐ ಕಾಂಟ್ ಬ್ರಿತ್ (ನಾನು ಉಸಿರಾಡಲು ಸಾಧ್ಯವಿಲ್ಲ) ಎಂದು ಬರೆಯಲಾಗಿದೆ.
ಕತ್ತು ಹಿಸುಕಿ ಮಾಡಿದ ನರಹತ್ಯೆ: ಕಪ್ಪು ವರ್ಣೀಯ ಸಮುದಾಯದ ಜಾರ್ಜ್ ಫ್ಲಾಯ್ಡನ ಕುತ್ತಿಗೆಗೆ ಮೊಣಕಾಲು ಒತ್ತಿ ಮಿನ್ನಿ ಪೊಲೀಸ್ ನಗ ರದ ಪೊಲೀಸ್ ಅಧಿಕಾರಿ ಮಾಡಿರುವ ಕೊಲೆ ಯನ್ನು ಒಂದು ನರಹತ್ಯೆ ಎಂದು ಶವ ಪರೀಕ್ಷೆ ವರದಿಯಲ್ಲಿ ಉಲ್ಲೇಖೀಸ ಲಾಗಿದೆ. ಹೃದಯ ಸ್ತಂಭನ, ಉಸಿರಾಟ ತಡೆಹಿಡಿಯುವಿಕೆ ಮತ್ತು ಕುತ್ತಿಗೆಯನ್ನು ಬಲವಾಗಿ ಹಿಸುಕಿದ್ದರಿಂದ ಫ್ಲಾಯ್ಡ ಮೃತಪಟ್ಟಿದ್ದಾನೆ ಎಂದು ವರದಿ ನೀಡಲಾಗಿದೆ.
ಅಧ್ಯಕ್ಷರೇ, ಧನಾತ್ಮಕವಾಗಿ ಸಲಹೆಗಳಿದ್ದರೆ ದಯವಿಟ್ಟು ನೀಡಿ. ಇಲ್ಲದಿದ್ದರೆ ಬಾಯಿ ಮುಚ್ಚಿ ಇರಿ. ಎಲ್ಲ ನಗರಗಳ ಪೊಲೀಸ್ ಆಯುಕ್ತರು ಮತ್ತು ಪ್ರಾಂತ್ಯಗಳ ಗವರ್ನರ್‌ಗಳ ಪರವಾಗಿ ಇದು ನನ್ನ ಮನವಿ.
-ಆರ್ಟ್ ಏಸ್‌ವೆಡೋ,
ಹ್ಯೂಸ್ಟನ್ ಪೊಲೀಸ್ ಆಯುಕ್ತ