Advertisement
ಫಲಿತಾಂಶವು ಡೆಮಾಕ್ರಾಟ್ ಅಭ್ಯರ್ಥಿ ಜೋ ಬೈಡೆನ್ ಪರ ವಾಲುತ್ತಲೇ, ಅಧಿಕಾರದ ಗದ್ದುಗೆಯನ್ನು ಬಿಟ್ಟು ಕೊಡಲು ಸಿದ್ಧರಿಲ್ಲದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚುನಾ ವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಈಗಾ ಗಲೇ ಕೋರ್ಟ್ ಮೆಟ್ಟಿಲೇರಿದ್ದಾರೆ. ಅಲ್ಲದೆ, “STOP THE COUNT’ (ಎಣಿಕೆ ನಿಲ್ಲಿಸಿ) ಎಂದು ಗುರುವಾರ ಟ್ವೀಟ್ ಕೂಡ ಮಾಡಿದ್ದಾರೆ. ಇದಾದ ಬೆನ್ನಲ್ಲೇ ಟ್ರಂಪ್ ಅವರ ಭಾರೀ ಸಂಖ್ಯೆಯ ಬೆಂಬಲಿಗರು, ಶಸ್ತ್ರಸಜ್ಜಿತ ರಾಗಿ ಬೀದಿಗಿಳಿದಿದ್ದಾರೆ. ಅರಿಜೋನಾದ ಮತ ಎಣಿಕೆ ಕೇಂದ್ರ ಗಳಿಗೆ ಮುತ್ತಿಗೆ ಹಾಕಿರುವ ಪ್ರತಿಭಟನಕಾರರು, ಎಣಿಕೆ ನಿಲ್ಲಿಸುವಂತೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ, ಏಕಾಏಕಿ ಅರಿಜೋನಾ ಮತ ಎಣಿಕೆ ಕೇಂದ್ರವನ್ನೇ ಮುಚ್ಚಲಾಗಿದೆ.
Related Articles
Advertisement
ಕಮಲಾ ತವರೂರಿನಲ್ಲಿ ಮೊಳಗಿದ ಪ್ರಾರ್ಥನೆಅಮೆರಿಕ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಡೆಮಾಕ್ರಾಟಿಕ್ ಪಕ್ಷದ ಕಮಲಾ ಹ್ಯಾರೀಸ್ ಗೆದ್ದುಬರಲೆಂದು ಹಾರೈಸಿ, ತವರೂರಿನ ದೇಗುಲದಲ್ಲಿ ಗುರುವಾರವಿಡೀ ಪ್ರಾರ್ಥನೆಗಳು ಮೊಳಗಿದ್ದವು. ಕಮಲಾರ ತಾಯಿ ಪೂರ್ವಜರ ಊರಾದ ತಿರುವರೂರು ಜಿಲ್ಲೆಯ ತುಳಸೇಂದ್ರಪುರಂನ ದೇವಸ್ಥಾನದಲ್ಲಿ ಊರ ಮಗಳ ಗೆಲುವಿಗೆ ಹಾರೈಸಿ ವಿಶೇಷ ಪೂಜೆ ನೆರವೇರಿಸಲಾಯಿತು. ಅಲ್ಲದೆ, ಊರಿನ ರಸ್ತೆಗಳಲ್ಲಿ ಬಣ್ಣಬಣ್ಣದ ರಂಗೋಲಿ ಪುಡಿಗಳಿಂದ “ಕಮಲಾ ಹ್ಯಾರೀಸ್‌ಗೆ ಶುಭ ಹಾರೈಸೋಣ’ ಎಂಬ ಸಾಲುಗಳು ಕಳೆಗಟ್ಟಿದ್ದವು. ಕಮಲಾರ ತಾತ ಪಿ.ವಿ. ಗೋಪಾಲನ್ ತುಳಸೇಂದ್ರಪುರದವರು. “ನಾನು ಐದನೇ ವಯಸ್ಸಿನಲ್ಲಿ ಹುಟ್ಟೂರಿಗೆ ತೆರಳಿದ್ದೆ. ಮದ್ರಾಸಿನ ಬೀಚ್‌ಗಳಲ್ಲಿ ತಾತನ ಕೈಕೈಹಿಡಿದು ವಿಹರಿಸುತ್ತಿದ್ದೆ’ ಎಂದು ಚುನಾವಣೆ ಪೂರ್ವದಲ್ಲಿ ಕಮಲಾ ಸ್ಮರಿಸಿದ್ದು, ಊರಿನವರ ಹೃದಯದಲ್ಲಿ ಹಸುರಾಗಿದೆ. ಕಮಲಾ ತಾಯಿ ಶ್ಯಾಮಲಾ ಉನ್ನತ ಶಿಕ್ಷಣಕ್ಕಾಗಿ ಅಮೆರಿಕ ಸೇರಿ, ಜಮೈಕಾ ಮೂಲದ ಡೊನಾಲ್ಡ್ ಹ್ಯಾರಿಸ್‌ರನ್ನು ವರಿಸಿ ಅಲ್ಲಿಯೇ ನೆಲೆಸಿದ್ದರು. ಟ್ರಂಪ್ ಪಾರು ಮಾಡಲು ಬಂದ ದೇವದೂತರು!
ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ರನ್ನು ಸೋಲಿನ ದವಡೆಯಿಂದ ಪಾರು ಮಾಡಲು ದೇವದೂತರು ಆಫ್ರಿಕಾದಿಂದ ಅಮೆರಿಕದತ್ತ ಧಾವಿಸುತ್ತಿದ್ದಾರೆ! ಹೀಗೆ ಹೇಳಿ, ಟ್ರಂಪ್‌ರನ್ನು ಸಂತೈಸುತ್ತಿರುವುದು ಅವರ ಅಧ್ಯಾತ್ಮಿಕ ಸಲಹೆಗಾರ್ತಿ ಪೌಲಾ ವೈಟ್! ಟ್ರಂಪ್ ಮತ್ತೆ ಗದ್ದುಗೆಗೇರುವ ಸಲುವಾಗಿ ಈಕೆ ನಡೆಸಿದ ಪ್ರಾರ್ಥನೆ ಭಾರೀ ವೈರಲ್ ಆಗಿದೆ. “ನಾನು ವಿಜಯದ ಸದ್ದನ್ನು ಕೇಳುತ್ತಿದ್ದೇನೆ. ದೇವರೇ ಹೇಳಿದ್ದಾನೆ, ಆ ಗೆಲುವು ಈಗಾಗಲೇ ಘಟಿಸಿದೆ. ರಿಪಬ್ಲಿಕನ್‌ಗೆ ಸೋಲುಣಿಸಲು ರಕ್ಕಸಕೂಟಗಳು ಹೋರಾಡುತ್ತಿವೆ. ಆದರೆ, ಟ್ರಂಪ್‌ರನ್ನು ಗೆಲ್ಲಿಸುವುದಕ್ಕಾಗಿಯೇ ಆಫ್ರಿಕದಿಂದ ಯೇಸುವಿನ ದೇವದೂತರು ಇಲ್ಲಿಗೆ ಆಗಮಿಸುತ್ತಿದ್ದಾರೆ’ ಎಂಬ ಈಕೆಯ ಹೇಳಿಕೆ ಸಿಕ್ಕಾಪಟ್ಟೆ ಸುದ್ದಿಮಾಡಿದೆ. ನೆಟ್ಟಿಗರು ಇದೊಂದು “ಅರ್ಥಹೀನ ಪ್ರಾರ್ಥನೆ’ ಎಂದು ಟೀಕಿಸುತ್ತಿದ್ದಾರೆ.