Advertisement

ಶ್ವೇತಭವನದ ಮುಂದೆ ಘರ್ಷಣೆ : ವ್ಯಕ್ತಿಗೆ ಇರಿತ

11:16 PM Nov 15, 2020 | mahesh |

ವಾಷಿಂಗ್ಟನ್‌: ಅಮೆರಿಕ ಚುನಾವಣೆಯಲ್ಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೋಲೊಪ್ಪಿಕೊಳ್ಳುವ ಸೂಚನೆ ನೀಡಿದರೂ, ಅವರ ಬೆಂಬಲಿಗರು ವಾಷಿಂಗ್ಟನ್‌ನಲ್ಲಿ ಶನಿವಾರ ಭಾರೀ ಪ್ರತಿಭಟನೆ ನಡೆಸಿದ್ದಾರೆ. ಇದು ಕೊನೆಗೆ ಟ್ರಂಪ್‌ ಬೆಂಬಲಿಗರು ಮತ್ತು ಪ್ರತಿಸ್ಪರ್ಧಿ ಗುಂಪಿನ ನಡುವಿನ ಹಿಂಸಾಚಾರವಾಗಿ ಬದಲಾಗಿದ್ದು, 20 ವರ್ಷದ ಯುವಕನೊಬ್ಬನಿಗೆ ಚೂರಿ ಇರಿದ ಘಟನೆಯೂ ನಡೆದಿದೆ. ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹಿಂಸಾಚಾರ ಹಿನ್ನೆಲೆಯಲ್ಲಿ ಪೊಲೀಸರು ಕನಿಷ್ಠ 20 ಮಂದಿಯನ್ನು ಬಂಧಿಸಿದ್ದಾರೆ.

Advertisement

ನ.3ರಂದು ನಡೆದ ಅಧ್ಯಕ್ಷೀಯ ಚುನಾವಣೆಯ ಫ‌ಲಿತಾಂಶದಲ್ಲಿ ಅಕ್ರಮ ನಡೆದಿದೆ ಎನ್ನುವುದು ಟ್ರಂಪ್‌ ಆರೋಪ. ಅವರ ದೂರುಗಳಿಗೆ ಸ್ಪಷ್ಟತೆ ಇರದಿದ್ದರೂ, ತಮ್ಮ ಮಾತು ಸರಿ ಎಂದು ಪ್ರತಿಪಾದಿಸುವ ನಿಟ್ಟಿನಲ್ಲಿ ಬೆಂಬಲಿಗರ ಮೂಲಕ ವಾಷಿಂಗ್ಟನ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. “ಮಿಲಿಯನ್‌ ಮೆಗಾ ಮಾರ್ಚ್‌’ ಎಂದು ಹೆಸರಿಸಲಾಗಿದ್ದ ಈ ಪ್ರತಿಭಟನೆ ವೇಳೆ ಭಾರೀ ಪ್ರಮಾಣದಲ್ಲಿ ಘರ್ಷಣೆ ನಡೆದಿದೆ. ವಿಶೇಷವೆಂದರೆ, ಶ್ವೇತ ಭವನದ ಸಮೀಪವೇ ಈ ಬೆಳವಣಿಗೆ ನಡೆದಿದೆ.

ಜೋ ಬೈಡೆನ್‌ ಅವರ ಜಯವನ್ನು ಖಂಡಿಸಿ ಆಯೋಜಿಸಲಾಗಿದ್ದ ಕಾರ್ಯಕ್ರಮ ಬಿರುಸಿನ ಪ್ರತಿಭಟನೆಗೆ ತಿರುಗಿಕೊಂಡಿತು. ಇದೇ ವೇಳೆ, ಟ್ರಂಪ್‌ ಬೆಂಬಲಿಗರ ಮೇಲೆ ಮೊಟ್ಟೆಯನ್ನು ಎಸೆದ ಘಟನೆಯೂ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಆಗಿರುವ ವಿಡಿಯೋದಲ್ಲಿ ಎರಡೂ ಗುಂಪುಗಳು ಬೂಟುಗಳ ಎಸೆಯುವಿಕೆ, ತಳ್ಳಾಟದಲ್ಲಿ ಭಾಗಿಯಾಗಿದ್ದು ಕಂಡುಬಂದಿವೆ.

Advertisement

Udayavani is now on Telegram. Click here to join our channel and stay updated with the latest news.

Next