Advertisement

ಗೂಗಲ್‌ ಬಗ್ಗೆ ಟ್ರಂಪ್‌ ಕಿಡಿ

04:58 PM Aug 29, 2018 | Team Udayavani |

ವಾಷಿಂಗ್ಟನ್‌: ಇಂಟರ್ನೆಟ್‌ ಸರ್ಚ್‌ ಎಂಜಿನ್‌ ಗೂಗಲ್‌ ತಮ್ಮ ವಿರುದ್ಧವಾಗಿರುವ ಮಾಹಿತಿಯನ್ನೇ ಸಿಗುವಂತೆ ಮಾಡುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆರೋಪಿಸಿದ್ದಾರೆ. ಟ್ರಂಪ್‌ರ ಈ ಆರೋಪವು ಆನ್‌ಲೈನ್‌ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿ ದ್ದಂತೆ ಕ್ಷಣ ಮಾತ್ರದಲ್ಲಿಯೇ ಪ್ರತಿಕ್ರಿಯೆ ನೀಡಿದ ಗೂಗಲ್‌, ಟ್ರಂಪ್‌ ಆರೋಪವನ್ನು ತಿರಸ್ಕರಿಸಿದೆ. ಟ್ವೀಟ್‌ ಮಾಡಿದ್ದ ಟ್ರಂಪ್‌, “ನನ್ನ ವಿರುದ್ಧ ನಕಾರಾತ್ಮಕ ಸುದ್ದಿ-ಮಾಹಿತಿಗಳೇ ಸರ್ಚ್‌ನಲ್ಲಿ ಬರುತ್ತಿವೆ. ಇಂಥ ಸುದ್ದಿ, ಮಾಹಿತಿಗಳು ಶೇ.96ರಷ್ಟು ಎಡಪಂಥೀಯ ಧೋರಣೆ ಹೊಂದಿರುವ ಮಾಧ್ಯಮಗಳಿಂದ ಬರುತ್ತದೆ. ಅವುಗಳು ಸತ್ಯಕ್ಕಿಂತ ದೂರವಾಗಿರುತ್ತವೆ’ ಎಂದು ಟ್ವೀಟ್‌ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಗೂಗಲ್‌ ವಕ್ತಾರರು, ಸರ್ಜ್‌ ಎಂಜಿನ್‌ ಅನ್ನು ರಾಜಕೀಯ ದಾಳವಾಗಿ ಬಳಸಲಾಗುತ್ತಿಲ್ಲ.

Advertisement

ಯಾವುದೇ ರಾಜಕೀಯ ಸಿದ್ಧಾಂತದ ಪರ ಅಥವಾ ವಿರುದ್ಧ ವರ್ತಿಸುವುದಿಲ್ಲ. ಹೀಗಾಗಿ ಆರೋಪ ನಿರಾಧಾರ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next