Advertisement

ಸುಂಕ ಬಿಕ್ಕಟ್ಟು ಶಮನಕ್ಕೆ ಚೀನ ಅಧ್ಯಕ್ಷ ಕ್ಸಿ ಭೇಟಿಯಾಗುವ ಟ್ರಂಪ್‌

10:08 AM Feb 01, 2019 | udayavani editorial |

ವಾಷಿಂಗ್ಟನ್‌ : ವಾಣಿಜ್ಯ ಸುಂಕ ಬಿಕ್ಕಟ್ಟನ್ನು ಬಗೆಹರಿಸುವ ನಿರ್ಣಾಯಕ ಸಭೆ ಯಾವುದೇ ಫ‌ಲಶ್ರುತಿ ಕಾಣದೆ ಮುರಿದು ಬಿದ್ದಿರುವ ಕಾರಣ ತಾನು ಶೀಘ್ರವೇ ಖುದ್ದಾಗಿ  ಚೀನದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರನ್ನು ಭೇಟಿಯಾಗುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. 

Advertisement

ಅಮೆರಿಕ -ಚೀನ ವಾಣಿಜ್ಯ ಸುಂಕ ಬಿಕ್ಕಟ್ಟು ನಿವಾರಣೆಯಾಗದ ಕಾರಣ ಜಾಗತಿಕ ಆರ್ಥಿಕತೆ ಸಂಕಷ್ಟಕ್ಕೆ ಸಿಲುಕಿದೆ. ಆದುದರಿಂದ ವಿಶ್ವದ ಅತೀ ದೊಡ್ಡ ಆರ್ಥಿಕ ಶಕ್ತಿಗಳಾಗಿರುವ ಅಮೆರಿಕ ಮತ್ತು ಚೀನ ದೊಡ್ಡ ಡೀಲ್‌ ಸಾಧಿಸುವ ನಿಟ್ಟಿನಲ್ಲಿ ಉನ್ನತ ಮಟ್ಟದಲ್ಲಿ ಮಾತುಕತೆ ನಡೆಸುವುದು ಅಗತ್ಯವಾಗಿದೆ ಎಂದು ಟ್ರಂಪ್‌ ಹೇಳಿದರು. 

ಕಳೆದ ವರ್ಷ ಟ್ರಂಪ್‌ ಅವರು ಅಮೆರಿಕ ಆಮದಿಸಿಕೊಳ್ಳುವ 250 ಶತಕೋಟಿ ಡಾಲರ್‌ ಚೀನೀ ಉತ್ಪನ್ನಗಳ ಮೇಲೆ ಶೇ.25ರ ವರೆಗೆ ಸುಂಕ ಹೇರಿದ್ದರು. ಇದರ ಪರಿಣಾಮವಾಗಿ ಚೀನ ತಾನು ಆಮದಿಸಿಕೊಳ್ಳುವ 110 ಶತಕೋಟಿ ಅಮೆರಿಕನ್‌ ಉತ್ಪನ್ನಗಳ ಮೇಲೆ ಅಷ್ಟೇ ಪ್ರಮಾಣದ ಸುಂಕವನ್ನು ಹೇರಿತ್ತು. 

ಈಚೆಗೆ ಆರ್ಜೆಂಟೀನಾದಲ್ಲಿ ನಡೆದ ಜಿ-20 ಸಮಾವೇಶದ ಪಾರ್ಶ್ವದಲ್ಲಿ ಟ್ರಂಪ್‌ ಮತ್ತು ಕ್ಸಿ ಅವರು ಜನವರಿ 1ರಿಂದ ತೊಡಗಿ 90 ದಿನಗಳ ವರೆಗೆ ಇನ್ನಷ್ಟು ಸುಂಕ ಹೇರದಿರಲು ಒಪ್ಪಿಕೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next