ವಾಷಿಂಗ್ಟನ್ ಡಿಸಿ: ಅಮೇರಿಕ ಸಂಯುಕ್ತ ಸಂಸ್ಥಾನವು ವಿಶ್ವ ಆರೋಗ್ಯ ಸಂಸ್ಥೆಯೊಡನೆಯ ಸಂಬಂಧವನ್ನು ಕಡಿದುಕೊಂಡಿದೆ. ಕೋವಿಡ್-19 ವೈರಸ್ ನಿಭಾಯಿಸುವ ವಿಚಾರದಲ್ಲಿ ಆರೋಗ್ಯ ಸಂಸ್ಥೆಯೊಡನೆ ಸಂಬಂಧವನ್ನು ಕೊನೆಗೊಳಿಸುತ್ತಿದ್ದೇವೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಕೋವಿಡ್-19 ವಿಚಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಚೀನಾದೊಂದಿಗೆ ಪಕ್ಷಪಾತ ಮಾಡುತ್ತಿದೆ ಎಂದು ಅಮೇರಿಕಾ ಟೀಕೆ ಮಾಡುತ್ತಲೇ ಬಂದಿದೆ. ಪ್ರತೀ ವರ್ಷ ಆರೋಗ್ಯ ಸಂಸ್ಥೆ 300 ಕೋಟಿ ರೂ. ನೀಡುತ್ತಿದೆ. ಆದರೆ, ನಾವು 3000 ಕೋಟಿ ರೂ. ನೀಡುತ್ತಿದ್ದೇವೆ. ಆದಾಗ್ಯೂ ಆರೋಗ್ಯ ಸಂಸ್ಥೆಯ ಮೇಲೆ ಚೀನಾ ಸಂಪೂರ್ಣ ನಿಯಂತ್ರಣ ಹೊಂದಿದೆ ಎಂದು ಟ್ರಂಪ್ ಕಿಡಿಕಾರಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಗೆ ನೀಡುವ ಹಣವನ್ನು ಇನ್ನು ಮುಂದೆ ಜಾಗತಿಕ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಬೇರೆ ಸಂಸ್ಥೆಗಳಿಗೆ ಅಮೇರಿಕದಿಂದ ಹಣ ನೀಡಲಾಗುತ್ತದೆ ಎಂದು ಟ್ರಂಪ್ ಹೇಳಿದ್ದಾರೆ.
ಆರೋಗ್ಯ ಸಂಸ್ಥೆಯು ಚೀನಾ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂಬುದನ್ನೂ ಪುನರುಚ್ಛರಿಸಿದ ಟ್ರಂಪ್, ಚೀನಾದಂತೆ ಕೋವಿಡ್-19 ವೈರಸ್ ಪ್ರಪಂಚಾದ್ಯಂತ ಹರಡಲು ವಿಶ್ವ ಆರೋಗ್ಯ ಸಂಸ್ಥೆ ಕೂಡ ಕಾರಣ ಎಂದು ಆರೋಪಿಸಿದ್ದಾರೆ.
ಹಾಂಗ್ ಕಾಂಗ್ ಇಡೀ ಜಗತ್ತಿಗೆ ಕೋವಿಡ್-19 ಸೋಂಕನ್ನು ಹರಡಿದೆ. ಇದರಿಂದ ಅಮೇರಿಕಾದ ಲಕ್ಷಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಚೀನಾದೊಂದಿಗೆ ಯಾವುದೇ ವ್ಯವಹಾರ ಇಟ್ಟುಕೊಳ್ಳದಂತೆ ತಮ್ಮ ಸರ್ಕಾರಕ್ಕೆ ಸೂಚಿಸಲಾಗಿದೆ. ಚೀನಾದಿಂದ ಬರುವ ವಿದ್ಯಾರ್ಥಿಗಳಿಗೂ ನಿಷೇಧ ಹೇರುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ಟ್ರಂಪ್ ತಿಳಿಸಿದರು.