ವಾಷಿಂಗ್ಟನ್ ; ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಂದು ತಮ್ಮ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಲೆ| ಜನರಲ್ ಎಚ್ ಆರ್ ಮೆಕ್‌ಮಾಸ್ಟರ್ ಅವರನ್ನು ವಜಾಗೊಳಿಸಿ ಅವರ ಸ್ಥಾನದಲ್ಲಿ ವಿಶ್ವಸಂಸ್ಥೆಯ ಮಾಜಿ ರಾಯನಾರಿ ಜಾನ್ ಬೋಲ್ಟನ್ ಅವರನ್ನು ನೇಮಿಸಿದರು.
ಇದು ಶ್ವೇತ ಭವನದಲ್ಲಿ ನಡೆದಿರುವ ಹೊಸ ಉನ್ನತ ಮಟ್ಟದ ದೊಡ್ಡ ಬದಲಾವಣೆ ಎಂದು ತಿಳಿಯಲಾಗಿದೆ. ಕಳೆದ ವಾರವೇ ಮೆಕ್‌ಮಾಸ್ಟರ್ ಅವರನ್ನು ಎತ್ತಂಗಡಿ ಮಾಡಲಾಗುವುದೆಂಬ ಊಹಾಪೋಹಗಳು ದಟ್ಟವಾಗಿದ್ದವು. ಆದರೆ ಶ್ವೇತ ಭವನ ಅದನ್ನು ಅಲ್ಲಗಳೆದಿತ್ತು.
ಇಂದು ಟ್ರಂಪ್ ಅವರು ದಿಢೀರನೆ ಟ್ವಿಟರ್ ಮೂಲಕ ಬಾಂಬ್ ಹಾಕಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೆಕ್ ಮಾಸ್ಟರ್ ಅವರನ್ನು ಕಿತ್ತಿರುವುದಾಗಿಯೂ ಅವರ ಸ್ಥಾನದಲ್ಲಿ ಜಾನ್ ಬೋಲ್ಟನ್ ಅವರನ್ನು ನೇಮಿಸಿರುವುದಾಗಿಯೂ ಬಹಿರಂಗಪಡಿಸಿದ್ದಾರೆ.